Published on: June 20, 2023

ಚುಟುಕು ಸಮಾಚಾರ : 19 ಜೂನ್ 2023

ಚುಟುಕು ಸಮಾಚಾರ : 19 ಜೂನ್ 2023

  • ಬೆಂಗಳೂರು-ಧಾರವಾಡ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಜೂನ್ 27ರಂದು ಏಕಕಾಲದಲ್ಲಿ ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಅನಾವರಣಗೊಳಿಸಲಿದ್ದಾರೆ. ಐಸಿಎಫ್‌ನಿಂದ ಮೇಕ್ ಇನ್ ಇಂಡಿಯಾ ನೀತಿಗೆ ಅನುಗುಣವಾಗಿ ತಯಾರಿಸಲಾದ ಈ ಸೆಮಿ-ಹೈ-ಸ್ಪೀಡ್ ರೈಲುಗಳು ದೇಶದ ವಿವಿಧ ನಗರಗಳಿಗೆ ಸಂಪರ್ಕ ಸಲ್ಪಿಸುತ್ತವೆ. ರೈಲ್ವೆ ಸಚಿವಾಲಯದ ಅಧಿಕೃತ ಮೂಲಗಳ ಪ್ರಕಾರ, ಈ ರೈಲುಗಳು ಗೋವಾ-ಮುಂಬೈ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್, ಭೋಪಾಲ್-ಜಬಲ್‌ಪುರ ಮತ್ತು ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಈ ಹೊಸ ರೈಲುಗಳೊಂದಿಗೆ ದೇಶದ ರೈಲು ಜಾಲದಲ್ಲಿ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲುಗಳ ಒಟ್ಟು ಸಂಖ್ಯೆ 23ಕ್ಕೆ ತಲುಪುತ್ತದೆ.
  • ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಥಿ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಮಾನವ ರಹಿತ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ. ಸ್ವದೇಶಿ ನಿರ್ಮಿತ ತಪಸ್ ಯುಎವಿ ಸಮುದ್ರ ಮಟ್ಟದಿಂದ ಸುಮಾರ 20 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದೆ. ಚಿತ್ರದುರ್ಗದಿಂದ 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಕಾರವಾರದ ಅರಬ್ಬಿ ಸಮುದ್ರದಲ್ಲಿದ್ದ ಐಎನ್ಎಸ್ ಸುಭದ್ರಾ ಇಳಿದಾಣದ ಮೇಲೆ ಸುರಕ್ಷಿತವಾಗಿ ಇಳಿದಿದೆ.
  • ಭಾರತದ ಆರ್ಥಿಕತೆಯು 2022-23ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 6.1 ಪ್ರತಿಶತದಷ್ಟು ವಿಸ್ತರಿದೆ. ಈ ಮೂಲಕ ಹಣಕಾಸು ವರ್ಷದ ವಾರ್ಷಿಕ ಬೆಳವಣಿಗೆ ದರವು ಶೇಕಡಾ 7.2 ರಷ್ಟು ದಾಖಲಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ತ್ರೈಮಾಸಿಕದ ಜಿಡಿಪಿ 43.62 ಲಕ್ಷ ಕೋಟಿ ರೂಪಾಯಿ ಇದೆ. 2022-23 ಹಣಕಾಸು ವರ್ಷದಲ್ಲಿ ಒಟ್ಟು ಭಾರತದ ಜಿಡಿಪಿ 3.75 ಲಕ್ಷ ಕೋಟಿ ಡಾಲರ್ (307.87 ಲಕ್ಷ ಕೋಟಿ ರೂಪಾಯಿ) ತಲುಪುವ ಮೂಲಕ ದಾಖಲೆ ಬರೆಯಿತು. ಇದರೊಂದಿಗೆ ಭಾರತವು ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕತೆ ಸ್ಥಾನದಲ್ಲಿ ಮುಂದುವರಿಯಿತು. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ- ಮೊದಲ ನಾಲ್ಕು ಸ್ಥಾನದಲ್ಲಿವೆ.
  • ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ಗೀತಾ ಮುದ್ರಣಾಲಯಕ್ಕೆ 2021ನೇ ಸಾಲಿನ “ಗಾಂಧಿ ಶಾಂತಿ ಪ್ರಶಸ್ತಿ’ಯನ್ನು ನೀಡಲು ತೀರ್ಮಾನಿಸಲಾಗಿದೆ.
  • ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಮಲೇಷ್ಯಾದ ಆ್ಯರನ್ ಚಿಯಾ ಮತ್ತು ಸೊಹ ವೂಯಿಯೀಕಾ ವಿರುದ್ಧ ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿ, ಚಾರಿತ್ರಿಕ ದಾಖಲೆಮಾಡಿತು. ಸೂಪರ್ 1000 ಟೂರ್ನಿ ಯಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ಸಾತ್ವಿಕ್ ಮತ್ತು ಚಿರಾಗ್ ಜೋಡಿಯುವಿಶ್ವ ರ‍್ಯಾಂಕಿಂಗ್ನಲ್ಲಿ ಆರನೇ ಸ್ಥಾನದಲ್ಲಿದೆ. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಈ ಜೋಡಿಯು ಚಿನ್ನ ಜಯಿಸಿತ್ತು.ಹೋದ ವರ್ಷ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಸಾಧನೆಮಾಡಿತ್ತು.ಹೋದ ವರ್ಷ ಥಾಮಸ್ ಕಪ್ ಟೂರ್ನಿಯಲ್ಲಿ ಗೆದ್ದ ಭಾರತ ತಂಡದಲ್ಲಿಯೂ ಇದ್ದರು. ಇತ್ಯಿಚಿಗೆ  ದುಬೈನಲ್ಲಿ ನಡೆದಿದ್ದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದರು.