Published on: January 11, 2023

ಚುಟುಕು ಸಮಾಚಾರ – 11 ಜನವರಿ 2023

ಚುಟುಕು ಸಮಾಚಾರ – 11 ಜನವರಿ 2023

  • ಪರಿಶಿಷ್ಟರ ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ ಅವಾಸ್ತವಿಕ, ಅವೈಜ್ಞಾನಿಕ, ಅಂವಿಧಾನಿಕವಾಗಿದ್ದು, ಈ ವರದಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರತಿಭಟನೆ ಮಾಡುತ್ತಿದೆ.
  • “ಅವಧಿ ಮೀರಿದ ನೋಂದಾಯಿತ ವಾಹನಗಳ ನಾಶ ಪಡಿಸುವ ನೀತಿ’ (ಗುಜರಿ ನೀತಿ) ಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದಿಸಿತು. ಏಪ್ರಿಲ್ 1, 2022 ರಿಂದ ಜಾರಿಗೆ ಬಂದಿದೆ. ಇದನ್ನು 2021-22ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಈ ನೀತಿ ಅಡಿ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್ನೆಸ್ ಪರೀಕ್ಷೆಗಳನ್ನು ಒದಗಿಸುತ್ತದೆ, ಆದರೆ ವಾಣಿಜ್ಯ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ನಂತರ ಇದು ಅಗತ್ಯವಿರುತ್ತದೆ.
  • ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಲಾಭೋದ್ದೇಶವಿಲ್ಲದ ಟ್ರಸ್ಟ್ ಆಗಿದ್ದು, ಸಂಸ್ಥೆಯು ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಮಾನವಿಕತೆ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿನ ಸಂಶೋಧಕರನ್ನು ಗುರ್ತಿಸಿ ವಾರ್ಷಿಕವಾಗಿ ಗೌರವಿಸುತ್ತದೆ. ಭಾರತ ಮತ್ತು ಪ್ರಪಂಚದ ಅಭಿವೃದ್ಧಿಗೆ ವೈಜ್ಞಾನಿಕ ಸಂಶೋಧನೆಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಇನ್ಫೋಸಿಸ್ ಈ ಪ್ರಶಸ್ತಿಯನ್ನು ನೀಡುತ್ತಿದೆ.
  • ಚೀನಾದಲ್ಲಿಇದೇ ಮೊದಲ ಬಾರಿಗೆ ಜಲಜನಕ (ಹೈಡ್ರೋಜನ್) ಆಧಾರಿತ ಸೆಮಿ ಹೈಸ್ಪೀಡ್ ಸ್ಪೀಡ್ ಪ್ಯಾಸೆಂಜರ್ ರೈಲು ಚಾಲನೆಗೊಂಡಿದೆ. ಚೆಂಗ್ಡುರೈಲ್ವೆ ಗ್ರೂಪ್ ಮತ್ತುಚಾಂಗ್ಚುನ್ ಸಿಆರ್ಆರ್ಸಿ ಜಂಟಿಯಾಗಿ ಹೈಡ್ರೋ ಜನ್ ಚಾಲಿತ ನಾಲ್ಕು ರೈಲುಗಳನ್ನು ಅಭಿವೃದ್ಧಿಪಡಿಸಿವೆ. ಇದು ಏಷ್ಯಾದಲ್ಲಿಮೊದಲ ಮತ್ತು ವಿಶ್ವದಲ್ಲಿ ಎರಡನೇ ಹೈಡ್ರೋಜನ್ ರೈಲು ಕೂಡ ಆಗಿದೆ. 2022ರ ಆಗಸ್ಟ್ ನಲ್ಲಿ ಜರ್ಮನಿಯಲ್ಲಿವಿಶ್ವದ ಮೊದಲ ಹೈಡ್ರೋ ಜನ್ ರೈಲು ಕಾರ್ಯಾರಂಭ ಮಾಡಿತ್ತು.
