Published on: January 18, 2023

ಚುಟುಕು ಸಮಾಚಾರ – 18 ಜನವರಿ 2023

ಚುಟುಕು ಸಮಾಚಾರ – 18 ಜನವರಿ 2023

  • ಕೆಎಸ್​​​ಆರ್​​​ಟಿಸಿಯ ಮೊದಲ ಎಲೆಕ್ಟ್ರಿಕ್​​​ ಬಸ್​’: ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್​​ ಬಸ್ ಸೇವೆ ಆರಂಭವಾಗಿದೆ. ಎಕ್ಸ್​​​ಪ್ರೆಸ್ ವೇನಲ್ಲಿ ಈ ಕೆಎಸ್​ಆರ್​​ಟಿಸಿ ಎಲೆಕ್ಟ್ರಿಕ್ ಬಸ್ ಸಂಚರಿಸುತ್ತಿದೆ. ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್​​​ ಬಸ್​​ನಲ್ಲಿ ವಿದ್ಯಾರ್ಥಿ ಪಾಸ್​​ಗೆ ಅವಕಾಶವಿಲ್ಲ. ಮುಂದಿನ ಮೂರು ತಿಂಗಳಲ್ಲಿ 50 ಕೆಎಸ್​​ಆರ್​ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿವೆ. ಬೆಂಗಳೂರಿನ ಹತ್ತಿರದ ಜಿಲ್ಲೆಗಳಿಗೆ ಸಂಚರಿಸಲಿವೆ. 300 ಕಿ.ಮೀ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್​​ ಬಸ್ ಓಡಿಸಲು ಕೆಎಸ್​​ಆರ್​ಟಿಸಿ ನಿರ್ಧಾರ ಮಾಡಿದೆ. ಎಲೆಕ್ಟ್ರಿಕ್​ ಬಸ್​​ಗಳನ್ನು ಒಂದು ಸಾರಿ ಚಾರ್ಜ್​ ಮಾಡಿದರೆ 300ಕೀಮಿ ಸಂಚರಿಸುತ್ತದೆ. ಇನ್ನು ಫೆಬ್ರವರಿಯಲ್ಲಿ ರಸ್ತೆಗಿಳಿಯುವ 50 ಬಸ್​ಗಳು ಬೆಂಗಳೂರಿನಿಂದ ಮಡಿಕೇರಿ, ವಿರಾಜ​ಪೇಟೆ, ಚಿಕ್ಕಮಗಳೂರು, ದಾವಣಗೇರೆ ಮತ್ತು ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸಲಿವೆ. ಎಲೆಕ್ಟ್ರಿಕ್​ ಬಸ್​ಗಳ ಕಾರ್ಯನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್  ನಿರ್ವಹಿಸಲಿದೆ.
  • 2023 ರ ಲಾಲ್ ಬಾಗ್’ನ 213ನೇ ಫಲಪುಷ್ಪ ಪ್ರದರ್ಶನ: ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗಾಜಿನ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ. ಥೀಮ್ : ಬೆಂಗಳೂರಿನ ಶ್ರೀಮಂತ ಇತಿಹಾಸ.
  • ಕೆಂಪೇಗೌಡ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಪ್ರದರ್ಶಿಸಲಾಗುತ್ತದೆ. ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿದಂತೆ 11 ದೇಶಗಳ ಹೂವುಗಳು ಪ್ರದರ್ಶನದಲ್ಲಿರಲಿವೆ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಐದು ರಾಜ್ಯಗಳ ಹೂವುಗಳು ಕೂಡ ಪ್ರದರ್ಶನಗೊಳ್ಳಲಿವೆ.ಲಾಲ್‌ಬಾಗ್‌ನ ನಾಲ್ಕು ಪ್ರವೇಶ ಕೇಂದ್ರಗಳಲ್ಲಿ ಬೆಂಗಳೂರಿನ ಇತಿಹಾಸವನ್ನು ಪ್ರದರ್ಶಿಸಲಾಗುವುದು. ಮಿಥಿಕ್ ಸೊಸೈಟಿಯ ಸಹಯೋಗದೊಂದಿಗೆ, ಬೆಂಗಳೂರಿನ ಇತಿಹಾಸವನ್ನು 3ಡಿ ಯಲ್ಲಿ ವಿವರಿಸಲಾಗುವುದು ಮತ್ತು ಎರಡು ಎಲ್ಇಡಿ ಪರದೆಗಳಲ್ಲಿ ಪ್ರೊಜೆಕ್ಟ್ ಮಾಡಲಾಗುತ್ತದೆ.
