Published on: February 23, 2023

ಚುಟುಕು ಸಮಾಚಾರ – 23 ಫೆಬ್ರವರಿ 2023

ಚುಟುಕು ಸಮಾಚಾರ – 23 ಫೆಬ್ರವರಿ 2023

  • ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಮೊದಲ ಬಾರಿಗೆ ರಣಹದ್ದುಗಳ ಗಣತಿಯನ್ನು ಫೆಬ್ರುವರಿ 25 ಮತ್ತು 26 ರಂದು ನಡೆಸಲಾಗುವುದು. ನಾಲ್ಕು ಜಾತಿಯ ರಣಹದ್ದುಗಳು ದಕ್ಷಿಣ ಭಾರತದಲ್ಲಿ ಕಂಡುಬರುತ್ತವೆ ಮತ್ತು ಇವೆಲ್ಲವೂ ನೀಲಗಿರಿ ಜೈವಿಕ ವಲಯದಲ್ಲಿ ಕೇಂದ್ರೀಕೃತವಾಗಿವೆ. ಈ ಗಣತಿಯು ಅವುಗಳ ಸಂಖ್ಯೆ ಮತ್ತು ಆವಾಸಸ್ಥಾನದ ಬಗ್ಗೆ ಹೆಚ್ಚು ನಿಖರವಾದ ಅಂದಾಜನ್ನು ಪಡೆಯಲು ಸಹಾಯ ಮಾಡುತ್ತದೆ. ನಿಖರವಾದ ಸಂಖ್ಯೆಯನ್ನು ಒಮ್ಮೆ ಅಂದಾಜಿಸಿದರೆ, ಅವುಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು.
  • ಮಹಿಳೆಯರು ಕಾರ್ಖಾನೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023 ಅನ್ನು ರಾಜ್ಯ ವಿಧಾನಸಭೆ ಅಂಗೀಕರಿಸಿದೆ. ಕೆಲಸದ ಅವಧಿಯನ್ನು 9ರಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಅವಕಾಶ ಮಾಡಿಕೊಡಲಾಗುತ್ತದೆ. ದೈನಂದಿನ ಗರಿಷ್ಠ ಕೆಲಸದ ಅವಧಿ ಹೆಚ್ಚಿಸಲು ಅನುಕೂಲವಾಗುವಂತೆ ಕಾರ್ಖಾನೆಗಳ ಯಾವುದೇ ಗುಂಪು ಅಥವಾ ವರ್ಗ, ಕಾರ್ಮಿಕನ ಒಟ್ಟು ಕೆಲಸದ ಅವಧಿಯನ್ನು ವಿರಾಮ ಇಲ್ಲದೆ 6 ಗಂಟೆಗಳ ವರೆಗೂ ವಿಸ್ತರಿಸಬಹುದಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
  • ಸಂಸ್ಕೃತಿ ಸಚಿವಾಲಯವು 2023 ರ ಫೆಬ್ರವರಿ 22 ರಿಂದ 25 ರವರೆಗೆ ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊದಲ್ಲಿ ಸಂಸ್ಕೃತಿ ವರ್ಕಿಂಗ್ ಗ್ರೂಪ್ (CWG) ನ ಮೊದಲ ಸಭೆಯನ್ನು ಆಯೋಜಿಸಿದೆ.
  • ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದುಗೊಳಿಸಿದ 3 ವರ್ಷಗಳ ಬಳಿಕ ಏ.1 ರಿಂದ ಆಸ್ತಿ ತೆರಿಗೆ ವಿಧಿಸುವುದು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರುತ್ತಿದೆ.
