Published on: January 14, 2024

ಚುಟುಕು ಸಮಾಚಾರ : 12 ಜನವರಿ 2024

ಚುಟುಕು ಸಮಾಚಾರ : 12 ಜನವರಿ 2024

  • ಭಾರತೀಯ ವಿಜ್ಞಾನ ಸಂಸ್ಥೆಯ (IISc) ಆಣ್ವಿಕ ಜೈವಿಕ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ತಂಡವು ಸಂಶ್ಲೇಷಿತ ಪ್ರತಿಜನಕ (ಆ್ಯಂಟಿಜೆನ್)ವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೋವಿಡ್–19 ಸೋಂಕಿಗೆ ಅತ್ಯಂತ ಪರಿಣಾಮಕಾರಿ ಲಸಿಕೆ ತಯಾರಿಕೆಯಲ್ಲಿ ಬಳಸಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಯು ಸಾರ್ಸ್ ಕೋವಿ–2 ವಿರುದ್ಧ ಹೋರಾಡುವ ಉತ್ತಮ ಫಲಿತಾಂಶ ಹೊಂದಿದೆ.
  • ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ ಅಟಲ್ ಸೇತು ಅಥವಾ ಮುಂಬೈ ಟ್ರಾನ್ಸ್ ಹಾಬರ್ ಲಿಂಕ್ (MTHL) ಅನ್ನು ಅನ್ನು ಪ್ರಧಾನಿ ಅವರು ಮುಂಬೈನಲ್ಲಿ ಉದ್ಘಾಟಿಸಿದರು.
  • ರಾಷ್ಟ್ರೀಯ ಯುವ ದಿನವನ್ನು ಪ್ರತಿ ವರ್ಷ ಜನವರಿ 12 ರಂದು ಆಚರಿಸಲಾಗುತ್ತದೆ, ಇದು ಸ್ವಾಮಿ ವಿವೇಕಾನಂದರ ಜನ್ಮ ವಾರ್ಷಿಕೋತ್ಸವವನ್ನು ಗೌರವಿಸುವ ಕಾರ್ಯಕ್ರಮವಾಗಿದೆ. 2024ರ ಜನವರಿ 12 ರಿಂದ 16 ರವರೆಗೆ ನಡೆಯುವ ಯುವಜನೋತ್ಸವವನ್ನು (27ನೇ) ಮಹಾರಾಷ್ಟ್ರ ರಾಜ್ಯ ನಾಸಿಕ್ನಲ್ಲಿ ಆಯೋಜಿಸಿದೆ. ಈ ವರ್ಷದ ಥೀಮ್: ‘ನನ್ನ ಭಾರತ ವಿಕಸಿತ ಭಾರತ @2047- ಯುವಜನರಿಂದ, ಯುವಕರಿಗಾಗಿ’. 1984 ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಮತ್ತು ಇದನ್ನು ಮೊದಲು ಜನವರಿ 12, 1985 ರಂದು ಗುರುತಿಸಲಾಯಿತು.
  • ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2023 ರ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ನೀಡಿದರು.ಸ್ವಚ್ಛ ನಗರ ಪ್ರಶಸ್ತಿ: ಇಂದೋರ್ (ಸತತ 6 ವರ್ಷಗಳ ಕಾಲ ಏಕಾಂಗಿಯಾಗಿ ಅಗ್ರಸ್ಥಾನವನ್ನು ಹೊಂದಿತ್ತು) ಮತ್ತು ಸೂರತ್
  • ಫ್ರಾನ್ಸ್ ದೇಶದ ನೂತನ ಪ್ರಧಾನಿಯಾಗಿ ಗೇಬ್ರಿಯಲ್ ಅತ್ತಲ್ ಅವರನ್ನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ನೇಮಕ ಮಾಡಿದ್ದಾರೆ. ಸರ್ಕಾರದ ವಕ್ತಾರ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿರುವ 34 ವರ್ಷದ ಗೇಬ್ರಿಯಲ್, ಫ್ರಾನ್ಸ್ನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ಅವರನ್ನು ಫ್ರೆಂಚ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ಹುದ್ದೆಯಾದ ಶಿಕ್ಷಣ ಸಚಿವರಾಗಿ ನೇಮಕ ಮಾಡಲಾಗಿತ್ತು. ಅವರು ಫ್ರಾನ್ಸ್ನ ಮೊದಲ ಸಲಿಂಗಿ ಪ್ರಧಾನಿಯೂ ಆಗಿದ್ದಾರೆ. ವಿದೇಶಿಗರನ್ನು ಗಡೀಪಾರು ಮಾಡಲು ಸರ್ಕಾರಕ್ಕೆ ಬಲ ನೀಡುವ ಇತ್ತೀಚಿನ ವಲಸೆ ನೀತಿ ಕುರಿತಾದ ರಾಜಕೀಯ ಹಿನ್ನೆಲೆಯಲ್ಲಿ ಎಲಿಜಬೆತ್ ಬಾರ್ನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2017ರಲ್ಲಿ ದೇಶದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮ್ಯಾಕ್ರನ್, ದೇಶದ ಅತ್ಯಂತ ಕಿರಿಯ ವಯಸ್ಸಿನ(46 ವರ್ಷ) ಅಧ್ಯಕ್ಷ ಎಂಬ ಖ್ಯಾತಿ ಪಡೆದಿದ್ದರು.