Published on: April 13, 2023

ಚುಟುಕು ಸಮಾಚಾರ : 12 ಏಪ್ರಿಲ್ 2023

ಚುಟುಕು ಸಮಾಚಾರ : 12 ಏಪ್ರಿಲ್ 2023

  • ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಪ್ರತಿವರ್ಷ ಏಪ್ರಿಲ್ 11 ರಂದು ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ. ಏಪ್ರಿಲ್ 11 ಮಹಾತ್ಮ ಗಾಂಧಿಜಿ ಅವರ ಪತ್ನಿ ಕಸ್ತೂರಬಾ ಗಾಂಧಿಯವರ 90 ನೇ ಜನ್ಮದಿನದ ಸಂದರ್ಭದಲ್ಲಿ ಘೋಷಿಸಿತು. ಈ ದಿನವನ್ನು ಅಧಿಕೃತವಾಗಿ ಘೋಷಿಸಿದ ವಿಶ್ವದ ಮೊದಲ ದೇಶ ಭಾರತ. ಭಾರತದಲ್ಲಿ ಮೊದಲ ಬಾರಿಗೆ 2003 ರಲ್ಲಿ ಆಚರಿಸಲಾಯಿತು. ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾ (WRAI) ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆರಂಭಿಸಿತು.
  • ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಗಜ್ ಉತ್ಸವ-2023 ಅನ್ನು ಉದ್ಘಾಟಿಸಿದರು. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಅಸ್ಸಾಂ ಸರ್ಕಾರವು ಗಜ್ ಉತ್ಸವ 2023 ಅನ್ನು ವಿಶ್ವ ಪರಂಪರೆಯ ತಾಣವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಜೆಕ್ಟ್ ಎಲಿಫೆಂಟ್ನ 30 ವರ್ಷಗಳ ಯಶಸ್ಸನ್ನು ಆಚರಿಸಲು ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದವು
  • ಕರ್ನಾಟಕದ ತೆಲುಗು ಕುಟುಂಬದಲ್ಲಿ ಜನಿಸಿದ ಅಮೆರಿಕ ನಿವಾಸಿ ಸಿಆರ್ ರಾವ್ ಅವರು ಸಂಖ್ಯಾಶಾಸ್ತ್ರೀಯ ಚಿಂತನೆಯಲ್ಲಿ ಕ್ರಾಂತಿಕಾರಕ ಸಾಧನೆ ಮಾಡಿದ್ದಕ್ಕಾಗಿ ನೊಬೆಲ್‌ಗೆ ಸಮಾನವಾದ ಇಂಟರ್‌ನ್ಯಾಷನಲ್‌ ಪ್ರೈಜ್‌ ಇನ್‌ ಸ್ಟ್ಯಾಟಿಸ್ಟಿಕ್ಸ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. 102 ವರ್ಷದ ಅವರು 75 ವರ್ಷಗಳ ಹಿಂದೆ ಮಾಡಿದ ಕೆಲಸಕ್ಕಾಗಿ ಈಗ ಈ ಗೌರವ ಲಭಿಸಿದೆ.  ಪ್ರಸ್ತುತ ಪೆನ್ಸಿಲ್ವೇನಿಯಾ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್‌ ಎಮೆರಿಟಸ್‌ ಮತ್ತು ಬಫೆಲೊ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ರಾವ್‌ ಅವರಿಗೆ ಕೇಂದ್ರ ಸರಕಾರವು 1968ರಲ್ಲಿ ಪದ್ಮಭೂಷಣ ಮತ್ತು 2001ರಲ್ಲಿ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಿದೆ.