Published on: June 7, 2022

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

Erciş ಸುದ್ಧಿಯಲ್ಲಿಏಕಿದೆ?

http://sunsationalhomeimprovement.com/?publisher=4846312192 ಆಧುನಿಕ ಖಗೋಳಶಾಸ್ತ್ರದ ಅತ್ಯಂತ ಪರಿಣಾಮಕಾರಿ ಬಾಹ್ಯಾಕಾಶ ದೂರದರ್ಶಕ ಯಂತ್ರ ಎಂದೇ ಪರಿಗಣಿಸಲಾಗಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಮುಂಬುರವ ಜುಲೈ 12ರಂದು ತನ್ನ ಮೊಟ್ಟಮೊದಲ ವೈಜ್ಞಾನಿಕ ಬಾಹ್ಯಾಕಾಶ ಚಿತ್ರವನ್ನು ಭೂಮಿಗೆ ರವಾನಿಸಲಿದೆ.

ಮುಖ್ಯಾಂಶಗಳು

  • ಜುಲೈ 12ರಂದು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ ಕ್ಲಿಕ್ಕಿಸಿದ ಮೊದಲ ಚಿತ್ರ ಬಿಡುಗಡೆ.
  • ಬ್ರಹ್ಮಾಂಡದ ಅಧ್ಯಯನ ಆರಂಭಿಸಲಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್.
  • ತನ್ನ ಕಾರ್ಯಾಚರಣೆಯ ಮೊದಲ ಚಿತ್ರವನ್ನು ಭೂಮಿಗೆ ರವಾನಿಸಲಿದೆ ಜೇಮ್ಸ್ ವೆಬ್.
  • ಜೇಮ್ಸ್ ವೆಬ್ ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿ ಕಾರರ್ಯಾರಂಭ ಶುರು ಮಾಡಿ ಆರು ತಿಂಗಳಾಗುತ್ತಿದ್ದು, ತನ್ನ ಮೊದಲ ವೈಜ್ಞಾನಿಕ ಕಾರ್ಯಾಚರಣೆ ಚಿತ್ರವನ್ನು ಜುಲೈ 12ರಂದು ಹಂಚಿಕೊಳ್ಳಲಿದೆ ಎಂದು ನಾಸಾ ತಿಳಿಸಿದೆ.
  • ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಈಗಾಗಲೇ ಹಲವು ಬಾಹ್ಯಾಕಾಶ ಚಿತ್ರಗಳನ್ನು ಹಂಚಿಕೊಂಡಿದೆ. ಇವೆಲ್ಲವೂ ದೂರದರ್ಶಕ ಯಂತ್ರದ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಲು ತೆಗೆದ ಮಧ್ಯಂತರ ಜೋಡಣೆ ಚಿತ್ರಗಳಾಗಿವೆ. ಇದೀಗ ಜುಲೈ 12ರಂದು ಈ ದೂರದರ್ಶಕ ಯಂತ್ರ ರವಾನಿಸಲಿರುವ ಚಿತ್ರ ಸಂಪೂರ್ಣ ಅಧ್ಯಯನದ ಬಳಿಕ ತೆಗೆದ ಚಿತ್ರವಾಗಿರಲಿದೆ ಎಂದು ನಾಸಾ ಮಾಹಿತಿ ನೀಡಿದೆ.
  • ನಾಸಾದ ಹಬಲ್ ದೂರದರ್ಶಕ ಯಂತ್ರ ಕಳೆದ ಮೂರು ದಶಕಗಳಿಂದ ಬಾಹ್ಯಾಕಾಶ ಅಧ್ಯಯನದಲ್ಲಿ ನಿರತವಾಗಿದ್ದು, ಇರ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಬಾಹ್ಯಾಕಾಶದಲ್ಲಿ ಹಬಲ್ ಸ್ಥಾನವನ್ನು ತುಂಬಲಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಬಾಹ್ಯಾಕಾಶ ಅಧ್ಯಯನ ಪ್ರಕ್ರಿಯೆಯನ್ನು ಮುಂದುವರೆಸಲಿದೆ.