Published on: November 7, 2022

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ -2022

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ -2022

ಸುದ್ದಿಯಲ್ಲಿ ಏಕಿದೆ?

ಆರು ವರ್ಷಗಳ ನಂತರ ಬೆಂಗಳೂರಿನಲ್ಲಿ ಇನ್ವೆಸ್ಟ್​ ಕರ್ನಾಟಕ-2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(GIM) ನಡೆಯಿತು.

ಮುಖ್ಯಾಂಶಗಳು

 • ಜಾಗತಿಕ ಹೂಡಿಕೆ ಸಮಾವೇಶದಲ್ಲಿ ‘ಇನ್‌ವೆಂಟಿಂಗ್‌ ದಿ ಎನರ್ಜಿ ಇಕೋಸಿಸ್ಟಮ್‌: ಫ್ಯೂಚರ್‌ ಆಫ್‌ ಎನರ್ಜಿ ಜನರೇಷನ್‌ ಇನ್‌ ದಿ ವರ್ಲ್ಡ್‌’ ಕುರಿತ ಚರ್ಚೆ ನಡೆಯಿತು.
 • ಈ ಬಾರಿಯ ಬಹು ಮಹತ್ವದ ಬೆಳವಣಿಗೆ ಬ್ರಾಂಡ್ ಬೆಂಗಳೂರು ಕುರಿತ ಬಂಡವಾಳ ಹೂಡಿಕೆದಾರರು ಆಸಕ್ತಿ ತೋರಿದರು.
 • ಒಟ್ಟು ಹೂಡಿಕೆ :ರೂ. 9,81,784 ಕೋಟಿ  ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು,ಈ ಪೈಕಿ ಶೇ.90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿದೆ.ಲಕ್ಷ ಕೋಟಿ ರೂ. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.
 • ಬೆಂಗಳೂರಿನಾಚೆಗೂ ಹೂಡಿಕೆ : ಕೈಗಾರಿಕೆಗಳೆಂದರೆ ಬೆಂಗಳೂರು ಕೇಂದ್ರಿತವಾಗಿರುತ್ತಿದ್ದಉದ್ಯಮಿಗಳ ಗಮನ ಈ ಬಾರಿ ಬೆಂಗಳೂರಿನ ಆಚೆಗೂ ಹರಿದಿದೆ. ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಕಲಬುರಗಿ, ರಾಯಚೂರು, ರಾಮನಗರ ಮೊದಲಾದ ಪ್ರದೇಶಗಳತ್ತಹೂಡಿಕೆದಾರರು ಆಸಕ್ತಿತೋರಿದ್ದಾರೆ.. ಕೈಗಾರಿಕೆ ದೃಷ್ಟಿಯಿಂದ ಬೆಂಗಳೂರು ನಂತರದ ಸ್ಥಾನದಲ್ಲಿನಿಲ್ಲುವ ಮತ್ತುಎಲ್ಲ ಸೌಲಭ್ಯಗಳನ್ನೂ ಹೊಂ ರುವ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಸ್ಥಾಪಿಸಲಾಗುತ್ತಿವ ಎಫ್ಎಂಸಿಜಿ ಕ್ಲಸ್ಟರ್ 1,200 ಕೋಟಿ ರೂ.ಬಂಡವಾಳದ್ದಾಗಿದೆ. ಲಕ್ಷಾಂತರ ಉದ್ಯೋ ಗ ಸೃಷ್ಟಿಸಬಲ್ಲಇದು ದಕ್ಷಿಣ ಭಾರತಕ್ಕೇ ಮಾದರಿಯಾಗಲಿದೆ.