  • ‘ಸಂಜೆ ಅಂಚೆ ಕಚೇರಿ’ : ಗ್ರಾಹಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಉಪ ಅಂಚೆ ಕಚೇರಿಯನ್ನು ‘ಸಂಜೆ ಅಂಚೆ ಕಚೇರಿ’ಯನ್ನಾಗಿ ಪರಿವರ್ತಿಸಲಾಗಿದ್ದು. 2022ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಧಾರವಾಡದಲ್ಲಿ ‘ಸಂಜೆ ಅಂಚೆ ಕಚೇರಿ’ಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದು ರಾಜ್ಯದಲ್ಲಿ ಅಂತಹ ಎರಡನೇ ಕಚೇರಿಯಾಗಿದೆ. ಸಂಜೆ ಅಂಚೆ ಕಚೇರಿಯ ಸಮಯ ಮಾತ್ರ ವಿಸ್ತರಿಸಲಾಗಿದೆ. ಪ್ರತ್ಯೇಕ ಘಟಕ ಅಥವಾ ಬ್ರಾಂಡ್ ಅಲ್ಲ.“ಇದು ಪ್ರತ್ಯೇಕ ಘಟಕವಾಗಿದ್ದು, ಮಧ್ಯಾಹ್ನ 1 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.
  • 2020 ರಿಂದೀಚೆಗೆ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಾನುವಾರುಗಳ ಮರಣಕ್ಕೆ ಕಾರಣವಾಗಿರುವ ಚರ್ಮಗಂಟು ರೋಗ (ಎಲ್ಎಸ್ಡಿ)ಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)-ಭಾರತೀಯ ಪಶುವೈದ್ಯಕೀಯ ಸಂಶೋಧನೆ ಸಂಸ್ಥೆ (ಐವಿಆರ್’ಐ) ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದೆ. ಎಲ್ಎಸ್ಡಿಗೆ ಕಾರಣವಾಗುವ ಅದೇ ವೈರಸ್ ಅನ್ನು ಬಳಸುವ ಹೋಮೋಲೋಗಸ್ ಲಸಿಕೆ “ವೈರಸ್ ವಿರುದ್ಧ 100 ಪ್ರತಿಶತದಷ್ಟು ರಕ್ಷಣೆ ನೀಡುತ್ತದೆ. ಲಸಿಕೆ ತಯಾರಿಕೆ ಮತ್ತು ಪೂರೈಕೆಗಾಗಿ ವಾಣಿಜ್ಯ ಒಪ್ಪಂದ: ಎರಡು ಪಶುವೈದ್ಯಕೀಯ ಲಸಿಕೆ ತಯಾರಕರು – ಬಯೋವೆಟ್ ಪ್ರೈವೇಟ್ ಲಿಮಿಟೆಡ್, ಮಾಲೂರು, ಕರ್ನಾಟಕ ಮತ್ತು ಹೆಸ್ಟರ್ ಬಯೋಸೈನ್ಸ್ ಲಿಮಿಟೆಡ್, ಅಹಮದಾಬಾದ್, ಗುಜರಾತ್ , ಲಸಿಕೆ ತಯಾರಿಕೆ ಮತ್ತು ಪೂರೈಕೆಗಾಗಿ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
  • ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತ್ರಿಪುರಾ ಸರ್ಕಾರವು ‘ಸಹರ್ಶ್’ ಎಂಬ ವಿಶೇಷ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
  • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF) ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 ರ ಅನುಸೂಚಿ III ರ ಅಡಿಯಲ್ಲಿ ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂಥಿಯಾನ) ಅನ್ನು ಸಂರಕ್ಷಿತ ಸಸ್ಯಗಳ ಪಟ್ಟಿಯಲ್ಲಿ ಸೇರಿಸಿದೆ.
  • ಅಮೆರಿಕದ ಟೆಕ್ಸಾಸ್‌ ರಾಜ್ಯದ ರೂಪದರ್ಶಿ, ಮಿಸ್‌ ಯುಎಸ್‌ಎ ಆರ್‌’ಬೋನ್ನಿ ಗೇಬ್ರಿಯಲ್‌ ಅವರು ‘ಭುವನ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.