  • ಮಣಿಪುರ ರಾಜ್ಯವು B20 ಸಮ್ಮೇಳನವನ್ನು ಆಯೋಜಿಸಿತು. ಈಶಾನ್ಯ ಭಾರತದಲ್ಲಿ ನಿಗದಿಪಡಿಸಲಾದ ಜಾಗತಿಕ ವ್ಯಾಪಾರ ಸಮುದಾಯದ ಅಧಿಕೃತ G20 ಸಂವಾದ ವೇದಿಕೆಯಾದ B20 ನ ನಾಲ್ಕು ಅವಧಿಗಳಲ್ಲಿ ಇದು ಮೊದಲನೆಯದು.
  • ಪ್ರತಿ ವರ್ಷ ಫೆಬ್ರವರಿ 21 ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದೆಲ್ಲೆಡೆ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಕುರಿತ ಅರಿವನ್ನು ಉತ್ತೇಜಿಸುವುದು. ಈ ವರ್ಷದ ವಿಷಯ: “ಬಹುಭಾಷಾ ಶಿಕ್ಷಣ – ಶಿಕ್ಷಣವನ್ನು ಪರಿವರ್ತಿಸುವ ಅವಶ್ಯಕತೆ” ಮೊದಲ ಬಾರಿಗೆ, ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಕಲ್ಪನೆಯನ್ನು ಮಾಡಿದ್ದು ಬಾಂಗ್ಲಾದೇಶ.
  • ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರದಲ್ಲಿ ಲಿಪ್ಯಂತರ ಮಾಡುವ ಕಾರ್ಯಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ಕೆ ಕೃತಕ ಬುದ್ಧಿಮತ್ತೆ (ಎಐ) ಹಾಗೂ ‘ನೈಸರ್ಗಿಕ ಭಾಷಾ ಸಂಸ್ಕರಣಾ ತಂತ್ರಜ್ಞಾನ’ (ಎನ್ಎಲ್ಪಿಟಿ) ವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಮೂಲಗಳು ಹೇಳಿವ ಪೀಠವು ನಡೆಸಿದ ಪ್ರಕರಣವೊಂದರ ವಿಚಾರಣೆಯನ್ನು ಈ ತಂತ್ರಜ್ಞಾನಗಳನ್ನು ಬಳಸಿ, ಲಿಪ್ಯಂತರ ಮಾಡಲಾಯಿತು. ಲಿಪ್ಯಂತರ ಮಾಡಲಾದ ಮಾಹಿತಿಯನ್ನು ವಕೀಲರಿಗೆ ನೀಡಲಾಗುತ್ತದೆ. ಅವರು ಪರಿಶೀಲನೆ ನಡೆಸಿದ ಬಳಿಕ, ಅದನ್ನು ಸುಪ್ರೀಂ ಕೋರ್ಟ್‌ನ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
  • ಶ್ರೀನಗರ ವಲಯದಲ್ಲಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್ ತನ್ನ ಮೊದಲ ಮಹಿಳಾ ಇನ್ಸ್‌ಪೆಕ್ಟರ್ ಜನರಲ್(ಐಜಿ) ಚಾರು ಸಿನ್ಹಾ ಅವರಿಗೆ ವಿದಾಯ ಹೇಳಿದ್ದು, ಅವರು ಮಧ್ಯ ಕಾಶ್ಮೀರದಲ್ಲಿ ಎರಡೂವರೆ ವರ್ಷಗಳ ಅತ್ಯಂತ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಹೈದರಾಬಾದ್‌ಗೆ ವರ್ಗಾವಣೆಗೊಂಡಿದ್ದಾರೆ.
  • ಒಡಿಶಾದ ಗ್ರಾಮದಲ್ಲಿನ ಅಂಗವಿಕಲ ಫಲಾನುಭವಿಗೆ ಪಿಂಚಣಿ ವಿತರಣೆ ಮಾಡಲು ಡ್ರೋನ್ ಬಳಕೆ ಮಾಡಲಾಯಿತು. ಭಾರತದಲ್ಲಿ ನಗದು ವಿತರಣೆಯು ಈ ರೀತಿಯ ಮೊದಲ ಉಪಕ್ರಮವಾಗಿದೆ.