Published on: September 19, 2022

ಕ್ವೀನ್ ಎಲಿಜಬೆತ್ ನಿಧನ:

ಕ್ವೀನ್ ಎಲಿಜಬೆತ್ ನಿಧನ:

ಸುದ್ದಿಯಲ್ಲಿ ಏಕಿದೆ?

ಇಂಗ್ಲೆಂಡ್ ರಾಣಿ ಎಲಿಜಬೆತ್ II ವಯೋಸಹಜ ಖಾಯಿಲೆಯಿಂದ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸ್ಕಾಟ್ ಲ್ಯಾಂಡ್ ನ ಬಲ್ಮೊರಲ್ ನಿವಾಸದಲ್ಲಿ ತಮ್ಮ ತಾಯಿ 2ನೇ ಎಲಿಜಬೆತ್ ನಿಧನ ನಂತರ 73 ವರ್ಷದ ಚಾರ್ಲ್ಸ್ ಇಂಗ್ಲೆಂಡ್ ರಾಜರಾಗಿದ್ದಾರೆ.

ಮುಖ್ಯಾಂಶಗಳು

  • ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ ಕ್ವೀನ್ ಎಲಿಜಬೆತ್ ಮನ್ನಣೆ ಗಳಿಸಿದ್ದರು. ಅಲ್ಲದೇ 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಮ್ ಆಡಳಿತದ ಪತನ ಮತ್ತು ಅಂತರ್ಜಾಲ ಯುಗದ ಆರಂಭ ಉನ್ನತಿಗಳಂತಹ ಮಹತ್ವದ ಜಾಗತಿಕ ಬದಲಾವಣೆಗಳಿಗೆ ಅವರು ಸಾಕ್ಷಿಯಾಗಿದ್ದರು.
  • ರಾಣಿ ಎಲಿಜಬೆತ್ II 1947 ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು.

ಯಾರಾಗ್ತಾರೆ ವಾರಸುದಾರ?

  • ಕ್ವೀನ್ ಎಲಿಜಬೆತ್ II ರ ನಂತರ ಅವರ ಮೊದಲ ಮಗ ಚಾರ್ಲ್ಸ್ ರಾಜನಾಗಿ ಅಧಿಕಾರ ವಹಿಸಿಕೊಂಡರು. ರಾಜಮನೆತನದ ಪ್ರಕಾರ ರಾಜವಂಶದ ಉತ್ತರಾಧಿಕಾರವು ವಂಶಸ್ಥರ ಮೂಲಕ ಮಾತ್ರವಲ್ಲದೆ ಸಂಸದೀಯ ಶಾಸನದಿಂದಲೂ ನಿಯಂತ್ರಿಸಲ್ಪಡುತ್ತದೆ.