Published on: April 6, 2023

ಚುಟುಕು ಸಮಾಚಾರ:6 ಏಪ್ರಿಲ್ 2023

ಚುಟುಕು ಸಮಾಚಾರ:6 ಏಪ್ರಿಲ್ 2023

  • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಸಿರುಮಯ ವಾತಾವರಣ ನಿರ್ಮಾಣ ಮಾಡಿರುವುದಕ್ಕಾಗಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ಸ್ (ಐಜಿಬಿಸಿ) ಕೊಡಮಾಡುವ ಪ್ರತಿಷ್ಠಿತ “ಗ್ರೀನ್ ಸಿಟೀಸ್ ಪ್ಲಾಟಿನಂ ಪ್ರಮಾಣಪತ್ರವನ್ನು ಬೆಂಗಳೂರು ಏರ್ಪೋರ್ಟ್ ಸಿಟಿ ಲಿಮಿಟೆಡ್ (BACL) ಪಡೆದುಕೊಂಡಿದೆ.
  • ಡೆಹ್ರಾಡೂನ್-ದೆಹಲಿ ಎಕ್ಸ್ಪ್ರೆಸ್ವೇ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಆಗಿದ್ದು 2023 ರ ಅಕ್ಟೋಬರ್ ವೇಳೆಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ. ಯೋಜನೆಯು ರಾಜಾಜಿ ರಾಷ್ಟ್ರೀಯ ಉದ್ಯಾನವನದಲ್ಲಿ 12 ಕಿಮೀ ಉದ್ದದ ವನ್ಯಜೀವಿ ಸಂರಕ್ಷಣಾ ಕಾರಿಡಾರ್ನ ನಿರ್ಮಾಣವನ್ನು ಒಳಗೊಂಡಿದೆ.
  • ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಹೈದರಾಬಾದ್ನ ತಜ್ಞರು 16 ಬಗೆಯ ಅಮೂಲ್ಯ ಖನಿಜಗಳನ್ನು ಪತ್ತೆ ಮಾಡಿದ್ದಾರೆ. ಲ್ಯಾಂಥನೈಡ್ ಸರಣಿಯ ಖನಿಜಗಳಾದ ಅಲ್ಲನೈಟ್, ಸೆರಿಯೇಟ್, ಥೋರೈಟ್, ಕೊಲಂಬೈಟ್, ತಂತಲೈಟ್, ಅಪಟೈಟ್, ಝಿರ್ಕಾನ್, ಮೊನಾಝೈಟ್, ಪೈರೋಕ್ಲೋರ್ ಯುಕ್ಸಿನೈಟ್ ಹಾಗೂ ಫ್ಲೂರೈಟ್ ಖನಿಜಗಳ ಅತಿ ದೊಡ್ಡ ನಿಕ್ಷೇಪ ಲಭ್ಯವಾಗಿದೆ.
  • ಅಮೆರಿಕದ ಜಾರ್ಜಿಯಾ ಅಸೆಂಬ್ಲಿಯಲ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಶಾಸನಾತ್ಮಕ ಕ್ರಮವನ್ನು ಕೈಗೊಂಡ ಮೊದಲ ಅಮೆರಿಕನ್ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಗೌಪ್ಯತೆ ಉಲ್ಲಂಘನೆಯ ಗಂಭೀರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಅದರ ಕುರಿತ ತನಿಖೆಯ ನಿಮಿತ್ತ ಇಟಲಿ ಸರ್ಕಾರ ಚಾಟ್ ಜಿಪಿಟಿ ಸೇವೆಯನ್ನು ನಿಷೇಧಿಸಿದ್ದು, ದೇಶದಲ್ಲಿ ತಕ್ಷಣದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ, ಸುಧಾರಿತ ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ ಅನ್ನು ನಿರ್ಬಂಧಿಸಿದ ಮೊದಲ ಯುರೋಪಿಯನ್ ದೇಶ ಇಟಲಿಯಾಗಿದೆ.
  • ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ (ಡೋಜ್ ಮೆಮೆ)ಚಿತ್ರವನ್ನು ಹಾಕಿದೆ. ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್​ಕಾಯಿನ್​ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್​ನಲ್ಲಿ ಪಕ್ಷಿಯ ಲೋಗೋ ಕಾಣಿಸಲಿದೆ. ಬಿಟ್​ ಕಾಯಿನ್​ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು ಅಪಹಾಸ್ಯ ಮಾಡಲು 2013ರಲ್ಲಿ ತಮಾಷೆಗಾಗಿ ಈ ನಾಯಿ ಚಿತ್ರ ರಚಿಸಲಾಗಿತ್ತು.