Published on: March 10, 2023

ಚುಟುಕು ಸಮಾಚಾರ – 10 ಮಾರ್ಚ್ 2023

ಚುಟುಕು ಸಮಾಚಾರ – 10 ಮಾರ್ಚ್ 2023

 • ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಸ್ವ-ಸಹಾಯ ಗುಂಪುಗಳ (ಎಸ್ಎಚ್ಜಿ) ಬೆಂಬಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಸ್ತ್ರೀ ಸಾಮರ್ಥ್ಯ-ನಮೋ ಸ್ತ್ರೀ ಯೋಜನೆ’ಗೆ ಚಾಲನೆ ನೀಡಿದರು.
  • ಜಾರಿಗೊಳಿಸುವವರು  : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
 • ಕರ್ನಾಟಕ ಸರ್ಕಾರವು RASTHA (ರಾಪಿಡ್ ರೆಸ್ಪಾನ್ಸ್, ಮೌಲ್ಯಮಾಪನ, ಸ್ಥಿರೀಕರಣ ಮತ್ತು ಹೆದ್ದಾರಿ ಅಪಘಾತಗಳಲ್ಲಿ ಸುರಕ್ಷಿತ ಸಾರಿಗೆ) ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.
  • ಸಹಯೋಗ: ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಜೀವರಕ್ಷಾ ಟ್ರಸ್ಟ್ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
 • ಭಾರತೀಯ ನೌಕಾಪಡೆಯ ಅತಿ ದೊಡ್ಡ ದ್ವೈವಾರ್ಷಿಕ ಸಮರಾಭ್ಯಾಸವಾದ ‘ಟ್ರೋಪೆಕ್ಸ್’ (ಥಿಯೇಟರ್ ಲೆವೆಲ್ ಆಪರೇಷನಲ್ ರೆಡಿನೆಸ್ ಎಕ್ಸರ್ಸೈಸ್) ಕೊನೆಗೊಂಡಿದೆ.
  • ಈ ಸಮರಾಭ್ಯಾಸವನ್ನು  ನವೆಂಬರ್ 2022 ರಿಂದ ಮಾರ್ಚ್ 2023 ರವರೆಗೆ ನಾಲ್ಕು ತಿಂಗಳ ಕಾಲ ನಡೆಸಲಾಯಿತು.
  • ನಡೆದ ಸ್ಥಳ : ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಸಹಿತ ಹಿಂದೂ ಮಹಾಸಾಗರದಲ್ಲಿ 2.1 ಕೋಟಿ ಚದರ ನಾಟಿಕಲ್ ಮೈಲು ಪ್ರದೇಶದಲ್ಲಿ ನಡೆದಿದೆ’.
  • ಭಾಗವಹಿಸಿದವರು:  ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲುಪಡೆಗಳು.
 • ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್‌ ಆಗಿ ನೇಮಕ ಮಾಡಲಾಗಿದೆ. ಆ ಮೂಲಕ ಐಎಎಫ್‌ನ ಯುದ್ಧ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಪಾತ್ರರಾಗಿದ್ದಾರೆ.