Published on: January 31, 2023

ಚುಟುಕು ಸಮಾಚಾರ -31 ಜನವರಿ 2023

ಚುಟುಕು ಸಮಾಚಾರ -31 ಜನವರಿ 2023

 • ಅರಣ್ಯ ಇಲಾಖೆಯು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕು ದಿನಗಳ ಪಕ್ಷಿ ಸಮೀಕ್ಷೆ ನಡೆಯಿತು. ಜೀವ ವೈವಿಧ್ಯತೆಯಲ್ಲಿ ಅಮೆಜಾನ್ ಅರಣ್ಯ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವುದು ಪಶ್ಚಿಮ ಘಟ್ಟ. ಬಿಆರ್ಟಿ ಅರಣ್ಯವು ಪಶ್ಚಿಮ ಘಟ್ಟದ ವಿಸ್ತರಿತ ಪ್ರದೇಶ. 274 ಪಕ್ಷಿಗಳನ್ನು ಗುರುತಿಸಿದ್ದಾರೆ’.
 • 2023 ಜನವರಿ 13 ರಿಂದ 29ರ ವರೆಗೆ ಭಾರತದಲ್ಲಿ FIH ಪುರುಷರ ಹಾಕಿ ವಿಶ್ವಕಪ್ ನಡೆಯಿತು.ವಿಜೇತ ತಂಡ : ಜರ್ಮನಿ, 2 ನೇ ಸ್ಥಾನ : ಬೆಲ್ಜಿಯಂ, 3 ನೇ ಸ್ಥಾನ ನೆದರ್ಲ್ಯಾಂಡ್ಸ್, 4 ನೇ ಸ್ಥಾನ: ಆಸ್ಟ್ರೇಲಿಯಾ. ನಾಲ್ಕು ಬಾರಿ ಪುರುಷರ ವಿಶ್ವಕಪ್ ಆಯೋಜನೆ ಮಾಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ.
 • ಜನವರಿ 31ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತದೆ. ಅದಕ್ಕೂ ಮುನ್ನ ಬಜೆಟ್ ಅಧಿವೇಶನದಲ್ಲಿ ಜನವರಿ 31ರಂದು ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ಜನವರಿ 31ರಂದು 2022-2023ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡುತ್ತದೆ.
 • ಜನವರಿ 30, 1948 – ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ. ಈ ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. (ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಸರ್ವೋದಯ ದಿನ ಎಂದೂ ಕರೆಯಲಾಗುತ್ತದೆ).ಈ ದಿನವನ್ನು ಅಹಿಂಸೆ ಮತ್ತು ಶಾಂತಿಯ ದಿನವಾಗಿಯೂ ಆಚರಿಸಲಾಗುತ್ತದೆ.
 • ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಮಟ್ಟದ ಸಮೀಕ್ಷೆಯ (2020-21) ವರದಿ ಪ್ರಕಟವಾಗಿದ್ದು, ಉತ್ತರ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಒಟ್ಟು 8,114 ಕಾಲೇಜುಗಳಿವೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (4,532), ಮೂರನೇ ಸ್ಥಾನದಲ್ಲಿ ಕರ್ನಾಟಕ (4,233) ಇದೆ. ಶಿಕ್ಷಣ ಸಚಿವಾಲಯ ಈ ವರದಿಯನ್ನು ಬಿಡುಗಡೆ ಮಾಡಿದೆ.
 • ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್-19 ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶೆಫಾಲಿ ವರ್ಮಾ ನೇತೃತ್ವದ ಭಾರತದ ತಂಡ 7 ವಿಕೆಟ್ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ.

ಭಾರತದ ಐಸಿಸಿ ವಿಶ್ವಕಪ್ ಪ್ರಶಸ್ತಿಗಳು                               ನಾಯಕರು

 1. ಏಕದಿನ ವಿಶ್ವಕಪ್ 1983 –           ಕಪಿಲ್ ದೇವ್
 2. 19 ವರ್ಷದೊಳಗಿನವರ ವಿಶ್ವಕಪ್ 2000 –          ಮೊಹಮ್ಮದ್ ಕೈಫ್
 3. ಟಿ20 ವಿಶ್ವಕಪ್ 2007 –        ಎಂ.ಎಸ್. ಧೋನಿ
 4. 19 ವರ್ಷದೊಳಗಿನವರ ವಿಶ್ವಕಪ್ 2008 –        ವಿರಾಟ್ ಕೊಹ್ಲಿ
 5. ಏಕದಿನ ವಿಶ್ವಕಪ್ 2011 –        ಎಂ.ಎಸ್. ಧೋನಿ
 6. 19 ವರ್ಷದೊಳಗಿನವರ ವಿಶ್ವಕಪ್ 2012 –         ಉನ್ಮುಕ್ತ್ ಚಾಂದ್
 7. 19 ವರ್ಷದೊಳಗಿನವರ ವಿಶ್ವಕಪ್ 2018 –        ಪೃಥ್ವಿ ಶಾ
 8. 19 ವರ್ಷದೊಳಗಿನವರ ವಿಶ್ವಕಪ್ 2022 –          ಯಶ್ ಧುಳ್
 9. 19 ವರ್ಷದೊಳಗಿನವರ ಟಿ20 ವಿಶ್ವಕಪ್ 2023 –         ಶೆಫಾಲಿ ವರ್ಮಾ
 • ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿದ್ದು, ಈ ಗೆಲುವಿನ ಮೂಲಕ ಸ್ಪೇನ್‌ನ ರಫೆಲ್ ನಡಾಲ್ ಅವರ ದಾಖಲೆಯ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸಾಧನೆಯನ್ನು ಜಾಕೋವಿಚ್ ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೆ ದಾಖಲೆಯ 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿ ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ.