Published on: January 25, 2024

ಚುಟುಕು ಸಮಾಚಾರ : 24 ಜನವರಿ 2024

ಚುಟುಕು ಸಮಾಚಾರ : 24 ಜನವರಿ 2024

  • ಕೇಂದ್ರ ಸರ್ಕಾರ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ. ಕರ್ಪೂರಿ ಠಾಕೂರ್ ಅವರ 24 ಜನವರಿ 2024 ರಂದು ಜನ್ಮದಿನವನ್ನು ಆಚರಿಸಲಾಗುತ್ತಿದೆ, ಅದಕ್ಕೂ ಮುನ್ನ ಪ್ರಶಸ್ತಿಯನ್ನು ನೀಡಿ ಗೌರಿಸಲಾಯಿತು.
  • ಇಂಡೊನೇಷ್ಯಾದ ಮೌಂಟ್ ಮೆರಪಿಯಲ್ಲಿ ಜ್ವಾಲಾಮುಖಿಗಳು ಸ್ಫೋಟಗೊಂಡ ಪರಿಣಾಮ ಅನಿಲದ ದಟ್ಟ ಹೊಗೆ ಆವರಿಸಿದೆ ಮತ್ತು ಲಾವಾ ಹೊರಸೂಸಿದೆ. ಹೀಗಾಗಿ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
  • ದ್ವೀಪರಾಷ್ಟ್ರ ಮಾಲ್ದೀವ್ಸ್ ನಿಂದ ಮಾರ್ಚ್ 15ರ ಒಳಗೆ ತನ್ನ ಸೇನೆಯನ್ನು ವಾಪಸು ಕರೆಯಿಸಿಕೊಳ್ಳಬೇಕು’ ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ ಅವರು ಭಾರತ ಸರ್ಕಾರಕ್ಕೆ ಕೋರಿದ್ದಾರೆ. ಮಾಲ್ಡೀವ್ಸ್ ಸಹ ಚೀನಾದೊಂದಿಗೆ ಹೊಸ ಒಪ್ಪಂದಗಳಿಗೆ ಸಹಿ ಹಾಕಿದೆ, ಇದು ಭೌಗೋಳಿಕ ರಾಜಕೀಯ ಭೂದೃಶ್ಯವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.