Published on: March 21, 2023

ಗೋ ಸೇವಾ ಆಯೋಗ

ಗೋ ಸೇವಾ ಆಯೋಗ

ಸುದ್ದಿಯಲ್ಲಿ ಏಕಿದೆ? ಗೋಮಾಂಸ ನಿಷೇಧ ಹಾಗೂ ಗೋಹತ್ಯೆ ನಿಷೇಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಗೋ ಸೇವಾ ಆಯೋಗ ರಚನೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.

ಮುಖ್ಯಾಂಶಗಳು

  • ಆಯೋಗ ಸ್ಥಾಪನೆಗೆ 10 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದ್ದು, ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲು ಕರಡು ಮಸೂದೆಯನ್ನು ಸದನದಲ್ಲಿ ಮಂಡಿಸಲಾಗುತ್ತದೆ.
  • ಹರ್ಯಾಣ-ಉತ್ತರ ಪ್ರದೇಶದ ಮಾದರಿಯಲ್ಲಿ ಈ ಗೋ ಸೇವಾ ಆಯೋಗವನ್ನು ರಚಿಸಲಾಗಿದ್ದು, ಗೋಹತ್ಯೆಯನ್ನು ತಡೆಯಲು ಈ ಆಯೋಗ ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ವಹಿಸಿ ಕಾರ್ಯನಿರ್ವಹಿಸಲಿದೆ.

ಆಯೋಗದ ಕಾರ್ಯಗಳು

  • ಮಹಾರಾಷ್ಟ್ರ ಗೋ ಸೇವಾ ಆಯೋಗ ಜಾನುವಾರುಗಳ ಕ್ಷೇಮವನ್ನು ಗಮನಿಸಲಿದೆ ಹಾಗೂ ಯಾವುದು ಉಪಯುಕ್ತವಿಲ್ಲ, ಹಾಲು ನೀಡುತ್ತಿಲ್ಲ, ಕೃಷಿ ಚಟುವಟಿಕೆಗೆ ಉಪಯುಕ್ತವಿಲ್ಲ ಎಂಬುದರ ಮೌಲ್ಯಮಾಪನ ಮಾಡಲಿದೆ.
  • ಬಿಡಾಡಿ ದನಗಳು ಹಾಗೂ ಉಪಯುಕ್ತವಿಲ್ಲದ ದನಗಳಿಗೆ ಗೋಶಾಲೆಗಳನ್ನು ನಿರ್ಮಿಸುವ ವಿಷಯದಲ್ಲೂ ಈ ಆಯೋಗ ನಿಗಾ ವಹಿಸಲಿದೆ ಹಾಗೂ ಅದಕ್ಕೆ ಬೇಕಾದ ಆರ್ಥಿಕ ನೆರವನ್ನೂ ನೀಡಲಿದೆ.
  • ಈ ಆಯೋಗಕ್ಕೆ ಓರ್ವ ಅಧ್ಯಕ್ಷರು ಇರಲಿದ್ದು, ಸರ್ಕಾರವೇ ನೇಮಕ ಮಾಡಲಿದೆ. 14 ಹಿರಿಯ ಅಧಿಕಾರಿಗಳು ಈ ಆಯೋಗದಲ್ಲಿರಲಿದ್ದಾರೆ.