Published on: March 7, 2023

ಚುಟುಕು ಸಮಾಚಾರ – 7 ಮಾರ್ಚ್ 2023

ಚುಟುಕು ಸಮಾಚಾರ – 7 ಮಾರ್ಚ್ 2023

  • ಫೆಬ್ರವರಿ 28 ರಂದು ಆಚರಿಸಲಾಗುವ ರಾಷ್ಟ್ರೀಯ ವಿಜ್ಞಾನ ದಿನದ ಗೌರವಾರ್ಥವಾಗಿ ಭಾರತ ಸರ್ಕಾರವು ವೈಭವ್ ಫೆಲೋಶಿಪ್ ಯೋಜನೆಯನ್ನು ಪ್ರಾರಂಭಿಸಿತು. ವಿದೇಶಿ ಸಂಸ್ಥೆಗಳಿಂದ ಭಾರತಕ್ಕೆ ಶಿಕ್ಷಕರು/ಸಂಶೋಧಕರ ಚಲನಶೀಲತೆಯ ಮೂಲಕ ಭಾರತೀಯ ಸಂಸ್ಥೆಗಳು ಮತ್ತು ವಿಶ್ವದ ಅತ್ಯುತ್ತಮ ಸಂಸ್ಥೆಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗದ ಮೂಲಕ ಭಾರತವನ್ನು ಉತ್ತೇಜಿಸುವುದು ವೈಭವ್ ಫೆಲೋಶಿಪ್ನ ಉದ್ದೇಶವಾಗಿದೆ.
  • “ಭಾರತೀಯ ರಾಜ್ಯಗಳ’ ಶಕ್ತಿ ಪರಿವರ್ತನೆ’ ವರದಿಯ ಪ್ರಕಾರ ಕರ್ನಾಟಕ ಮತ್ತು ಗುಜರಾತ್ ಶುದ್ಧ ವಿದ್ಯುತ್ ಪರಿವರ್ತನೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿವೆ. ವರದಿಯನ್ನು ಬಿಡುಗಡೆ ಮಾಡಿದವರು : ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಾಲಿಸಿಸ್ (IEEFA) ಮತ್ತು EMBER ಬಿಡುಗಡೆ ಮಾಡಿದೆ.
  • ಏಪ್ರಿಲ್ 1 ರಿಂದ ಭಾರತದಲ್ಲಿ ಆಭರಣ ವ್ಯಾಪಾರಿಗಳು ಆರು ಅಂಕಿಯ ಆಲ್ಫಾನ್ಯೂಮರಿಕ್ ಹಾಲ್ ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ(ಹೆಚ್ಯುಐಡಿ) ಎಂದು ಗುರುತಿಸಲಾದ ಚಿನ್ನ ಮಾರಾಟ ಮಾಡಬೇಕೆಂದು ಸರ್ಕಾರ ಘೋಷಿಸಿದೆ.
  • ಗುರುಡೊಂಗ್ಮಾರ್ ಸರೋವರ : ಗುರುಡೊಂಗ್ಮಾರ್ ಸರೋವರವು ಸಿಕ್ಕಿಂನ ಮಂಗನ್ ಜಿಲ್ಲೆಯಲ್ಲಿ ಸುಮಾರು 17,800 ಅಡಿ ಎತ್ತರದಲ್ಲಿದೆ. ಇದು ಭಾರತ-ಚೀನಾ ಗಡಿಗೆ ಸಮೀಪದಲ್ಲಿದೆ. ಇದು ಭಾರತದ ಅತಿ ಎತ್ತರದ ಸರೋವರಗಳಲ್ಲಿ ಒಂದಾಗಿದೆ. ಈ ಸರೋವರವು ಗ್ರೇಟ್ ಹಿಮಾಲಯದಲ್ಲಿದೆ ಮತ್ತು ಇದನ್ನು ಬೌದ್ಧರು, ಸಿಖ್ಖರು ಮತ್ತು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಟಿಬೆಟಿಯನ್ ಬೌದ್ಧಧರ್ಮದ ಸ್ಥಾಪಕ ಗುರು ಪದ್ಮಸಂಭವ ಅವರ ಹೆಸರನ್ನು ಇಡಲಾಗಿದೆ. 8ನೇ ಶತಮಾನದಲ್ಲಿ ಗುರು ಪದ್ಮಸಂಭವರು ಈ ಸರೋವರಕ್ಕೆ ಭೇಟಿ ನೀಡಿದ್ದರು.
  • ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್‌ಕೆ) ಜೊತೆ ಮಾಡಿಕೊಂಡಿದ್ದ ‘ಸಿಸ್ಟರ್‌ ಸಿಟಿ ಒಪ್ಪಂದ’ವನ್ನು ಅಮೆರಿಕದ ನೆವಾರ್ಕ್ ನಗರ ರದ್ದುಗೊಳಿಸಿದೆ. ಕೈಲಾಸ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನು ಗಮನಿಸಲಾಯಿತು. ಈ ಹಿಂದೆ ವಂಚನೆ ಇರುವುದು ಖಚಿತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ನೆವಾರ್ಕ್ ನಗರದ ಸಂವಹನ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಹೇಳಿದ್ದಾರೆ. ‘ಸಿಸ್ಟರ್‌ ಸಿಟಿ ಒಪ್ಪಂದ’ : ಒಂದು ದೇಶದ ನಗರ ಆಡಳಿತವು ಮತ್ತೊಂದು ದೇಶದ ನಗರದೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಗೆಯಾಗಿದೆ. ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧಗಳ ವೃದ್ಧಿ ಈ ಒಪ್ಪಂದದ ಉದ್ದೇಶವಾಗಿರುತ್ತದೆ. ‘2019 ರಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ) ಸ್ಥಾಪಿಸಲಾಗಿದೆ.
  • 2022ರ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ರಷ್ಯಾದ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ಅಲೆಸ್‌ ಬಿಯಾಲಿಯಾಟ್‌ಸ್ಕಿ ಅವರಿಗೆ ಬೆಲಾರಸ್‌ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ‘ವಯಸ್ನಾ ಮಾನವ ಹಕ್ಕು ಕೇಂದ್ರ’ದ ಸ್ಥಾಪಕ ಅಲೆಸ್‌ ಹಾಗೂ ಇತರ ಮೂವರು ಸಹೋದ್ಯೋಗಿಗಳು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ.