Published on: June 16, 2023

ಚುಟುಕು ಸಮಾಚಾರ : 14-16 ಜೂನ್ 2023

ಚುಟುಕು ಸಮಾಚಾರ : 14-16 ಜೂನ್ 2023

  • ಸಮರ್ಥ ಇಂಗಾಲ ನಿರ್ವಹಣೆ ಮತ್ತು ಸುಸ್ಥಿರತೆಗಾಗಿ ಏರ್ಪೋರ್ಟ್ ಕಾರ್ಬನ್ ಮಾನ್ಯತೆ (ACA) ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಶನಲ್ (ACI)ನ ಅತ್ಯುನ್ನತ ಮಟ್ಟದ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆಯನ್ನು ಪಡೆದುಕೊಳ್ಳುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿ ಹಸಿರು ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಹಸಿರು ಪ್ರಗತಿ ಮತ್ತುಸುಸ್ಥಿರತೆಯ ನೀತಿಗೆ ಅನುಗುಣವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ‘ಗ್ರೀನ್ ಏರ್ಪೋರ್ಟ್ ರೆಕಗ್ನಿಷನ್ (ಜಿಎಆರ್) 2023ರಲ್ಲಿಗುರುತಿಸಲ್ಪಟ್ಟಿದೆ. ವಾರ್ಷಿಕ 8 ದಶಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರಿರುವ ವಿಭಾಗದಲ್ಲಿ ಪ್ರತಿಷ್ಠಿತ ಪ್ಲಾಟಿನಂ ರೇಟಿಂಗ್ನ್ನು ಮಂಗಳೂರು ವಿಮಾನ ನಿಲ್ದಾಣ ಪಡೆದುಕೊಂಡಿದೆ.
  • ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಕೇಂದ್ರ ಸರಕಾರದ ಪ್ರಸಾದ್ ಯೋಜನೆಯಡಿಯಲ್ಲಿ 70 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕೇಂದ್ರ ಸರಕಾರ, ಆಡಳಿತಾತ್ಮಕ ಅನುಮೋದನೆ ನೀಡಿದೆ.
  • ಕರ್ನಾಟಕ ಸರ್ಕಾರ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರತಿದಿನ ಪ್ರಾರ್ಥನೆಯ ನಂತರ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ ಮಾಡಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಜತೆಗೆ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆಯ ಫೋಟೋ ಹಾಕಬೇಕು.
  • ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ‘ಅಂತರ್ದೃಷ್ಟಿ’ ಎಂಬ ಹಣಕಾಸು ಸೇರ್ಪಡೆ ಡ್ಯಾಶ್ಬೋರ್ಡ್ ಅನ್ನು ಪ್ರಾರಂಭಿಸಿದರು, ಇದು ಭಾರತದಲ್ಲಿ ಹಣಕಾಸು ಸೇರ್ಪಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
  • ಏರ್ ಡಿಫೆಂಡರ್ 23, NATO ನಡೆಸಿಕೊಡುವ ಅತಿದೊಡ್ಡ ವಾಯುಪಡೆಯ ಬಹುರಾಷ್ಟ್ರೀಯ ವ್ಯಾಯಾಮವಾಗಿದ್ದು ಜೂನ್ 2023 ರಲ್ಲಿ ನಡೆಯುತ್ತಿದೆ. ವ್ಯಾಯಾಮ ನಡೆಯುತ್ತಿರುವ ದೇಶ :ಜರ್ಮನ್ ಏರ್ ಫೋರ್ಸ್, ಜರ್ಮನಿಯ ವಾಯುಪಡೆಯ ನೇತೃತ್ವದಲ್ಲಿ ಜೂನ್ 12 ರಿಂದ 23 ರವರೆಗೆ ಸಮರಾಭ್ಯಾಸ ನಡೆಯಲಿದೆ.
  • ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು ಆಯ್ದ 7 ವಲಯಗಳಲ್ಲಿ ವಿಷನ್ ಗ್ರೂಪ್ಗಳನ್ನು(ದೂರದರ್ಶಿ ತಂಡಗಳು) ಸರ್ಕಾರ ರಚಿಸಲಿದೆ.ಏಳು ವಲಯಗಳು: ಏರೋಸ್ಪೇಸ್ ಮತ್ತು ರಕ್ಷಣೆ, ಮಷೀನ್ ಟೂಲ್ಸ್, ಇಎಸ್ಡಿಎಂ, ಫಾರ್ಮಾ, ಕಬ್ಬಿಣ-ಉಕ್ಕು-ಸಿಮೆಂಟ್ ಉತ್ಪಾದನಾ ಕ್ಷೇತ್ರಗಳನ್ನೊಳಗೊಂಡ ಕೋರ್ ಮ್ಯಾನುಫ್ಯಾಕ್ಚರಿಂಗ್, ಸ್ಟಾರ್ಟಪ್ಸ್ (ಐಟಿಯೇತರ) ಮತ್ತು ಆಟೋ/ವಿದ್ಯುತ್ಚಾಲಿತ ಇವು ಹೊಸದಾಗಿ ವಿಷನ್ ಗ್ರೂಪ್ ರಚನೆಯಾಗಲಿರುವ ವಲಯಗಳಾಗಿವೆ.
  • ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಅಳೆಯಲಾದ ನಗರದ ಗಾಳಿಯ ಗುಣಮಟ್ಟವು ಸ್ಥಿರವಾಗಿ ಕುಸಿಯುತ್ತಿದೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.ವರದಿ ನೀಡಿದವರು : ಗ್ರೀನ್ಪೀಸ್ ಇಂಡಿಯಾ ‘ಸ್ಪೇರ್ ದಿ ಏರ್’.ಬೆಂಗಳೂರಿನಲ್ಲಿ ಸರಾಸರಿ 29.01 μg/m3 PM2.5 ಸಾಂದ್ರತೆಯನ್ನು ಹೊಂದಿದೆ, ಇದು WHO ನಿಗದಿಪಡಿಸಿದ 5μg/m3 ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ. ನಗರದ ವಾರ್ಷಿಕ ಸರಾಸರಿ PM10 ಸಾಂದ್ರತೆಯು 55.14μg/m3, ಸುರಕ್ಷಿತ ಮಟ್ಟವಾದ 15 μg/m3 ಗಿಂತ 3.7 ಪಟ್ಟು ಹೆಚ್ಚಾಗಿದೆ.
  • ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ತನ್ನ ವಿಮಾನ ನಿಲ್ದಾಣಗಳನ್ನು ಹೆಚ್ಚು ಸಮರ್ಥನೀಯ ಮತ್ತು ಇಂಗಾಲದ ತಟಸ್ಥಗೊಳಿಸಲು ಹೊಸ ಉಪಕ್ರಮ ” ಸುಸ್ಥಿರ ಹಸಿರು ವಿಮಾನ ನಿಲ್ದಾಣಗಳ ಮಿಷನ್” (SUGAM) ಅನ್ನು ಪ್ರಾರಂಭಿಸಿದೆ.
  • ಪ್ರತಿ ವರ್ಷ ಜೂನ್ 12 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.2023 ರ ಥೀಮ್: “ಎಲ್ಲರಿಗೂ ಸಾಮಾಜಿಕ ನ್ಯಾಯ. ಬಾಲಕಾರ್ಮಿಕ ಪದ್ಧತಿ ಅಂತ್ಯಗೊಳಿಸಿ”