ಉದ್ದೇಶ

 • ರಾಜ್ಯದಲ್ಲಿ ಹೂಡಿಕೆಗಳು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದು, ಉದ್ಯೋಗವನ್ನು ಸೃಷ್ಟಿಸುವುದು ಮತ್ತು ತಂತ್ರಜ್ಞಾನಗಳಲ್ಲಿ ನಾಯಕತ್ವವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿವೆ.
 • ಎಲ್ಲ ರಂಗಗಳಲ್ಲಿಯೂ ಉದ್ಯಮಗಳು ಬರುವಂತಾಗಬೇಕು ಮತ್ತು ಹೆಚ್ಚು ಉದ್ಯೋಗ ಸೃಷ್ಟಿ. ರಾಜ್ಯದಲ್ಲಿಪ್ರಮುಖ ಕಂಪೆನಿಗಳಿಗೆ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ ಐದು ಲಕ್ಷ ಉದ್ಯೋ ಗ ಸೃಷ್ಟಿ ಗುರಿ ಇದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಹೂಡಿಕೆ?

 • ಗ್ರೀನ್ ಹೈಡ್ರೋ ಜನ್ ವಲಯ – 2,89,292 ಕೋಟಿ ರೂ.
 • ನವೀಕರಿಸಬಹುದಾದ ಇಂಧನ – 1,27,600 ಕೋಟಿ ರೂ.
 • ವಿದ್ಯುದುಪಕರಣ ವಿನ್ಯಾಸ ಮತ್ತುಉತ್ಪಾದನೆ – 47,475 ಕೋಟಿ ರೂ.
 • ಇ-ಮೊಬಿಲಿಟಿ, ಏರೋ ಸ್ಪೇಸ್ ಮತ್ತುಡಾಟಾ ಕೇಂದ್ರ – 22,096 ಕೋಟಿ ರೂ. ಇನ್ಫ್ರಾ/ಇಂಡಸ್ಟ್ರಿಯಲ್ ಲಾಜಿಸ್ಟಿಕ್ ಪಾರ್ಕ್ಗಳು – 43,500 ಕೋಟಿ ರೂ.
 • ಕಬ್ಬಿಣ, ಉಕ್ಕು ಮತ್ತುಸಿಮೆಂಟ್ – 25,024 ಕೋಟಿ ರೂ.
 • ಎಫ್ಎಂಸಿಜಿ – 4,705 ಕೋಟಿ ರೂ.
 • ಜೆಎಸ್‌ಡಬ್ಲ್ಯೂ ಗ್ರೂಪ್ : ರಾಜ್ಯದಲ್ಲಿ ಇದುವರೆಗೆ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಜೆಎಸ್‌ಡಬ್ಲ್ಯೂ ಗ್ರೂಪ್, ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ವ್ಯವಹಾರಗಳಲ್ಲಿ ಉಕ್ಕು, ಹಸಿರು ಇಂಧನ, ಸಿಮೆಂಟ್ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ. ಇದೇ ವೇಳೆ ಖನಿಜ ಸಂಪನ್ಮೂಲಗಳ ಹರಾಜನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು ಎಂದು ಸಜ್ಜನ್ ಜಿಂದಾಲ್ ಮನವಿ ಮಾಡಿದರು.
 • ಕಾರಣ: “ಖನಿಜ ಹರಾಜುಗಳು ಉತ್ಪಾದನಾ ವಲಯದಲ್ಲಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಕರ್ನಾಟಕದ ಬೆಳವಣಿಗೆಯ ಪಥವನ್ನು ಬೆಂಬಲಿಸುತ್ತದೆ”.
