Published on: October 14, 2023

ಚುಟುಕು ಸಮಾಚಾರ : 10 ಅಕ್ಟೋಬರ್ 2023

ಚುಟುಕು ಸಮಾಚಾರ : 10 ಅಕ್ಟೋಬರ್ 2023

  • ಸಿಕ್ಕಿಂ ಇತ್ತೀಚೆಗೆ ಗ್ಲೇಶಿಯಲ್ ಲೇಕ್ (ಹಿಮನದಿ ಸರೋವರ) ಹೊರಹರಿವಿನ ಪ್ರವಾಹವನ್ನು (GLOF) ಅನುಭವಿಸಿತು. ರಾಜ್ಯದ ವಾಯುವ್ಯದಲ್ಲಿ 17,000 ಅಡಿ ಎತ್ತರದಲ್ಲಿರುವ ಗ್ಲೇಶಿಯಲ್ ಸರೋವರವಾದ ದಕ್ಷಿಣ ಲೊನಾಕ್ ಸರೋವರವು ನಿರಂತರ ಮಳೆಯ ಪರಿಣಾಮವಾಗಿ ಸ್ಪೋಟಗೊಂಡಿದೆ.
  • 2022 ಮೇ ತಿಂಗಳಲ್ಲಿ ಜಾಗತಿಕ ವಾಯು ಶಕ್ತಿ ಶ್ರೇಯಾಂಕಗಳು ಎಂಬ ವರದಿಯನ್ನು ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್ಕ್ರಾಫ್ಟ್ (ಡಬ್ಲ್ಯುಡಿಎಂಎಂಎ) ಸಂಸ್ಥೆ ಪ್ರಕಟಿಸಿತು. ಭಾರತೀಯ ವಾಯುಪಡೆಯು ಜಾಗತಿಕವಾಗಿ 6ನೇ ರ್ಯಾಂಕ್ ಪಡೆದುಕೊಂಡಿದ್ದರೆ, ಚೀನಾ ವಾಯುಪಡೆಗೆ ದೊರೆತಿದ್ದು 7ನೇ ಸ್ಥಾನ. 2023ನೇ ಸಾಲಿನಲ್ಲೂ ಇದೇ ರ್ಯಾಂ ಕಿಂಗ್ ಮುಂದುವರಿದಿದೆ. ಪಾಕಿಸ್ತಾನವು ರ್ಯಾಂಕಿಂಗ್ನಲ್ಲಿ 18ನೇ ಸ್ಥಾನದಲ್ಲಿದೆ.
  • ಇತ್ತೀಚೆಗೆ, ವಿಶ್ವ ಆರೋಗ್ಯ ಸಂಸ್ಥೆ (WHO) R21/ಮ್ಯಾಟ್ರಿಕ್ಸ್-M ಮಲೇರಿಯಾ ಲಸಿಕೆ ಬಳಕೆಯನ್ನು ಶಿಫಾರಸು ಮಾಡಿದೆ, ಇದನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಹ-ಅಭಿವೃದ್ಧಿಪಡಿಸಿದೆ.