Published on: March 8, 2023

ಚುಟುಕು ಸಮಾಚಾರ:8 ಮಾರ್ಚ್ 2023

ಚುಟುಕು ಸಮಾಚಾರ:8 ಮಾರ್ಚ್ 2023

  • ಮಾನವಸಹಿತ ಗಗನಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ), ಗಗನಯಾನಿಗಳನ್ನು ಹೊತ್ತ ಕೋಶವನ್ನು (ಮಾಡ್ಯೂಲ್) ಇಳಿಸುವಲ್ಲಿ ಬಳಕೆಯಾಗುವ ಪ್ಯಾರಾಚೂಟ್ಗಳನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಗಗನಯಾನ ಕಾರ್ಯಾಚರಣೆಗೆಂದೇ ಇಸ್ರೊ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಮತ್ತು ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಜಂಟಿಯಾಗಿ ಈ ಅಭಿವೃದ್ಧಿಪಡಿಸಿವೆ.
  • ಯುದ್ಧನೌಕೆಯಿಂದ ವಾಯು ಪ್ರದೇಶಕ್ಕೆ ಗುರಿಯಿಟ್ಟು ಉಡಾಯಿಸಬಹುದಾದ ಮಧ್ಯಮ ಶ್ರೇಣಿಯ ಕ್ಷಿಪಣಿ (MRSAM) –ಯನ್ನು ಭಾರತದ ವಾಯುಪಡೆಯು ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.ಈ ಪರೀಕ್ಷೆಯನ್ನು ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆ ಐಎನ್ಎಸ್ ವಿಶಾಖಪಟ್ಟಣಂನಿಂದ ನಡೆಸಲಾಯಿತು ಮತ್ತು ಇದು ಹಡಗು ವಿರೋಧಿ ಕ್ಷಿಪಣಿಯಾಗಿದ್ದು ಅದು ಶತ್ರು ಹಡಗುಗಳನ್ನು ನಿಮಿಷಗಳಲ್ಲಿ ಹೊಡೆದುರುಳಿಸುವ ಶಕ್ತಿ ಹೊಂದಿದೆ. ಅಭಿವೃದ್ಧಿ: ಡಿಆರ್ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಉತ್ಪಾದನೆ: ಎಂಆರ್ಎಸ್ಎಎಮ್ ಅನ್ನು ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ನಲ್ಲಿ ಹೈದರಾಬಾದ್ನಲ್ಲಿ ಉತ್ಪಾದಿಸುತ್ತಿದೆ.
  • ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 75 ಮಹಿಳಾ ಬೈಕರ್ಗಳ ತಂಡವು ದೆಹಲಿಯಿಂದ ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶದವರೆಗೆ 1,848 ಕಿಮೀ ಯಾತ್ರೆ ಕೈಗೊಳ್ಳಲಿದೆ.ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ವರ್ಷಕ್ಕೊಮ್ಮೆ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಉದ್ದೇಶ: ಈ ದಿನವು ಮಹಿಳೆಯರ ಸಾಧನೆಗಳನ್ನು ಎತ್ತಿ ತೋರಿಸಲು ಮತ್ತು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 2023ರ ಮಹಿಳಾ ದಿನದ ಥೀಮ್: ಯುಎನ್ ಥೀಮ್: “ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ”.
  • ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES ಸಹಯೋಗದಲ್ಲಿ ನಿಯಂತ್ರಿತ ರೀತಿಯಲ್ಲಿ ತನ್ನ ನಿಷ್ಕ್ರಿಯಗೊಂಡ ಉಪಗ್ರಹ ಮೇಘಾ – ಟ್ರೋಪಿಕ್ಸ್-1 (MT1) ಅನ್ನು ಭೂಮಿಯ ಮೇಲೆ ಇಳಿಸಲು ಯಶಶ್ವಿಯಾಗಿದೆ. ಅಕ್ಟೋ ಬರ್ 12, 2011 ರಂದು ಇಸ್ರೊ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ CNES ನ ಜಂಟಿ ಉಪಗ್ರಹ ಯೋಜನೆಯಡಿ ಉಷ್ಣವಲಯದ ಹವಾಮಾನ ಮತ್ತು ಹವಾಮಾನ ಅಧ್ಯಯನಕ್ಕಾಗಿ ಉಡಾವಣೆ ಮಾಡಲಾಗಿತ್ತು.
  • ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಅಡಿಯಲ್ಲಿ 5ನೇ ಜನ ಔಷಧಿ ದಿವಸ್ 2023, ಅನ್ನು ಆಚರಿಸಿತು. ದಿನವನ್ನು ದೇಶಾದ್ಯಂತ “ಜನ್ ಔಷಧಿ – ಸಸ್ತಿ ಭಿ ಅಚ್ಚಿ ಭಿ” ಎಂಬ ವಿಷಯದೊಂದಿಗೆ ಆಚರಿಸಲಾಲಾಯಿತು. ಈ ಕಾರ್ಯಕ್ರಮವನ್ನು ಮಾರ್ಚ್ 1 ರಂದು ದೇಶಾದ್ಯಂತ ಜನ್ ಔಷಧಿ ಜನ ಚೇತನ ಅಭಿಯಾನದೊಂದಿಗೆ ಪ್ರಾರಂಭಿಸಲಾಗಿತ್ತು. ಜನೌಷಧಿ ದಿನವನ್ನು ಪ್ರತಿ ವರ್ಷ ಮಾರ್ಚ್ 7 ರಂದು ಸ್ಮರಿಸಲಾಗುತ್ತದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಇದನ್ನು ನವೆಂಬರ್ 2008 ರಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆ, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಪ್ರಾರಂಭಿಸಿತು.
  • ವಿಶ್ವದ ಸಾಗರಗಳು ಮತ್ತು ಅವುಗಳಲ್ಲಿ ವಾಸಿಸುವ ಜೀವರಾಶಿ ರಕ್ಷಿಸಲು ಭಾರತ ಸೇರಿದಂತೆ ಸುಮಾರು 200 ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಶೇ. 60 ರಷ್ಟು ಭೂ ಮೇಲ್ಮೈ ಆವರಿಸಿರುವ, ಹವಾಮಾನವನ್ನು ನಿಯಂತ್ರಿಸುವ ಮತ್ತು ನಾವು ಉಸಿರಾಡುವ ಅರ್ಧದಷ್ಟು ಆಮ್ಲಜನಕ  ಉತ್ಪಾದಿಸುವ ಎತ್ತರದ ಸಮುದ್ರಗಳನ್ನು ರಕ್ಷಿಸಲು ಇದು ಮೊದಲ ಅಂತಾರಾಷ್ಟ್ರೀಯ ಒಪ್ಪಂದವಾಗಿದೆ. ಈ ಒಪ್ಪಂದವು ಮೀನುಗಾರಿಕೆ, ಹಡಗು ಮತ್ತು ಸಂಶೋಧನೆಯ ಮೇಲೆ ಎಲ್ಲಾ ದೇಶಗಳಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಒಪ್ಪಂದದ ಗುರಿ :2030 ರ ವೇಳೆಗೆ ಶೇ.30 ರಷ್ಟು ಎತ್ತರದ ಸಮುದ್ರಗಳ ‘ನೀರನ್ನು ಸಂರಕ್ಷಿಸಲು ಮತ್ತು ಮುಂದಿನ ಮಾತುಕತೆಗಳಿಗಾಗಿ ರಾಷ್ಟ್ರಗಳ ಸಮ್ಮೇಳನ ಆಯೋಜನೆಗೆ ನೆರವಾಗುವುದು.
  • 2021-22ರ ರಣಜಿ ಟ್ರೋಫಿ ಚಾಂಪಿ ಯನ್‌ ಮಧ್ಯ ಪ್ರದೇಶ ವನ್ನು 238 ರನ್‌ ಗಳಿಂದ ಮಣಿಸಿದ ಶೇಷ ಭಾರತ ಸತತ 2ನೇ ಬಾರಿ ಇರಾನಿ ಕಪ್‌ ಗೆದ್ದು ಕೊಂಡಿದೆ. ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ಕ್ರಿಕೆಟ್ ತಂಡವು ಭಾರತದಲ್ಲಿನ ಪ್ರಥಮ ದರ್ಜೆ ಕ್ರಿಕೆಟ್ ತಂಡವಾಗಿದ್ದು, ಇದು ನಿರಂತರವಾಗಿ ಬದಲಾಗುತ್ತಿರುತ್ತದೆ, ಪ್ರಸ್ತುತವಿರುವ  ರಣಜಿ ಟ್ರೋಫಿ ವಿಜೇತರನ್ನು ಹೊರತುಪಡಿಸಿ ದೇಶಾದ್ಯಂತ ಆಟಗಾರರಿಂದ ಸಂಯೋಜಿಸಲ್ಪಟ್ಟಿದೆ.