 • ವಿಜಯನಗರದಲ್ಲಿರುವ JSW ಸ್ಟೀಲ್ 90 ರ ದಶಕದ ಮಧ್ಯಭಾಗದಲ್ಲಿ ಗ್ರೂಪ್ ಸ್ವಾಧೀನಪಡಿಸಿಕೊಂಡಾಗ ಒಣ ಮತ್ತು ಬಂಜರು ಭೂಮಿಯಾಗಿತ್ತು. ಈಗ ರಾಜ್ಯ ಮತ್ತು ಇಲ್ಲಿನ ಜನರ ಬೆಂಬಲದೊಂದಿಗೆ, ಅದನ್ನು ಭಾರತದ ಅತಿದೊಡ್ಡ ಉಕ್ಕಿನ ಸ್ಥಾವರವಾಗಿ ಮತ್ತು  ಶೀಘ್ರದಲ್ಲೇ ಅದು ವಿಶ್ವದ ಅತಿದೊಡ್ಡ ಉಕ್ಕಿನ ಸ್ಥಾವರವಾಗಲಿದೆ”.
 • ನವೀಕರಿಸಬಹುದಾದ ಇಂಧನ ಉತ್ಪಾದನೆ: ಉತ್ಪಾದಿಸಿದ ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಮೆಗಾವ್ಯಾಟ್ ಘಟಕವನ್ನು ಸ್ಥಾಪಿಸಲು ಇಲಾಖೆ ಯೋಜಿಸಿದೆ.ಶರಾವತಿಯಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ ಸ್ಟೋರೇಜ್ ಘಟಕವನ್ನು ಸ್ಥಾಪಿಸುವತ್ತ ಸರ್ಕಾರ ಕೆಲಸ ಮಾಡುತ್ತಿದೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ
 • ಅದಾನಿ ಗ್ರೂಪ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿಹೆಚ್ಚು ಬಂಡವಾಳ ತೊಡಗಿಸುವ ತನ್ನ ಇಂಗಿತವನ್ನು ಸಮಾವೇಶದಲ್ಲಿಪ್ರಕಟಿಸಿದೆ. ರಾಜ್ಯದಲ್ಲಿಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಒಡೆತನ ಪಡೆದಿರುವ ಅದಾನಿ ಗ್ರೂಪ್, ಸಿಮೆಂಟ್, ವಿದ್ಯುತ್, ಲಾಜಿಸ್ಟಿಕ್, ಡಿಜಿಟಲ್ ಮೊದಲಾದ ಕ್ಷೇತ್ರಗಳಲ್ಲಿಈಗಾಗಲೇ ತೊಡಗಿಸಿಕೊಂಡಿದೆ.
 • ವೇದಾಂತ 80 ಸಾವಿರ ಕೋಟಿ ರೂ.ಯನ್ನು ತೊಡಗಿಸಲಿದ್ದು,ನವೀಕರಿಸಬಹುದಾದ ಇಂಧನ, ಕಬ್ಬಿಣದ ಅದಿರು ಮತ್ತುಚಿನ್ನದ ಗಣಿಗಾರಿಕೆಯಲ್ಲಿಬಂಡವಾಳ ಹೂಡಲಿದೆ.
 • ಏರ್ಟೆಲ್ ಮತ್ತುಜಿಯೊ ಕ್ರಮವಾಗಿ 15 ಸಾವಿರ ಕೋಟಿ ರೂ. ಹಾಗೂ 11 ಸಾವಿರ ಕೋಟಿ ರೂ. ಹೀಗೆ ಒಟ್ಟು 26 ಸಾವಿರ ಕೋಟಿ ರೂ. ಯನ್ನು 5ಜಿ ಮತ್ತುಸ್ಥಿರ ಟೆಲಿಕಾಂ ಕ್ಷೇತ್ರದಲ್ಲಿಹೂಡಿಕೆ ಮಾಡಲಿವೆ.
 • ಐಎಸ್ಎಂಸಿ ಅನಲಾಗ್ ಫ್ಯಾಬ್ 22,900 ಕೋಟಿ ರೂ. ಹೂಡಲಿದೆ. ಸೆಮಿ ಕಂಡಕ್ಟರ್ ಫ್ಯಾಬ್ ಪ್ಲಾಂಟ್ ಸ್ಥಾಪನೆಗಾಗಿ ಅದು ಬಂಡವಾಳ ತೊಡಗಿಸಲಿದೆ.
 • ಆ್ಯಸ್ ಐರನ್ ಆ್ಯಂಡ್ ಸ್ಟೀಲ್ 13,388 ಕೋಟಿ ರೂ.ಯನ್ನು ಸ್ಟೀಲ್ ಪ್ಲಾಂಟ್ ನಿರ್ಮಾಣಕ್ಕಾಗಿ ಹೂಡಿಕೆ ಮಾಡಲಿದೆ.

