Published on: September 2, 2023

ಚುಟುಕು ಸಮಾಚಾರ : 1 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 1 ಸೆಪ್ಟೆಂಬರ್ 2023

  • ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಾಜಸ್ಥಾನದಲ್ಲಿ ಧೋಲ್ಪುರ್-ಕರೌಲಿ ಹುಲಿ ಸಂರಕ್ಷಿತ ಪ್ರದೇಶವನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ. ಇದು ಮುಕುಂದ್ರ ಬೆಟ್ಟಗಳು, ರಾಮಗಢ ವಿಶ್ಧಾರಿ, ರಣಥಂಬೋರ್ ಮತ್ತು ಸರಿಸ್ಕಾ ನಂತರ ರಾಜಸ್ಥಾನದ ಐದನೇ ಹುಲಿ ಸಂರಕ್ಷಿತ ಪ್ರದೇಶವಾಗಿದೆ.
  • ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಪತ್ನಿ ಸುದೇಶ್  ಧನಕರ್ ಅವರು ಮುಂಬಯಿನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ನಲ್ಲಿ ಭಾರತೀಯ ನೌಕಾಪಡೆಯ ಹೊಸ ಯುದ್ಧನೌಕೆ ‘ಮಹೇಂದ್ರಗಿರಿ’ಯನ್ನು ಲೋಕಾರ್ಪಣೆಗೊಳಿಸಿದರು. ಭಾರತೀಯ ನೌಕಾಪಡೆಗೆ ಪ್ರಾಜೆಕ್ಟ್ 17 ಆಲ್ಫಾ ಸರಣಿಯ 7ನೇ ಯುದ್ಧನೌಕೆ “ಐಎನ್ಎಸ್ ಯುದ್ಧನೌಕೆಯಾಗಿದೆ.
  • ಕುಸ್ತಿಯ ರಾಷ್ಟ್ರೀಯ ಆಡಳಿತ ಮಂಡಳಿಯಾದ ಭಾರತದ ಕುಸ್ತಿ ಮಂಡಳಿಯನ್ನು (WFI) ವಿಶ್ವ ಕುಸ್ತಿ ಮಂಡಳಿ (UWW) ತನ್ನ ಚುನಾವಣೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸದ ಕಾರಣ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
  • ಇತ್ತೀಚೆಗೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಅಭಿವೃದ್ಧಿಪಡಿಸಿದ ವಿಶ್ವದ ಮೊದಲನೇ, ಭಾರತ್ ಸ್ಟೇಜ್-6 (BS6) ಹಂತ-II, ಎಲೆಕ್ಟ್ರಿಫೈಡ್ ಫ್ಲೆಕ್ಸ್ ಇಂಧನ ವಾಹನದ ಮೂಲಮಾದರಿಯನ್ನು ಅನಾವರಣಗೊಳಿಸಿತು. ಈ ವಾಹನವು 85% ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಒಳಗೊಂಡಿದೆ.ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 20% ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣಗಳೊಂದಿಗೆ ಪೆಟ್ರೋಲ್ ಅನ್ನು ಬದಲಿಸುವ ಫ್ಲೆಕ್ಸ್-ಇಂಧನ ವಾಹನಗಳಿಗೆ ಒತ್ತು ನೀಡುತ್ತಿದೆ. ಫ್ಲೆಕ್ಸ್-ಇಂಧನ ವಾಹನಗಳು : ಅವುಗಳು – ಪೆಟ್ರೋಲ್/ಡೀಸೆಲ್/ಎಲೆಕ್ಟ್ರಿಕ್ ಮತ್ತು ಎಥೆನಾಲ್ ಸಂಯೋಜಿತ   ಇಂಧನದಲ್ಲಿ ಚಲಿಸಬಲ್ಲ ಎಂಜಿನ್‌ಗಳನ್ನು ಹೊಂದಿವೆ , ಇದು 100% ಎಥೆನಾಲ್ ಅನ್ನು ಒಳಗೊಂಡಿರುತ್ತದೆ.