Published on: September 2, 2023

ಚುಟುಕು ಸಮಾಚಾರ : 31 ಆಗಸ್ಟ್ 2023

ಚುಟುಕು ಸಮಾಚಾರ : 31 ಆಗಸ್ಟ್ 2023

  • ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ರಾಯಭಾರ ವ್ಯವಹಾರಗಳ ಪ್ರಭಾರ ಮುಖ್ಯಸ್ಥರಾಗಿ ಗೀತಿಕಾ ಶ್ರೀವಾಸ್ತವ್ ಅವರನ್ನು ನೇಮಿಸಲಾಗಿದೆ. ಈ ಮೂಲಕ ಆ ಹುದ್ದೆಗೇರಿದ ಪ್ರಥಮ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಗೀತಿಕಾ ಪಾತ್ರರಾಗಿದ್ದಾರೆ.
  • ಮಿಜೋರಾಂ ತನ್ನ ರಾಜಧಾನಿ ಐಜ್ವಾಲ್ನಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್(ಎಬಿಡಿಎಂ) ಮೈಕ್ರೋಸೈಟ್ ಅನ್ನು ಕಾರ್ಯಗತಗೊಳಿಸಿದ ಮೊದಲ ರಾಜ್ಯವಾಗುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ.
  • ಚಂದ್ರಯಾನ-3 ಬಾಹ್ಯಾಕಾಶ ನೌಕೆ ಅಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ಇಳಿದ ಸಂಭ್ರಮದ ನೆನಪಿಗಾಗಿ, ಕೇಂದ್ರ ಸಂಪುಟ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸುವುದಾಗಿ ಘೋಷಿಸಿದೆ.