  • ವಾಹನ ಮಾರಾಟದಲ್ಲಿಭಾರತ ಇದೇ ಮೊದಲ ಬಾರಿಗೆ 2022ರ ಜನವರಿ ಮತ್ತು ನವೆಂಬರ್ ನಡುವೆ ಅತಿ ಹೆಚ್ಚು ವಾಹನಗಳನ್ನು ಮಾರಾಟ  ಮಾಡುವ ಮೂಲಕ ಜಪಾನ್ ದೇಶವನ್ನು ಹಿಂದಿಕ್ಕಿದೆ. ಈ ಅವಧಿಯಲ್ಲಿ ಭಾರತ 4.13 ಮಿಲಿಯನ್ ಹೊಸ ವಾಹನಗಳನ್ನು ಮಾರಾಟ   ಮಾಡಿದ್ದು, ಕಳೆದ ವರ್ಷ ಒಟ್ಟಾರೆ 4.25 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದೆ. ವಾಹನ ಮಾರಾಟದಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ಭಾರತ ಇದೆ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ಬಂದು ತಲುಪಿದೆ.
  • ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಕಳೆದ ವರ್ಷ 2022ರಲ್ಲಿ ತೆರೆಕಂಡ ಆರ್ ಆರ್ ಆರ್ ಚಿತ್ರದ ‘ನಾಟು ನಾಟು’ ಹಾಡು 2023ರ ಗೋಲ್ಡನ್ ಗ್ಲೋಬ್ ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದಿದೆ. ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಪಡೆದಿದೆ. RRR 1920 ರ ದಶಕದಲ್ಲಿ ಇಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ – ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಅನುಸರಿಸುತ್ತದೆ. ಚಿತ್ರದಲ್ಲಿ ತೆಲುಗು ಟ್ರ್ಯಾಕ್ “ನಾಟು ನಾಟು” ನ್ನು ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಸಾಹಿತ್ಯ ಬರೆದಿದ್ದಾರೆ. ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ತೆಲುಗು ಬ್ಲಾಕ್ ಬಸ್ಟರ್ ಆರ್ ಆರ್ ಆರ್ ಚಿತ್ರವು ‘ಅತ್ಯುತ್ತಮ ಇಂಗ್ಲೀಷೇತರ ಚಿತ್ರ’ ಎಂದು ನಾಮನಿರ್ದೇಶನಗೊಂಡಿದೆ.
  • ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ಫೋರ್ಟ್ ಬೆಂಡ್ ಟೋಲ್ ರೋಡ್ ಅಥಾರಿಟಿ ಮತ್ತು ಗ್ರ್ಯಾಂಡ್ ಪಾರ್ಕ್‌ವೇ ಟೋಲ್ ರೋಡ್ ಪ್ರಾಧಿಕಾರದ ನಿರ್ದೇಶಕರ ಮಂಡಳಿಗೆ ಭಾರತೀಯ ಮೂಲದ ಸ್ವಪನ್ ಧೈರ್ಯವನ್ ಅವರನ್ನು ನೇಮಕ ಮಾಡಲಾಗಿದೆ. ಸ್ವಪನ್ ಧೈರ್ಯವನ್, ಅವರ ಹಿನ್ನೆಲೆ, ಸಮುದಾಯದ ಪ್ರಭಾವ ಮತ್ತು ಆರ್ಥಿಕ ಪರಿಣತಿಯ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಅಮೆರಿಕ ಬಾಹ್ಯಾಕಾಶ ಕೈಗಾರಿಕಾ ತಜ್ಞ ಎ.ಸಿ. ಚರಣಿಯಾ ಅವರನ್ನು NASAದ ಮುಖ್ಯ ತಾಂತ್ರಿಕ ತಜ್ಞರಾಗಿ ನೇಮಕ ಮಾಡಲಾಗಿದ್ದು, ಇವರು ನಾಸಾ ಮುಖ್ಯ  ಕಚೇರಿಯಲ್ಲಿ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರಿಗೆ ತಾಂತ್ರಿಕ ನೀತಿ ಮತ್ತು ಕಾರ್ಯಕ್ರಮಗಳಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.