Published on: June 14, 2022

ಚಿಲ್ಲರೆ ಹಣದುಬ್ಬರ

ಚಿಲ್ಲರೆ ಹಣದುಬ್ಬರ

ಸುದ್ದಿಯಲ್ಲಿ ಏಕಿದೆ?  

ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಏಪ್ರಿಲ್ ನಲ್ಲಿ ಶೇಕಡಾ 7.79ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ. 7.04ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ.

ಮುಖ್ಯಾಂಶಗಳು

  • ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧಾರಿತ ಹಣದುಬ್ಬರ ಏಪ್ರಿಲ್ ನಲ್ಲಿ ಶೇ. 7.79 ಮತ್ತು ಮೇ 2021 ರಲ್ಲಿ ಶೇಕಡಾ 6.3 ರಷ್ಟಿತ್ತು.
  • ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ 2021 ರ ಆಹಾರ ಹಣದುಬ್ಬರವು ಮೇ 2022 ರಲ್ಲಿ ಶೇಕಡಾ 7. 79ರಷ್ಟು ಇದ್ದು, ಇದು ಹಿಂದಿನ ತಿಂಗಳಲ್ಲಿ ದಾಖಲಾಗಿದ್ದ ಶೇಕಡಾ 8.31 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
  • ನಿಯಂತ್ರಣ ಮೀರಿ ಹೋಗಿರುವ ಚಿಲ್ಲರೆ ಹಣದುಬ್ಬರವನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಆರ್ ಐಬಿಗೆ ಸೂಚಿಸಿದ ನಂತರ, ಕೇಂದ್ರ ಬ್ಯಾಂಕ್ ಇತ್ತೀಚಿಗೆ ರೆಪೊ ದರವನ್ನು ಹೆಚ್ಚಿಸಿತ್ತು. ಇದರ ಪರಿಣಾಮ ಚಿಲ್ಲರೆ ಹಣದುಬ್ಬರ ಸ್ವಲ್ಪ ಇಳಿಕೆಯಾಗಿದೆ.