Published on: June 2, 2023

ಚುಟುಕು ಸಮಾಚಾರ : 31 ಮೇ 2023

ಚುಟುಕು ಸಮಾಚಾರ : 31 ಮೇ 2023

  • ಜರ್ಮನಿಯಲ್ಲಿ ನಡೆಯುತ್ತಿರುವ 2023ನೇ ಸಾಲಿನ ‘ಅಂತಾರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಸಮಾವೇಶ’ದಲ್ಲಿ ವಿಶ್ವದ 500 ಶಕ್ತಿಶಾಲಿ ಎಐ ಸೂಪರ್ ಕಂಪ್ಯೂಟರ್ಗಳನ್ನು ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಭಾರತದ ‘ಐರಾವತ್’ ಗೆ 75ನೇ ಸ್ಥಾನ ಸಿಕ್ಕಿದೆ. ಮಹಾರಾಷ್ಟ್ರದ ಪುಣೆಯ ಸಿ-ಡಾಕ್ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ ಈ ನೆಟ್ವೆಬ್ ಟೆಕ್ನಾಲಜೀಸ್ ಎಂಬ ಸಂಸ್ಥೆ ಸಂಸ್ಥೆ ತಯಾರಿಸಿರುವ ಸೂಪರ್ ಕಂಪ್ಯೂಟರ್ ಆಗಿದೆ
  • ಭಾರತೀಯ ಸೇನಾಪಡೆಗೆ ಮಹತ್ವದ ಸೇರ್ಪಡೆಯಾಗಲಿರುವ ವೇದ ಎಸ್ ಎಲ್ ವಿ ಯ ಯೋಜನೆಯನ್ನು ಡಿಆರ್ಡಿಒ ಕೈಗೆತ್ತಿಕೊಂಡಿದ್ದು, ಪರೀಕ್ಷಾ ಪ್ರಯೋಗಗಳು ಶೀಘ್ರವಾಗಿ ಆರಂಭಗೊಳ್ಳುವ ನಿರೀಕ್ಷೆಗಳಿವೆ. ಪ್ರಾಜೆಕ್ಟ್ ವೇದ ಅಥವಾ ವೆಹಿಕಲ್ ಫಾರ್ ಡಿಫೆನ್ಸ್ ಅಪ್ಲಿಕೇಶನ್ ಇದು ಒಂದು ಭಾರತೀಯ ಸೇನಾಪಡೆಗಳಿಗೆ ಅಗತ್ಯವಿರುವ ನೂತನ ಉಪಗ್ರಹ ಉಡಾವಣಾ ವಾಹನ (ಎಸ್ಎಲ್ವಿ) ನಿರ್ಮಾಣದ ಕುರಿತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಕೈಗೊಂಡಿರುವ ಯೋಜನೆಯಾಗಿದೆ.
  • ವಿಶೇಷ ವೈದಿಕ ಥೀಮ್ ಪಾರ್ಕ್ ಅನ್ನು ನೋಯ್ಡಾದಲ್ಲಿ ಸ್ಥಾಪಿಸಲಾಗುತ್ತಿದೆ. ನಾಲ್ಕು ವೇದಗಳಾದ ಋಗ್ವೇದ, ಅಥರ್ವವೇದ, ಯಜುರ್ವೇದ ಮತ್ತು ಸಾಮ ವೇದಗಳ ಆಯ್ದ ಭಾಗಗಳನ್ನು ಲೇಸರ್ ಶೋಗಳು ಹಾಗು ವಾಲ್ ಪೇಂಟಿಂಗ್ನ ಮೂಲಕ ತಿಳಿಸಿಕೊಡಲಾಗುತ್ತದೆ.
  • ಯುಎಇಯ ಪ್ರಮುಖ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬಿಟ್‌ ಪಿಲಾನಿ ದುಬೈ ಕ್ಯಾಂಪಸ್ ಇತ್ತೀಚೆಗೆ ದುಬೈನ ಸನದ್ ಅಕಾಡೆಮಿಯಲ್ಲಿ ಡ್ರೋನ್ ಉಪಗ್ರಹ ಉಡಾವಣಾ ವಾಹಕ (ಡಿಎಸ್‌ಎಲ್‌ವಿ) ಬಳಸಿ 5 ಪಿಕೊ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಪಿಕೊ ಉಪಗ್ರಹಗಳು ತಾಪಮಾನ, ತೇವಾಂಶ, ಒತ್ತಡ, ಗಾಳಿಯ ಗುಣಮಟ್ಟ, ಯುವಿ ತೀವ್ರತೆ ಮತ್ತು ದೃಷ್ಟಿಕೋನದ ನೈಜ ಸಮಯದ ಡೇಟಾವನ್ನು ರವಾನಿಸುವ ಸಾಮರ್ಥ್ಯ ಹೊಂದಿವೆ. ಮೂನ್ ಮ್ಯಾನ್ ಆಫ್ ಇಂಡಿಯಾದ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ಮತ್ತು ಯುಎಇ ಮೂಲದ ಎಡ್ಯೂಟೆಕ್ 4 ಸ್ಪೇಸ್ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು.
  • ಈಶಾನ್ಯ ಭಾರತದ ಮೊದಲ ವಂದೇ ಭಾರತ ರೈಲು :ಗುವಾಹಟಿ ರೈಲು ನಿಲ್ದಾಣದಿಂದ ನ್ಯೂ ಜಲ್ಪೈಗುರಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುವ  ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು.
  • ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ರೂ ಗೆ ಸಂಸ್ಥೆಯೊಂದು ಖರೀದಿಸಿದೆ. ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖರೀದಿದಾರರ ಹೆಸರನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004 ರಲ್ಲಿ ವಿಜಯ್‌ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು.
  • ತಂಬಾಕು ಸೇವನೆಯಿಂದಾಗುವ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಭವಿಷ್ಯದ ಪೀಳಿಗೆಯನ್ನು ರಕ್ಷಿಸಿ 2023 ರಲ್ಲಿ, ವಿಶ್ವ ತಂಬಾಕು ರಹಿತ ದಿನವನ್ನು “ನಮಗೆ ಆಹಾರ ಬೇಕು, ತಂಬಾಕು ಅಲ್ಲ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.