Published on: January 24, 2023

ಚುಟುಕು ಸಮಾಚಾರ – 24 ಜನವರಿ 2023

ಚುಟುಕು ಸಮಾಚಾರ – 24 ಜನವರಿ 2023

  • ಪ್ರತಿ ವರ್ಷ rateably ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಮೊದಲ ಬಾರಿಗೆ 2008 ರಲ್ಲಿ ಆಚರಣೆ ಮಾಡಲಾಯಿತು. ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮತ್ತು ಕೇಂದ್ರ ಸರ್ಕಾರದಿಂದ ಈ ದಿನ ಆಚರಣೆಯನ್ನು ಆರಂಭಿಸಲಾಯಿತು.
  • ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ Mbala ಐಎನ್ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.• ವಾಗಿರ್ ಅಂದರೆ ‘ ಮರಳು ಷಾರ್ಕ್’ , ರಹಸ್ಯ, ನಿರ್ಭಯತೆಯನ್ನು ಪ್ರತಿಬಿಂಬಿಸುತ್ತದೆ. ಐಎನ್ಎಸ್ ವಾಗಿರ್ ಅನ್ನು ಫ್ರಾನ್ಸ್ ತಂತ್ರಜ್ಞಾನದೊಂದಿಗೆ ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.
  • ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆ ಸೃಷ್ಟಿಸುವ ನೋರೊ ವೈರಸ್ ಸೋಂಕು ಕೇರಳದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ತಗುಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದೊಂದು ವೈರಲ್ ಸೋಂಕಾಗಿದ್ದು, ತೀವ್ರ ವಾಂತಿ ಮತ್ತು ಭೇದಿ ಕಾಡುತ್ತದೆ. ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುತ್ತದೆ.