ಇಷ್ಟೊಂದು ಹೂಡಿಕೆಗೆ ಕಾರಣ:

 • ಅಂತರ್ರಾಷ್ಟ್ರೀಯ ಮಟ್ಟದಲ್ಲಿಅಮೆರಿಕ, ಯುರೋಪ್ಗಳಲ್ಲಿಹಣದುಬ್ಬರದ ಪರಿಣಾಮ ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದು, ಭಾರತದಲ್ಲಿಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಭಾರತದಲ್ಲಿಅದರಲ್ಲೂ ಕರ್ನಾಟಕದಲ್ಲಿಬಂಡವಾಳ ಹೂಡಿಕೆಯ ಹೆಚ್ಚು ಅವಕಾಶಗಳು ತೆರೆದುಕೊಂಡಿವೆ.
 • ಉದ್ಯಮಿಗಳ ಅನುಕೂಲಕ್ಕಾಗಿ ಭೂಕಂದಾಯ ಕಾಯ್ದೆಗೂ ತಿದ್ದುಪಡಿ ಮಾಡಿ, ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸೃಷ್ಟಿಸಲಾಗಿದೆ.
 • ಹೂಡಿಕೆದಾರರನ್ನು ಉತ್ತೇಜಿಸುವಂಥ ನೀತಿಗಳನ್ನು ರೂಪಿಸಲಾಗಿದೆ.
 • ಈಗಾಗಲೇ ಇಂಧನ ವಲಯ, ಐಟಿ-ಬಿಟಿ ಮೊದಲಾದ ವಲಯಗಳಲ್ಲಿರಾಜ್ಯದ ಮುಂದಿರುವುದು ಕೂಡ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸಹಾಯಕವಾಗಿರುವ ಅಂಶ.
 • ನಿಯಮಗಳನ್ನು ಸರಳಗೊಳಿಸಿ, ಮೊದಲು ಕೈಗಾರಿಕೆ ಪ್ರಾರಂಭ, ಬಳಿಕ ಅನುಮತಿ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
 • ಸಾಕಷ್ಟು ಉತ್ತೇಜನ, ಸಬ್ಸಿಡಿ ನೀಡುವ ನಿರ್ಧಾರವೂ ಆಗಿದೆ. ಸಮಾವೇಶದಲ್ಲಿಆಗುವ ಒಪ್ಪಂದ ಎರಡು ತಿಂಗಳೊಳಗೆ ಅನುಷ್ಠಾನಗೊಳ್ಳಬೇಕೆಂಬ ಗುರಿಯನ್ನೂ ಹೊಂದಿದೆ.
 • ಒಂದೆಡೆ ಕೈಗಾರಿಕಾ ಉದ್ದೇಶಕ್ಕೆ ಜಮೀನು ಸ್ವಾಧೀನ,ಬಿಜಾಪುರ, ಶಿವಮೊಗ್ಗ, ಕಾರವಾರ, ರಾಯಚೂರಿನಲ್ಲೂವಿಮಾನ ನಿಲ್ದಾಣ ಸಿದ್ಧವಾಗುತ್ತಿರುವುದು ಬಂಡವಾಳ ಆಕರ್ಷಿಸಲು ಪೂರಕವಾದೀತು
 • ದೇಶದಲ್ಲೇ ಸೌರ ವಿದ್ಯುತ್ ಕ್ಷೇತ್ರಕ್ಕೆ ಶೇ.46ರಷ್ಟು ಕೊಡುಗೆ ತನ್ನದೆಂದು ಸರಕಾರ ಹೇಳುತ್ತಿದೆ. ಹಸಿರು ಇಂಧನ ವಲಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವುದರಿಂದ ಮತ್ತು ಉತ್ಪಾದಕರಿಗೆ ಸಬ್ಸಿಡಿ ನೀಡುತ್ತಿರುವುದರಿಂದ ದೊಡ್ಡ ದೊಡ್ಡ ಕಂಪೆನಿಗಳು ಮುಂದೆ ಬರಲು ಸಹಕಾರಿ