Published on: May 14, 2024

ಚುಟುಕು ಸಮಾಚಾರ:11 ಮೇ 2024

ಚುಟುಕು ಸಮಾಚಾರ:11 ಮೇ 2024

  • ಕೇರಳದ ಮಲ್ಲಪುರಂ, ಕೋಝಿಕ್ಕೋಡ್​ ಮತ್ತು ತ್ರಿಶೂರ್​​ ಜಿಲ್ಲೆಗಳಲ್ಲಿ ಸೋಂಕು ವೆಸ್ಟ್ ನೈಲ್ ಫೀವರ್ ಪ್ರಕರಣಗಳು ಪತ್ತೆಯಾಗಿವೆ. 1937ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪತ್ತೆಯಾಗಿತ್ತು. 2011ರಲ್ಲಿ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಸೋಂಕಿತ ಕ್ಯುಲೆಕ್ಸ್​ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ವೆಸ್ಟ್ ನೈಲ್ ವೈರಸ್ ಒಂದು ಏಕ-ತಂತು ಆರ್ಎನ್ಎ ವೈರಸ್ ಆಗಿದೆ. ಇದು ವೈರಸ್‌ಗಳಿಗೆ ಸಂಬಂಧಿಸಿದ ಫ್ಲೇವಿವೈರಸ್ ಆಗಿದ್ದು, ಇದು ಸೇಂಟ್ ಲೂಯಿಸ್ ಎನ್ಸೆಫಾಲಿಟಿಸ್, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರವನ್ನು ಉಂಟು ಮಾಡುತ್ತದೆ.
  • ಇತ್ತೀಚೆಗೆ, ಭಾರತೀಯ ಚುನಾವಣಾ ಆಯೋಗವು (ಇಸಿಐ) ರೈತ ಭರೋಸಾ (ಹಿಂದೆ ರೈತ ಬಂಧು ಎಂದು ಕರೆಯಲಾಗುತ್ತಿತ್ತು) ಅಡಿಯಲ್ಲಿ ಹಣದ ವಿತರಣೆಯನ್ನು ತೆಲಂಗಾಣ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನ ಪೂರ್ಣಗೊಳ್ಳುವವರೆಗೆ ತಡೆಹಿಡಿದಿದೆ. ತೆಲಂಗಾಣದ ಮುಖ್ಯಮಂತ್ರಿ ರೈತ ಭರೋಸಾ ಅಡಿಯಲ್ಲಿ ವಿತರಣೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ. ಜೂನ್ 2019 ರಲ್ಲಿ ತೆಲಂಗಾಣ ಸರ್ಕಾರವು ಪ್ರಾರಂಭಿಸಿದ ಒಂಬತ್ತು ನವರತ್ನ ಕಲ್ಯಾಣ ಯೋಜನೆಗಳಲ್ಲಿ ‘ರೈತು ಭರೋಸಾ’ ಯೋಜನೆಯೂ ಒಂದಾಗಿದೆ. ಈ ಯೋಜನೆಯು ರಾಜ್ಯಾದ್ಯಂತ ಗೇಣಿದಾರರು ಸೇರಿದಂತೆ ಪ್ರತಿ ರೈತ ಕುಟುಂಬಕ್ಕೆ ಪ್ರತಿ ವರ್ಷ 12,500 ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತದೆ.
  • ಇತ್ತೀಚೆಗೆ, ಶ್ರೀ ಮಾಧವ ಪೆರುಮಾಳ್ ದೇವಸ್ಥಾನದಲ್ಲಿ ದೊರೆತ ಶಾಸನಗಳು 1,000 ವರ್ಷಗಳ ಹಿಂದೆ ಒಂದು ಪ್ರಮುಖ ವ್ಯಾಪಾರ ಮಾರ್ಗದ ಅಸ್ತಿತ್ವವನ್ನು ಸೂಚಿಸುತ್ತವೆ, ಇದು ಪಶ್ಚಿಮ ತಮಿಳುನಾಡಿನ ಕೊಂಗು ಪ್ರದೇಶವನ್ನು ದಕ್ಷಿಣ ಕರ್ನಾಟಕ ಮತ್ತು ಕೇರಳದೊಂದಿಗೆ ಸಂಪರ್ಕಿಸುತ್ತದೆ. ಇದನ್ನು ಮಾಧವ ಪೆರುಮಾಳ್ ಎಂದು ಪೂಜಿಸುವ ಹಿಂದೂ ದೇವರು ವಿಷ್ಣುವಿಗೆ ಸಮರ್ಪಿಸಲಾಗಿದೆ. ಇದು ತಮಿಳುನಾಡಿನ ಚೆನ್ನೈನ ಮೈಲಾಪುರದಲ್ಲಿದೆ. ಮೈಲಾಪುರ ಪ್ರದೇಶವು ಹೊಯ್ಸಳ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು, ವಿಶೇಷವಾಗಿ ರಾಜ 3 ನೇ ವೀರ ಬಲ್ಲಾಳನ ಅಡಿಯಲ್ಲಿ. ಹೊಯ್ಸಳ ಸೈನ್ಯದ ಸೇನಾಪತಿ 680 ವರ್ಷಗಳ ಹಿಂದೆ ದಂಡನಾಯಕ ಕೋಟೆಯನ್ನು ನಿರ್ಮಿಸಿದ. ಕೋಟೆಯೊಳಗೆ ದ್ರಾವಿಡ ಶೈಲಿಯ ವಾಸ್ತುಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಕ್ರಿ.ಶ 6 ನೇ-9 ನೇ ಶತಮಾನದ ಹನ್ನೆರಡು ಆಳ್ವಾರ ಸಂತರಲ್ಲಿ ಮೊದಲ ಮೂವರಲ್ಲಿ ಒಬ್ಬರಾದ ಪೆಯಾಳ್ವಾರ್ ಅವರ ಜನ್ಮಸ್ಥಳ ಎಂದು ನಂಬಲಾಗಿದೆ. ಈರೋಡ್ ಜಿಲ್ಲೆಯ ಭವಾನಿಸಾಗರ ಅಣೆಕಟ್ಟಿನ ನೀರಿನಲ್ಲಿ ಹೆಚ್ಚಾಗಿ ಮುಳುಗಿರುವ ದೇವಾಲಯವು ಅಣೆಕಟ್ಟಿನಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆ ಗೋಚರಿಸುತ್ತದೆ.
  • ಬ್ರಿಟನ್ ಮೂಲದ ಔಷಧ ತಯಾರಿಕಾ ಕಂಪನಿ ಆಸ್ಟ್ರಾ ಜೆನೆಕಾ ತಾನು ತಯಾರಿಸುವ ಕೋವಿಡ್ ಲಸಿಕೆಗಳನ್ನು ಜಾಗತಿಕವಾಗಿ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಈ ಕಂಪನಿಯು ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಯೋಗದಲ್ಲಿ ತಯಾರಿಸಿದ ಲಸಿಕೆಯನ್ನು ‘ಕೋವಿಶೀಲ್ಡ್’ ಹೆಸರಿನಲ್ಲಿ ನೀಡಲಾಗಿತ್ತು. ತಾನು ಸಿದ್ಧ ಪಡಿಸಿದ ಕೋವಿಡ್ ಲಸಿಕೆ ಪಡೆದುಕೊಂಡವರಲ್ಲಿ, ಅಪರೂಪದ ಪ್ರ ಕರಣಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್ಲೇಟ್ ಇಳಿಕೆಯ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಕಂಪನಿಯು ಈ ಕ್ರಮಕ್ಕೆ ಮುಂದಾಗಿದೆ. ಪರಿಷ್ಕರಣೆ ಕಂಡಿರುವ ಲಸಿಕೆಗಳು ಹೇರಳ ಪ್ರಮಾಣದಲ್ಲಿ ಲಭ್ಯವಿರುವ ಕಾರಣಕ್ಕೆ ತನ್ನ ಲಸಿಕೆಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಆಸ್ಟ್ರಾಜೆನೆಕಾ ಕಂಪನಿಯು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜೊತೆಗೂಡಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಈ ಲಸಿಕೆಗಳನ್ನು ಯುರೋಪಿನಲ್ಲಿ ವ್ಯಾಕ್ಸ್‌ಜೆವ್ರಿಯಾ ಹೆಸರಿನಲ್ಲಿ, ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಮಾರಾಟ ಮಾಡಲಾಗಿತ್ತು. 27 ಸದಸ್ಯ ರಾಷ್ಟ್ರಗಳ ಐರೋಪ್ಯ ಒಕ್ಕೂಟದಲ್ಲಿ ವ್ಯಾಕ್ಸ್‌ಜೆವ್ರಿಯಾ ಲಸಿಕೆಯ ಬಳಕೆಗೆ ಮಾನ್ಯತೆ ಇಲ್ಲ ಎಂದು ಐರೋಪ್ಯ ಔಷಧಗಳ ಸಂಸ್ಥೆ ಖಚಿತಪಡಿಸಿದೆ. ಭಾರತದಲ್ಲಿ 220 ಕೋಟಿ ಡೋಸ್ ತ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ಪೈಕಿ ಕೋವಿಶೀಲ್ಡ್ ಲಸಿಕೆಗಳ ಸಂಖ್ಯೆಯೇ ಹೆಚ್ಚು.
  • ಗೂಗಲ್ ವಾಲೆಟ್: ಸರ್ಚ್ ಎಂಜಿನ್ ಗೂಗಲ್, ಭಾರತದಲ್ಲಿ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಖಾಸಗಿ ಡಿಜಿಟಲ್ ವಾಲೆಟ್ ಅನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ಕಾರ್ಡ್ಗಳು, ಟಿಕೆಟ್ಗಳು, ಪಾಸ್ಗಳು, ಡಿಜಿಟಲ್ ಕೀ, ಐಡಿಗಳಂತಹ ಡಿಜಿಟಲ್ ಮಾಹಿತಿಯನ್ನು ಇಲ್ಲಿ ಸ್ಟೋರ್ ಮಾಡಬಹುದಾಗಿದೆ. ಪ್ಲೇ ಸ್ಟೋರ್ ರ್ಮೂಲಕ ಗೂಗಲ್ ವಾಲೆಟ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ. ಗೂಗಲ್ ವಾಲೆಟ್ ಅನ್ನು ಪಾವತಿರಹಿತ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿದೆ. 2022 ರಲ್ಲಿ US ನಲ್ಲಿ ಪರಿಚಯಿಸಲಾದ Google Wallet ಅನ್ನು ಪರಿಚಯಿಸಲಾಗಿತ್ತು.