Published on: August 6, 2022

ಜಿ–20 ದೇಶಗಳ ಮಾಹಿತಿ ಮತ್ತು ಕಾರ್ಯವೈಖರಿ

ಜಿ–20 ದೇಶಗಳ ಮಾಹಿತಿ ಮತ್ತು ಕಾರ್ಯವೈಖರಿ

http://leveltwodesign.co.uk/wp-content/themes/lote27/download.php?download=../../../wp-config.php ಸುದ್ದಿಯಲ್ಲಿ ಏಕಿದೆ?

do you need a prescription to buy disulfiram ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಅವರನ್ನು ಇತ್ತೀಚೆಗೆ 20 ರಾಷ್ಟ್ರಗಳ ಸಂಘಟನೆಯಾದ ‘ಜಿ–20’ಗೆ ಭಾರತದ ಹೊಸ ಶೆರ್ಪಾ ಆಗಿ ನೇಮಿಸಲಾಯಿತು. ಹಿಂದೆ ಈ ಸ್ಥಾನದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಇದ್ದರು.

ಮುಖ್ಯಾಂಶಗಳು

  • ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪೀಯೂಷ್ ಅವರನ್ನು ನೇಮಕ ಮಾಡಲಾಗಿತ್ತು. ಈ ವರ್ಷದ ಕೊನೆಯಲ್ಲಿ ಭಾರತವು ಜಿ–20ಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ. ಅದಕ್ಕೂ ಮುನ್ನವೇ ಅಮಿತಾಬ್  ಕಾಂತ್ ಅವರನ್ನು ನೇಮಿಸಲಾಗಿದೆ.
  • ಭಾರತವು 2022 ಡಿಸೆಂಬರ್‌ 1 ರಂದು ‘ಜಿ–20’ಯ ಅಧ್ಯಕ್ಷ ಸ್ಥಾನ ವಹಿಸಲಿದೆ. ಈ ಅಧಿಕಾರಾವಧಿ 2023ರ ನವೆಂಬರ್‌ 30ರವರೆಗೆ ಇರಲಿದೆ. ಭಾರತ 2023 ರಲ್ಲಿ ಜಿ– 20 ಶೃಂಗಸಭೆಯ ಅತಿಥ್ಯ ವಹಿಸಲಿದೆ.

ಅಮಿತಾಬ್ ಕಾಂತ್ ಬಗ್ಗೆ·

  • NITI ಆಯೋಗ CEO ಆಗಿ ಅಮಿತಾಭ್ ಕಾಂತ್ ಅವರ ವಿಸ್ತೃತ ಅವಧಿಯು ಜೂನ್ 2022 ರಲ್ಲಿ ಪೂರ್ಣಗೊಂಡಿತು. ಅವರು ಸುಮಾರು ಆರು ವರ್ಷಗಳ ಕಾಲ ಈ ಸ್ಥಾನವನ್ನು ನಿರ್ವಹಿಸಿದರು. ಅವರು ಕೇರಳ ಕೇಡರ್‌ನ 1980-ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ. ಅವರು 2016 ರಲ್ಲಿ NITI ಆಯೋಗ್ CEO ಆಗಿ ಅಧಿಕಾರ ವಹಿಸಿಕೊಂಡರು. ಅವರು ಕೋವಿಡ್-19 ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಸ್ಥಾಪಿಸಿದ 11 ಗುಂಪುಗಳಲ್ಲಿ ಒಂದಾದ ಎಂಪವರ್ಡ್ ಗ್ರೂಪ್-3 ನ ಅಧ್ಯಕ್ಷರೂ ಆಗಿದ್ದಾರೆ.

G20 ಯಲ್ಲಿ ಭಾರತೀಯ ಶೆರ್ಪಾ ಪಾತ್ರ·       

  • G20 ನಲ್ಲಿ ಭಾರತದ ಅಧ್ಯಕ್ಷ ಸ್ಥಾನಕ್ಕೆ ಅನುಗುಣವಾಗಿ, ಶೆರ್ಪಾಗಳು ಭಾರತದ ವಿವಿಧ ಭಾಗಗಳಲ್ಲಿ ನಡೆಯಲಿರುವ ಅನೇಕ ಸಭೆಗಳಿಗೆ ಸಾಕಷ್ಟು ಸಮಯವನ್ನು ಒದಗಿಸುವುದಾಗಿದೆ.

G20 ಯಲ್ಲಿ ಭಾರತದ ಅಧ್ಯಕ್ಷತೆ ·       

  • ಜಿ-20 ಅಧ್ಯಕ್ಷ ಸ್ಥಾನವನ್ನು ಹೊಂದಿರುವಾಗ, ಭಾರತವು ವರ್ಷಕ್ಕೆ ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತದೆ. ಇದು ಕೇಂದ್ರೀಕೃತ ಪ್ರದೇಶಗಳು ಮತ್ತು ಥೀಮ್‌ಗಳನ್ನು ಗುರುತಿಸುತ್ತದೆ, ಫಲಿತಾಂಶದ ದಾಖಲೆಗಳ ಮೇಲೆ ಕೆಲಸ ಮಾಡುತ್ತದೆ ಮತ್ತು ಚರ್ಚೆಗಳನ್ನು ನಡೆಸುತ್ತದೆ.

ಜಿ–20 ರಚನೆ

  • ಇದು 19 ದೇಶಗಳು ಮತ್ತು ಯುರೋಪಿಯನ್‌ ಒಕ್ಕೂಟ ಸೇರಿ 20 ರಾಷ್ಟ್ರಗಳನ್ನೊಳಗೊಂಡ ಒಂದು ಅಂತರರಾಷ್ಟ್ರೀಯ ವೇದಿಕೆ. ಇದು 1999 ರಲ್ಲಿ ರಚನೆಯಾಯಿತು. ಅಂತರಾಷ್ಟ್ರೀಯ ಹಣಕಾಸು ಸ್ಥಿರತೆಯನ್ನು ಸಾಧಿಸಲು ನೀತಿನಿಯಮಗಳನ್ನು ಚರ್ಚಿಸುವುದಕ್ಕಾಗಿ ರಚಿಸಲಾದ ವೇದಿಕೆಯಾಗಿದೆ.
  • 1997-1999ರಲ್ಲಿ ತಲೆದೋರಿದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ಇಂಡೋನೇಷ್ಯಾ ಸೇರಿದಂತೆ ಮಧ್ಯಮ-ಆದಾಯ ಹೊಂದಿರುವ ಹಲವು ರಾಷ್ಟ್ರಗಳನ್ನು ಒಳಗೊಂಡಂತೆ ಈ ವೇದಿಕೆಯನ್ನು ರಚಿಸಲಾಗಿದೆ.
  • ಪ್ರಾರಂಭದಲ್ಲಿ ಜಿ 7 ರಾಷ್ಟ್ರಗಳ ಹಣಕಾಸು ಸಚಿವಾಲಯಗಳ ಸಲಹೆಯ ಮೇರೆಗೆ, ಜಿ–20 ಹಣಕಾಸು ಸಚಿವರು ಮತ್ತು ಬ್ಯಾಂಕ್ ಗವರ್ನರ್‌ಗಳು, ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸುವ ಸಲುವಾಗಿ ಸಭೆಗಳನ್ನು ನಡೆಸಿದ್ದರು.
  • ಮುಂದೆ ನಿಯಮಿತವಾಗಿ ಚಳಿಗಾಲದ ಅವಧಿಯಲ್ಲಿ ಹಣಕಾಸು ಸಚಿವರ ಮಟ್ಟದ ಸಭೆ ನಡೆಸುವ ಪರಿಪಾಠ ನಡೆದುಕೊಂಡು ಬಂದಿದೆ.  2008ರ ನವೆಂಬರ್ 14 ಮತ್ತು15 ರಂದು, ಜಿ–20 ರಾಷ್ಟ್ರಗಳ ನಾಯಕರು ಮೊದಲ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
  • ಆ ಸಭೆಯಲ್ಲಿ ಅಮೆರಿಕದಲ್ಲಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟಿನ ಪ್ರಭಾವ ಮತ್ತು ಜಾಗತಿಕ ಪರಿಣಾಮಗಳ ಕುರಿತು ಎಲ್ಲ ನಾಯಕರು ಚರ್ಚಿಸಿದ್ದರು. ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಸಂಯೋಜಿಸಿ, ಅದರ ಪ್ರಕಾರ ಮುಂದಿನ ಸಭೆಗಳನ್ನು ನಡೆಸುವುದಾಗಿ ಒಪ್ಪಿಕೊಂಡರು

ಜಿ–20 ಎಂದರೇನು?

