Published on: January 23, 2023

ಚುಟುಕು ಸಮಾಚಾರ – 23 ಜನವರಿ 2023

ಚುಟುಕು ಸಮಾಚಾರ – 23 ಜನವರಿ 2023

  • http://skywaysmedia.co.uk/video/ ನಿಮ್ ಬಸ್’ ಆ್ಯಪ್ http://sasonandpobi.com/reviews/beauty/bathroom-routines-for-kids-using-cottonelle-cottontelleroutine/ : ಬಿಎಂಟಿಸಿಯ ಅಪ್ಲಿಕೇಶನ್ Nimbus ಈ ಗಣರಾಜ್ಯೋತ್ಸವದ ದಿನದಂದು ಪ್ರಾರಂಭವಾಗಲಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ನೈಜ ಸಮಯದಲ್ಲಿ ಬಿಎಂಟಿಸಿಯ ಬಸ್‌ಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳನ್ನು ಪಡೆಯಬಹುದಾಗಿದೆ.
  • ‘ಒಂದು ಕೋಟಿ ಸಸಿ ನೆಡುವ ಯೋಜನೆ’: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಭಾರಿ ಹೊಡೆತ ಬಿದ್ದಿದ್ದ ಬೆಂಗಳೂರಿನಲ್ಲಿ ಒಂದು ಕೋಟಿ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ನಾಗರಿಕ ಆಧಾರಿತ ಉಪಕ್ರಮವೆಂದು ಹೆಸರಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಕೋಟಿ ವೃಕ್ಷ ಸೈನ್ಯ ಎಂಬ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯು ಬೆಂಗಳೂರಿನ ಹಸಿರನ್ನು ಉಳಿಸಿಕೊಳ್ಳುವ ಮತ್ತು ಸ್ಥಳೀಯ ಜಾತಿಯ ಸಸ್ಯಗಳನ್ನು ನೆಡುವ ಗುರಿಯನ್ನು ಹೊಂದಿದೆ.
  • ಕೋವಿಡ್ ಲಸಿಕೆ ಇನ್‌ಕೋವಾಕ್‌: ದೇಶದಲ್ಲಿ ಪ್ರಥಮ ಬಾರಿಗೆ ​ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ (ಮೂಗಿನ ಮೂಲಕ ಲಸಿಕೆ)  ಕೋವಿಡ್ ಲಸಿಕೆ ಇನ್‌ಕೋವಾಕ್‌ ಜನೆವರಿ 26, 2023 ರಂದು ಬಿಡುಗಡೆಯಾಗಲಿದೆ. ಜನವರಿ 26 ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 325 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ800 ರೂಪಾಯಿಗೆ ಈ ಲಸಿಕೆ ಲಭ್ಯವಿರಲಿದೆ. ಕೋವಿನ್‌ ಅಪ್ಲಿಕೇಷನ್‌ ನಲ್ಲಿ ಈಗಾಗಲೇ ಇನ್‌ಕೋವಾಕ್ ಎಂಟ್ರಿಯಾಗಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾಗಿದೆ. ಆದ್ರೆ ಅವರು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ನಂತಹ ಎರಡು ಡೋಸ್‌ಗಳ ಲಸಿಕೆಗಳನ್ನು ಮೊದಲೇ ಪಡೆದಿರಬೇಕಾಗುತ್ತದೆ. ಜಗತ್ತಿನ ಮೊದಲ ಕೋವಿಡ್ ನೇಸಲ್ ಲಸಿಕೆ ಎನ್ನಲಾಗಿರುವ ಇನ್‌ಕೋವಾಕ್ ಅನ್ನು  ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದೆ.
  • ಭಾರತದ ಇತಿಹಾಸಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿರುವ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮದಿನ ಹಿನ್ನೆಲೆಯಲ್ಲಿ ನೇತಾಜಿಯವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗೌರವ ಸಲ್ಲಿಸಿದ್ದಾರೆ.ಭಾರತದಲ್ಲಿ ಜನೆವರಿ 2021 ರಿಂದ  ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಪರಾಕ್ರಮ ದಿವಸ್ ಎಂದು ಆಚರಿಸಲಾಗುತ್ತದೆ.
  • ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್) ಕಾಯಿದೆ 2002ರ ಅಡಿ ರಾಷ್ಟ್ರೀಯ ಮಟ್ಟದ ಬಹುರಾಜ್ಯ ಸಹಕಾರ ರಫ್ತು ಸಂಘವನ್ನು ಸ್ಥಾಪಿಸಿ, ಉತ್ತೇಜನ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿತ ಸಚಿವಾಲಯಗಳು ವಿಶೇಷವಾಗಿ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ‘ಸರ್ಕಾರದ ಸಂಪೂರ್ಣ ವಿಧಾನ ಅನುಸರಿಸುವ ಮೂಲಕ, ತಮ್ಮ ರಫ್ತು ಸಂಬಂಧಿತ ನೀತಿಗಳು, ಯೋಜನೆಗಳು ಮತ್ತು ಏಜೆನ್ಸಿಗಳ ಮೂಲಕ ಸಹಕಾರಿ ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳು ಉತ್ಪಾದಿಸುವ ಎಲ್ಲಾ ಸರಕುಗಳು ಮತ್ತು ಸೇವೆಗಳ ರಫ್ತುಗಳನ್ನು ಕೈಗೊಳ್ಳಲು ಬೆಂಬಲ ನೀಡಲಿವೆ.
  • ಮಾಲ್ಡೀವ್ಸ್ನಲ್ಲಿ ಕ್ರೀಡಾ ಮೂಲಸೌರ್ಕಯಗಳ ಅಭಿವೃದ್ಧಿಗಾಗಿ ಭಾರತವು ಸುಮಾರು ರೂ.3,200 ಕೋಟಿಗೆ ರಿಯಾಯಿತಿ ಸಾಲದ ನೆರವು ವಿಸ್ತರಿಸಿದೆ. ಪ್ರಮುಖವಾದ ‘ಫಿಟ್ ಇಂಡಿಯಾ’ ಮತ್ತು ‘ಖೇಲೊ ಇಂಡಿಯಾ’ ಯೋಜನೆಗಳನ್ನು ನೆರೆಯ ದೇಶಗಳಿಗೂ ನೀಡುವ ಮೊದಲ ವಿದೇಶಿ ನೀತಿಯ ಭಾಗವಾಗಿ ಮಾಲ್ಡೀವ್ಸ್ನಲ್ಲಿ ಕ್ರೀಡಾಸೌಕರ್ಯ ಅಭಿವೃದ್ಧಿಗೆ ನೆರವು ನೀಡಲಾಗುತ್ತಿದೆ.
  • ಕೆನಡಾದ ಮ್ಯಾಕ್ಗಿಲ್ ವಿಶ್ವವಿದ್ಯಾನಿಲಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಖಗೋಳ ಶಾಸ್ತ್ರಜ್ಞರು ಪುಣೆಯ ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (ಜಿಎಂಆರ್ಟಿ) ದತ್ತಾಂಶದ ಮೂಲಕ ದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್ನಿಂದ ಹೊರಹೊಮ್ಮಿದ ರೇಡಿಯೊ ಸಂಕೇತಗಳನ್ನು ಪತ್ತೆ ಮಾಡಿದ್ದಾರೆ.