Published on: November 15, 2022

ಕಿನ್ನಾಳ ಕಾಮಧೇನು

ಕಿನ್ನಾಳ ಕಾಮಧೇನು

http://rhythmsfitness.com/about-rhythms-fitness-studio/ ಸುದ್ದಿಯಲ್ಲಿ  ಏಕಿದೆ?

Boom ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ವೊಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಕೈಜೋಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆಯ ಕಾಮಧೇನುವನ್ನು ಉಡುಗೊರೆಯಾಗಿ  ನೀಡಿದ್ದಾರೆ.

ವೊಕಲ್‌ ಫಾರ್‌ ಲೋಕಲ್‌ ಅಭಿಯಾನ

  • ಸ್ವಾವಲಂಬಿ ಭಾರತ ನಿರ್ಮಿಸಲು ಸ್ಥಳೀಯ ಜನರ ಜೀವನ ಸುಧಾರಿಸಲು ವೊಕಲ್‌ ಫಾರ್‌ ಲೋಕಲ್‌ ಕಾರ್ಯಕ್ರಮ ಜಾರಿಗೆ ತಂದಿರುವುದು ಸ್ಥಳಿಯ ರೈತರ, ಕರಕುಶಲ ಕಾರ್ಮಿಕರ, ಸ್ಥಳೀಯ ವ್ಯಾಪಾರಸ್ಥರ ಜೀವನ ಮಟ್ಟ ಸುಧಾರಿಸಲು ಇದು ಸಹಾಯಕಾರಿಯಾಗಿದೆ

‘ಕಿನ್ನಾಳ’

  • ಕೊಪ್ಪಳವನ್ನು ಮೊದಲು ‘ಕೊಪಣಚಳ ಎಂದು ಕರೆಯಲಾಗುತ್ತಿತ್ತು. ಈ ಜಿಲ್ಲೆಯ ಒಂದು ಚಿಕ್ಕ ಗ್ರಾಮವೇ ಕಿನ್ನಾಳ. ಈ ಗ್ರಾಮ ಕರಕುಶಲ ಕಲೆಗೆ ಹೆಸರುವಾಸಿ .
  • ‘ಕಿನ್ನಾಳ’ ಎಂದರೆ ‘ಆಟಿಕೆ’ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. “ಕಚ್ಚಾವಸ್ತುಗಳನ್ನು ಬಳಸಿ ಆಟಿಕೆಗಳ ವಸ್ತುಗಳಿಗೆ ವಾಸ್ತವಿಕ  ಮತ್ತು ವಿನ್ಯಾಸವನ್ನು ಕರಕುಶಲ ಸ್ಪರ್ಶ ನೀಡುವ ಕಲೆ ಕಿನ್ನಾಳ ಕಲೆ”.
  • ಕಿನ್ನಾಳ ಕುಶಲ ಕರ್ಮಿಗಳನ್ನು ಚಿತ್ರಕಾರರು ಎಂದು ಸಹ ಕರೆಯಲಾಗುತ್ತದೆ. ವಿಜಯ ನಗರ ಸಾಮ್ರಾಜ್ಯದ ಅರಸರು ಹಾಗೂ ಹೈದ್ರಾಬಾದ್ ನಿಜಾಮನ್ ಕಾಲದ ಈ ಕಿನ್ನಾಳ ಕಲೆಗೆ ಬಹು ಬೇಡಿಕೆ ಮತ್ತು ಪ್ರೊತ್ಸಾಹ ಇತ್ತು ಎನ್ನಲಾಗುತ್ತದೆ.

