Published on: January 4, 2023

ಚುಟುಕು ಸಮಾಚಾರ – 4 ಜನವರಿ 2023

ಚುಟುಕು ಸಮಾಚಾರ – 4 ಜನವರಿ 2023

  • buy modafinil chemist warehouse ಇ-ಆಡಳಿತ ಯೋಜನೆಯನ್ನು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೇವಾ) ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಎಂಎಲ್ಸಿ ಮತ್ತು ವಕೀಲ ರಮೇಶ್ ಬಾಬು ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
  • Ytrebygda ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜ.02 ರಂದು ಸಂಜೆ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆ ಆಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ವಿಜಯಪುರ ಜೀವಂತ ದೇವರು ಎಂದು ಪ್ರಸಿದ್ಧರಾದ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರು ಕರ್ನಾಟಕ ರಾಜ್ಯ ವಿಜಯಪೂರ ಜಿಲ್ಲೆ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ.
  • ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿಭೂಪೇಂದ್ರ ಯಾದವ್ ಅವರು ಚಾಮರಾಜನಗರ ಜಿಲ್ಲೆಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವನ್ಯಜೀವಿ ಸಫಾರಿ ಕಾರ್ಯಕ್ರಮ ‘ ಬಂಡಿಪುರ ಯುವ ಮಿತ್ರ’ಕ್ಕೆ ಚಾಲನೆ ನೀಡಿದರು.
  • ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ ವಿವಿಯಲ್ಲಿ ನಡೆಯುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ನ ಉದ್ಘಾಟನಾ ಅಧಿವೇಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದರು.
  • ವಿಶ್ವದ ಅತ್ಯಂತ ಎತ್ತರದ ಕದನ ಭೂಮಿ ಭಾರತದ ಸಿಯಾಚಿನ್ ನೀರ್ಗಲ್ಲಿನ ಕುಮಾರ್ ಪೋಸ್ಟ್ ಯುದ್ಧಭೂಮಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೊದಲ ಮಹಿಳಾ ಅಧಿಕಾರಿ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಆಗಿದ್ದಾರೆ.ರಾಜಸ್ಥಾನ ಮೂಲದ ಇವರು ಉದಯ್ಪುರದ ಎನ್ಜೆಆರ್ ತಾಂತ್ರಿಕ ಸಂಸ್ಥೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಚೆನ್ನೈನಲ್ಲಿ ತರಬೇತಿ ಪಡೆದ ಬಳಿಕ 2012ರ ಮೇನಲ್ಲಿ ಎಂಜಿನಿಯರಿಂಗ್ ರೆಜಿಮೆಂಟ್ಗೆ ನಿಯೋಜನೆಗೊಂಡಿದ್ದರು.
  • ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ (ಬಿಗ್ ಕ್ಯಾಟ್ಸ್) ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.ಮೈಸೂರು ಮೂಲದ ನೇಚರ್ ಕನ್ಸರ್ವೇಶನ್ ಫೌಂಡೇಶನ್ (ಎನ್ಸಿಎಫ್) ಸಹಾಯದಿಂದ ಹಿಮಾಚಲ ಪ್ರದೇಶದ ವನ್ಯಜೀವಿಗಳ ಕುರಿತು ಮೊದಲ ಬಾರಿಗೆ ಅಧ್ಯಯನ ನಡೆಸಲಾಗಿದ್ದು, ಪ್ರಸ್ತುತ ಹಿಮ ಚಿರತೆಯ ಸಂಖ್ಯೆ 52 ರಿಂದ 73 ರ ನಡುವೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.