Published on: March 9, 2023

ಚುಟುಕು ಸಮಾಚಾರ – 9 ಮಾರ್ಚ್ 2023

ಚುಟುಕು ಸಮಾಚಾರ – 9 ಮಾರ್ಚ್ 2023

  • buy clomid pct ಕರ್ನಾಟಕದ ಎಲ್ಲಾ ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI) ಸುಧಾರಣೆಯನ್ನು ದಾಖಲಿಸಿವೆ. ಆದರೆ ಬಡತನ ಮತ್ತು ಅಪೌಷ್ಟಿಕತೆಯಿಂದಾಗಿ ಒಂದು “ಪ್ರಮುಖ” ಮತ್ತು “ದೊಡ್ಡ” ಸವಾಲಾಗಿದೆ. ಪ್ರಸ್ತುತ ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದ ಸರಾಸರಿ ಶೇ 45.9ರಷ್ಟಿದ್ದು, ಕರ್ನಾಟಕದ ಸರಾಸರಿ ಅದಕ್ಕಿಂತ ಹೆಚ್ಚಿದೆ’. ಇದೇ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಬಹುಆಯಾಮದ ಬಡತನ ಸೂಚ್ಯಂಕಗಳನ್ನು ಅಂದಾಜು ಮಾಡಲಾಗಿದೆ.
  • ಜನರಲ್ಲಿ where to buy Clomiphene in nigeria ಡಿಜಿಟಲ್’ ಪೇಮೆಂಟ್ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ San Fernando de Monte Cristi ಹರ್ ಪೇಮೆಂಟ್ ಡಿಜಿಟಲ್ ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ. ಥೀಮ್: ಡಿಜಿಟಲ್ ಪೇಮೆಂಟ್ ಅಪ್ನಾವೋ, ಔರೋ  ಕೊ ಭಿ ಸಿಖಾವೋ ( ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಿ ಮತ್ತು ಇತರರಿಗೂ ಕಲಿಸಿ). ಉಪಕ್ರಮದ ಅಡಿಯಲ್ಲಿ, 75 ಡಿಜಿಟಲ್ ಗ್ರಾಮಗಳ ಕಾರ್ಯಕ್ರಮದಲ್ಲಿ, ಪೇಮೆಂಟ್ ಸಿಸ್ಟಮ್ ಆಪರೇಟರ್ಗಳು 75ಗ್ರಾಮಗಳನ್ನು ದತ್ತು ತಗೊಂಡು ಅಲ್ಲಿ ಡಿಜಿಟಲ್ ಪಾವತಿ ಸಕ್ರಿಯಗೊಳಿಸುವ ಕೆಲಸವನ್ನು ಮಾಡುತ್ತಾರೆ.
  • ಇತ್ತೀಚೆಗೆ ಕೇಂದ್ರ ಸರ್ಕಾರವು ಅನುಮೋದಿಸಿದ ದಿಬಾಂಗ್ ಜಲವಿದ್ಯುತ್ ಯೋಜನೆಯು ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ. ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿನ ಕೆಳ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ ದಿಬಾಂಗ್ ನದಿಯ ಮೇಲೆ ಚೀನಾದ ಗಡಿಭಾಗದಲ್ಲಿಈ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುಚ್ಛಕ್ತಿನಿಗಮ (ಎನ್ಎಚ್ಪಿಸಿ) ಕಾರ್ಯಗತಗೊಳಿಸುತ್ತಿದೆ. ಸಾಮರ್ಥ್ಯ: 2,880 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಗುರಿ ಅಂದಾಜು ವೆಚ್ಚ : 319 ಶತಕೋಟಿ INR ಆಗಿದೆ. ಈಶಾನ್ಯ ಭಾರತದಲ್ಲಿ ಪ್ರವಾಹ ನಿಯಂತ್ರಿಸುವ ಮತ್ತು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿನವೀಕರಿಸಬಹುದಾದ ಇಂಧನ ಉತ್ಪಾದಿಸುವ ಉದ್ದೇಶವನ್ನು ಹೊಂದಿದೆ.
  • ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳು ಸುಮಾರು 10 ವರ್ಷಗಳ ಬಳಿಕ ಆಂಧ್ರ ಪ್ರದೇಶದ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಶೆಡ್ಯೂಲ್-1 ವರ್ಗದ ಅಡಿಯಲ್ಲಿ ಇರಿಸಲಾದ ತೋಳಗಳ ಜಾತಿಗಳು ಅಳಿವಿನಂಚಿನಲ್ಲಿವೆ. ವೈಜ್ಞಾನಿಕವಾಗಿ ಕ್ಯಾನಿಸ್ ಲೂಪಸ್ ಪ್ಯಾಲಿಪ್ಸ್ ಎಂದು ಕರೆಯಲ್ಪಡುವ ಈ ಪ್ರಭೇದವು ಆಂಧ್ರಪ್ರದೇಶದ ಎಲ್ಲಾ ಗ್ರಾಮೀಣ ಹುಲ್ಲುಗಾವಲುಗಳಲ್ಲಿ ವಿಶೇಷವಾಗಿ ನಲ್ಲಮಲ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಪ್ರಕಾಶಂ ಜಿಲ್ಲೆಯ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
  • ಸಲ್ಹೌಟುವೊನುವೊ ಕ್ರೂಸ್ ಅವರು ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಮತ್ತು ರಾಜ್ಯದ ಮೊದಲ ಮಹಿಳಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಾಗಾಲ್ಯಾಂಡ ನ ಸದಸ್ಯ ಬಲ 60. ನಾಗಾಲ್ಯಾಂಡ್ ರಾಜ್ಯದ ಸ್ಥಾನಮಾನ ಪಡೆದು 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಶಾಸಕರು, ಕ್ರೂಸ್ ಮತ್ತು ಹೆಕಾನಿ ಜಖಾಲು ಅವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.