Published on: January 5, 2023

ಗಗನ್ ಯಾನ್

ಗಗನ್ ಯಾನ್

http://sarmstore1.com/dc912io/baa9ff-دانلود-اهنگ-home-از-edith-whiskers ಸುದ್ದಿಯಲ್ಲಿ ಏಕಿದೆ? ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)  2024 ರಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

how to purchase disulfiram ಮುಖ್ಯಾಂಶಗಳು

  • ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಹೊಸ ಸಾಧನೆಗಳನ್ನು ಮಾಡುತ್ತಿದೆ
  • ಗಗನ್ ಯಾನ್ 2022 ರಲ್ಲೇ ಸಾಕಾರವಾಗಬೇಕಿತ್ತು ಆದರೆ ಕೋವಿಡ್-19 ನಿಂದಾಗಿ ವಿಳಂಬವಾಗಿದೆ, 2024 ರಲ್ಲಿ ಎರಡು ಪ್ರಾಥಮಿಕ ಉಡಾವಣೆಗಳಾಗಲಿವೆ ಏಕೆಂದರೆ ಗಗನ್ ಯಾನ್ ರಾಕೆಟ್ ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ತೆರಳಿಂದತೆಯೇ ಸುರಕ್ಷಿತವಾಗಿ ವಾಪಸ್ಸಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.
  • ಮತ್ತೊಂದು ಪ್ರಯೋಗದಲ್ಲಿ ಮನುಷ್ಯರಿಲ್ಲದೇ ಕೇವಲ ರೋಬೋಟ್ ರಾಕೆಟ್ ನಲ್ಲಿರಲಿದ್ದು, ಎರಡೂ ಪ್ರಯೋಗಗಳು ಯಶಸ್ವಿಯಾದ ನಂತರ ಮೂರನೇ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಕಾರಗೊಳ್ಳಲಿದೆ.

ಗಗನ್ ಯಾನ್ ಮಿಷನ್

  • ಇಸ್ರೋ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ್ ಯಾನ್ ಮಿಷನ್ ಗೆ ಸಜ್ಜುಗೊಳ್ಳುತ್ತಿದೆ.
  • ಇದರ ಭಾಗವಾಗಿ ಇಸ್ರೋ ಮೊದಲು ಲೇಡಿ ರೋಬೋಟ್ ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಿದೆ. ‘ವ್ಯೋಮಮಿತ್ರ’ ಎಂಬ ಹೆಸರನ್ನು ಈ ರೋಬೋಟ್ ಗೆ ಇಡಲಾಗಿದೆ.
  • ವ್ಯೋಮ ಮಿತ್ರ ಎಂಬುದು ಸಂಸ್ಕೃತ ಶಬ್ದವಾಗಿದ್ದು, ವ್ಯೋಮ (ಬಾಹ್ಯಾಕಾಶ) ಮಿತ್ರ ಎಂದರೆ ಸ್ನೇಹಿತ ಎಂಬ ಅರ್ಥ ಇದೆ.
  • ಬಾಹ್ಯಾಕಾಶ ನೌಕೆಯಲ್ಲಿ ಗಗನ ಯಾತ್ರಿಗಳಳೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದ್ದೇನೆ, ಅವರನ್ನು ಗುರುತಿಸಿ, ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಲ್ಲೆ ಎಂದು ವ್ಯೋಮಮಿತ್ರ ತನ್ನನ್ನು ತಾನು ಪರಿಚಯ ಮಾಡಿಕೊಂಡಿದೆ.
  • ಮಾನವ ಕ್ರಿಯೆಗಳನ್ನು ಅನುಸರಿಸುವ ಸಾಮರ್ಥ್ಯವನ್ನು ಈ ರೋಬೋಟ್ ಹೊಂದಿದೆ. ಎಲ್ಲಾ ವ್ಯವಸ್ಥೆಗಳೂ ಸರಿ ಇದೆಯೇ ಎಂದು ಪರೀಕ್ಷಿಸಲು ಸಾಮರ್ಥ್ಯ ಹೊಂದಿದೆ.