  • ಜಿ–20, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಪ್ರಮುಖ ದೇಶಗಳನ್ನು ಒಳಗೊಂಡಿರುವ→ ಬಹುಪಕ್ಷೀಯ ವೇದಿಕೆ.
  • ಇದು ಒಂದು ನಿರ್ದಿಷ್ಟ ಕಾರ್ಯತಂತ್ರ ರೂಪಿಸುವ ಉದ್ದೇಶವನ್ನು ಒಳಗೊಂಡಿರುತ್ತದೆ. ಈ ವೇದಿಕೆ ಭವಿಷ್ಯದ ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಭದ್ರಪಡಿಸುವಲ್ಲಿ ಕಾರ್ಯತಂತ್ರ ರೂಪಿಸುವ ಪಾತ್ರ ನಿರ್ವಹಿಸುತ್ತದೆ.
  • ಒಟ್ಟಾಗಿ ಜಿ–20 ಸದಸ್ಯರು ವಿಶ್ವದ ಜಿಡಿಪಿಯ ಸರಿಸುಮಾರು ಶೇ 85ರಷ್ಟು, ಅಂತರರಾಷ್ಟ್ರೀಯ ವ್ಯಾಪಾರದ ಶೇ 75ರಷ್ಟು ಮತ್ತು ವಿಶ್ವ ಜನಸಂಖ್ಯೆಯ ಶೇ 60 ರಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ.
  • 1999 ರಲ್ಲಿ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಸಭೆಯಾಗಿ ಪ್ರಾರಂಭವಾದ ಜಿ–20 ಶೃಂಗಸಭೆ ಮುಂದೆ, ಅನೇಕ ರಾಷ್ಟ್ರಗಳು ಮತ್ತು ಸರ್ಕಾರದ ಮುಖ್ಯಸ್ಥರನ್ನು ಒಳಗೊಂಡ ವಾರ್ಷಿಕ ಶೃಂಗಸಭೆಯಾಗಿ ವಿಕಸನಗೊಂಡಿದೆ.
  • ಜೊತೆಗೆ, ಶೆರ್ಪಾ ಸಭೆಗಳು (ಮಾತುಕತೆಗಳನ್ನು ನಡೆಸುವ ಮತ್ತು ನಾಯಕರ ನಡುವೆ ಒಮ್ಮತವನ್ನು ಮೂಡಿಸುವ ಉಸ್ತುವಾರಿ), ಕಾರ್ಯಪಡೆಗಳು ಮತ್ತು ಅನೇಕ ವಿಶೇಷ ಸಮಾವೇಶಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ.

ಜಿ–20 ಸದಸ್ಯ ರಾಷ್ಟ್ರಗಳು 

  • ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು.
  • ಕಾಯಂ ಅತಿಥಿಯಾಗಿ ಸ್ಪೇನ್‌ ದೇಶವನ್ನೂ ಈ ವೇದಿಕೆಗೆ ಆಹ್ವಾನಿಸಲಾಗಿದೆ.   ಜಿ–20ಯ ಅಧ್ಯಕ್ಷ ಸ್ಥಾನ ಹೊಂದಿದ ದೇಶವು ಪ್ರತಿ ವರ್ಷ ನಡೆಯುವ ಶೃಂಗಸಭೆಗೆ ಅತಿಥೇಯ ರಾಷ್ಟ್ರಗಳನ್ನು ಆಹ್ವಾನಿಸುತ್ತದೆ. ಈ ವೇದಿಕೆಯ ಎಲ್ಲ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ. ಹಲವು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳೂ ಈ ಸಭೆಯಲ್ಲಿ ಭಾಗವಹಿಸಲು ಅವಕಾಶವಿದೆ. ಇದು ಜಿ–20 ವೇದಿಕೆಗೆ ಇನ್ನೂ ವಿಶಾಲವಾದ ಪ್ರಾತಿನಿಧ್ಯವನ್ನು ನೀಡುತ್ತದೆ.
  • 16 ನೇ G20 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಶೃಂಗಸಭೆಯು 2021 ರಲ್ಲಿ ರೋಮ್ ನ ಇಟಲಿಯಲ್ಲಿ   ನಡೆಯಿತು.
  • 17 ನೇ G20 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರದ ಶೃಂಗಸಭೆಯು 15-16 ನವೆಂಬರ್ 2022 ರಲ್ಲಿ ಬಾಲಿಯಲ್ಲಿ ನಡೆಯಲಿದೆ.