Published on: July 30, 2023

ಚುಟುಕು ಸಮಾಚಾರ : 29 ಜುಲೈ 2023

ಚುಟುಕು ಸಮಾಚಾರ : 29 ಜುಲೈ 2023

  • ಪ್ರತಿ ವರ್ಷ ಜುಲೈ 29 ರಂದು ‘ಹುಲಿ ದಿನ’ವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಂಡುಬರುತ್ತವೆ. ಈ ಹಿನ್ನಲೆಯಲ್ಲಿ ಹುಲಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.
  • ಜೈವಿಕ ಬೇಲಿಯೊಂದಿಗೆ ಕರ್ನಾಟಕ ರಾಜ್ಯದಲ್ಲಿ 100 ಕೆರೆಗಳು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಯಾಗುತ್ತಿದ್ದು, ಕಾಂಕ್ರೀಟ್, ಪೇವರ್ಸ್ಗಳನ್ನು ಅಳವಡಿಸದೆ ಜೈವಿಕ ತಡೆಗೋಡೆಗಳೊಂದಿಗೆ ‘ಹಸಿರು ಸರೋವರ’ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ‘ಅಮೃತ ಸರೋವರ ಕಾರ್ಯಕ್ರಮದಲ್ಲಿ ‘ಹಸಿರು ಸರೋವರ ಅಭಿಯಾನವನ್ನು’ ಆಯೋಜಿಸಲಾಗಿದೆ.
  • ದೇಶದ ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ‘ಉದ್ಯೋಗ ರತ್ನ‘ ಪ್ರಶಸ್ತಿ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಪ್ರಶಸ್ತಿಯ ಮೊದಲನೆ ಅವತರಣಿಕೆ ಇದಾಗಿದೆ. ‘ಖ್ಯಾತನಾಮರಿಗೆ ಮಹಾರಾಷ್ಟ್ರ ಭೂಷಣ ಪ್ರಶಸ್ತಿಪ್ರದಾನ ಮಾಡುವ ಹಾಗೆ, ರತನ್ ಟಾಟಾ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿನೀಡಲು ಸರ್ಕಾರ ತೀರ್ಮಾನಿಸಿದೆ’.
  • ದೆಹಲಿಯ ಪ್ರಗತಿ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತರರಾಷ್ಟ್ರೀಯ ಪ್ರದರ್ಶನ ಹಾಗೂ ಸಮ್ಮೇಳನ ಕೇಂದ್ರ(ಐಇಸಿಸಿ)ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.