ಕಿನ್ನಾಳ ಕಲೆಯ ಇತಿಹಾಸ-ಹಿನ್ನೆಲೆ

  • ಕಿನ್ನಾಳ ಕಲೆ ಭಾರತದ ಭೌಗೋಳಿಕ ಚಿಹ್ನೆಗಳ ಪಟ್ಟಿಯಲ್ಲಿ ಸೇರಿದೆ.
  • ಕಿನ್ನಾಳ ಒಂದು ಕಾಲದ ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿತ್ತೆಂದು ಹಂಪಿಯ ಪಂಪಾ ಪತೇಶ್ವರ ದೇವಾಲಯದ ಮರದ ರಥದಲ್ಲಿ ಕೆತ್ತಲಾದ ಮ್ಯೂ ರಲ್ ವರ್ಣ ಚಿತ್ರಗಳು ಸೇರಿದಂತೆ  ವಿವಿಧ ಕೆತ್ತನೆಗಳ ಮೂಲಕ ತಿಳಿಯುತ್ತೇವೆ.
  • ಹಿಂದಿನ ಕಾಲದ ಜನರು ಬೊಂಬೆಗಳನ್ನು ವಿವಿಧ ವೃತ್ತಿಗಳ ಆಧಾರದಲ್ಲಿ ತಯಾರಿಸುವುದು ಜನಪ್ರಿಯವಾಗಿತ್ತು. ಪ್ರಾಣಿ , ಪಕ್ಷಿಗಳು ಗರುಡ, ಮಹಾ ಕಾವ್ಯದ ಹಕ್ಕಿ , ವಿವಿಧ ದೇವರ ಮೂರ್ತಿಗಳು , ಹಬ್ಬದ ಋತುವಿನಲ್ಲಿ ವಿವಿಧ ಮಣ್ಣಿನ ಆಟಿಕೆಗಳು ಮತ್ತು ಚಿತ್ರಗಳನ್ನು ತಯಾರಿಸುತ್ತಿದ್ದರು. ವಿಜಯ ನಗರದ ಅರಸರ ಕಾಲಕ್ಕಿಂತಲೂ ಹಿಂದೆಯೇ ಈ ಕಲೆ ಇತ್ತು ಎನ್ನಲಾಗಿದೆ.

ಕಿನ್ನಾಳ ಕಲೆಯ ಮಹತ್ವ

  • ಕಿನ್ನಾಳ ಕಲೆ ಭಾರತೀಯ ಸಂಸ್ಕೃತಿಯ  ಪ್ರತೀಕ, ಸಾಹಿತ್ಯ ಹಾಗೂ ಪರಂಪರೆ ಬೆಳೆಸುವಲ್ಲಿ ಸಹಕಾರಿ  .
  • ಅಲ್ಪ ಬಂಡವಾಳ ಹೂಡಿ ದೇಶಿಯ ಸಂಪನ್ಮೂಲಗಳ ಬಳಕೆ ಮಾಡಿಕೊಳ್ಳುವ ಕಲೆ.
  • ಒಬ್ಬ ಕಲಾವಿದನಿಂದ ತನ್ನ ಮನೆಯ ಇತರೆ ಸದಸ್ಯರಿಗೂ ಕೂಡಾ ಉದ್ಯೋಗಕ್ಕೆ ಅವಕಾಶ.
  • ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡದೇ ಮಾಲಿನ್ಯ ರಹಿತವಾದ ಕಲೆಗಾರಿಕೆ.
  • ಅಧಿಕ ತಂತ್ರಜ್ಞಾನಗಳನ್ನು ಬಳಸದೆ ಸಾಂಪ್ರದಾಯಿಕ ಪದ್ಧತಿಯಲ್ಲೇ ಕರಕುಶಲ ನಡೆಯುತ್ತದೆ.
  • ಕಿನ್ನಾಳದ ಆಟಿಕೆಗಳು , ಧೀರ್ಘ ಬಾಳಿಕೆ ಬರುತ್ತವೆ

 ಕಿನ್ನಾಳ ಕಲೆಗೆ ಬೇಕಾದ ವಸ್ತುಗಳು

  • ಆಟಿಕೆ ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸಲು ಹಗುರ ಮರ, ಇದ್ದಿಲು , ಹುಣಸೆಯ ಬೀಜ, ಉರುಟು ಕಲ್ಲುಗಳು , ಸೆಣಬು, ತಾವೇ ತಯಾರಿಸಿದ ಕೆಲ ಬಣ್ಣಗಳು , ಮರ ಕೊಯ್ದ ಗರಗಸದ ಧೂಳು ಸೇರಿದಂತೆ ಸ್ಥಳೀಯವಾಗಿ  ಇತರೆ ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಕಿನ್ನಾಳ ಕಲೆಯಲ್ಲಿ  ತೊಡಗುತ್ತಾರೆ.