Published on: March 9, 2023

ದಿಬಾಂಗ್ ಜಲವಿದ್ಯುತ್ ಯೋಜನೆ

ದಿಬಾಂಗ್ ಜಲವಿದ್ಯುತ್ ಯೋಜನೆ


ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ ಕೇಂದ್ರ ಸರ್ಕಾರವು ಅನುಮೋದಿಸಿದ ದಿಬಾಂಗ್ ಜಲವಿದ್ಯುತ್ ಯೋಜನೆಯು ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ.


ಮುಖ್ಯಾಂಶಗಳು

 • ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿನ ಕೆಳ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ ದಿಬಾಂಗ್ ನದಿಯ ಮೇಲೆ ಚೀನಾದ ಗಡಿಭಾಗದಲ್ಲಿಈ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುಚ್ಛಕ್ತಿನಿಗಮ (ಎನ್ ಎಚ್ಪಿಸಿ) ಕಾರ್ಯಗತಗೊಳಿಸುತ್ತಿದೆ. ವಿಶೇಷವೆಂದರೆ ಇದನ್ನು ಪರ್ವತ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
 • 3,50,000 ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪರಿಸರ ಮತ್ತುಅರಣ್ಯ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು 2013 ರಲ್ಲಿಯೋಜನೆಗೆ ಅನುಮತಿ ನೀಡುವುದನ್ನು ತಡೆಹಿಡಿದಿತ್ತು.
 • ಆದರೆ, ಈಗ ಯೋಜನೆಗೆ ಅಗತ್ಯವಿರುವ ಪರಿಸರ ಹಾಗೂ ಅರಣ್ಯ ಸಂಬಂಧಿ ಅನುಮತಿ ಸೇರಿದಂತೆ ಅಗತ್ಯವಿರುವ ಎಲ್ಲಾಶಾಸನಬದ್ಧಅನುಮೋದನೆಗಳನ್ನು ಪಡೆದುಕೊಳ್ಳಲಾಗಿದೆ.

ಯೋಜನೆಯ  ವಿವರ

 • ನಿರ್ಮಾಣದ ನಂತರ ಈ ಅಣೆಕಟ್ಟು ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟಾಗಿ ಹೊರಹೊಮ್ಮಲಿದೆ.
 • ಸಾಮರ್ಥ್ಯ: 2,880 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಗುರಿ
 • ಅಂದಾಜು ವೆಚ್ಚ : 319 ಶತಕೋಟಿ INR ಆಗಿದೆ.
 • ಇದು ಪೂರ್ಣಗೊಳ್ಳಲು 9 ವರ್ಷಗಳು ಬೇಕಾಗುತ್ತವೆ.
 • ಪೂರ್ಣಗೊಂಡ ನಂತರ ಅರುಣಾಚಲ ಪ್ರದೇಶ ಸರ್ಕಾರವು 1346.76 MU ನೀರನ್ನು ಮತ್ತು ನಲವತ್ತುವರ್ಷಗಳ ಕಾಲ ಉಚಿತ ವಿದ್ಯುತ್ ಪಡೆಯಲಿದೆ.
 • ಭಾರತದ ಅತಿ ಎತ್ತರದ ಅಣೆಕಟ್ಟು: ಈ ಯೋಜನೆಯಡಿ 278 ಮೀಟರ್ ಎತ್ತರದ ಕಾಂಕ್ರೀಟ್ ಅಣೆಕಟ್ಟು (ಆಳವಾದ ಅಡಿಪಾಯ ಮಟ್ಟಕ್ಕಿಂತ ಮೇಲೆ) ನಿರ್ವಿುಸಲಾಗುತ್ತಿದೆ.
 • 300ರಿಂದ 600 ಮೀಟರ್ ಉದ್ದ ಹಾಗೂ 9 ಮೀ ವ್ಯಾಸವನ್ನು ಹೊಂ ದಿರುವ ಕುದುರೆಲಾಳ ಆಕಾರದ 6 ಸುರಂಗಗಳು; ನೆಲದಡಿಯ ಪವರ್ ಹೌಸ್ ಅನ್ನು ಕೂಡ ಈ ಯೋಜನೆಯಲ್ಲಿನಿರ್ವಿುಸಲು ಉದ್ದೇಶಿಸಲಾಗಿದೆ.
 • ಅರುಣಾಚಲಕ್ಕೆ ಪ್ರಯೋಜನ: ಈ ಯೋಜನೆಯು ಪೂರ್ಣಗೊಂಡ ನಂತರ ಅರುಣಾಚಲ ಪ್ರದೇಶಕ್ಕೆ. ಅಲ್ಲದೆ, ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಕೊಡುಗೆಯಾಗಿ ಒಟ್ಟು 26785 ಕೋಟಿ ರೂಪಾಯಿ ಲಭ್ಯವಾಗಲಿದೆ. ಸಮುದಾಯ ಮತ್ತುಸಾಮಾಜಿಕ ಅಭಿವೃದ್ಧಿ ಯೋಜನೆಗೆ 241 ಕೋಟಿ ರೂಪಾಯಿ, ಸ್ಥಳೀಯ ಜನರ ಸಂಸ್ಕೃತಿ ಮತ್ತುಗುರುತನ್ನು ಕಾಪಾಡುವ ಯೋಜನೆಗೆ 3.27 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಯೋಜನೆಯ ಉದ್ದೇಶ

 • ‘ದಿಬಾಂಗ್ ವಿವಿಧೋದ್ದೇಶ ಯೋಜನೆ’ಯು ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಲಿದೆ. ಈಶಾನ್ಯ ಭಾರತದಲ್ಲಿ ಪ್ರವಾಹ ನಿಯಂತ್ರಿಸುವ ಪ್ರಮುಖ ಉದ್ದೇಶವನ್ನೂ ಈ ಯೋಜನೆ ಹೊಂದಿದೆ. ಮತ್ತು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿನವೀಕರಿಸಬಹುದಾದ ಇಂಧನ ಉತ್ಪಾದಿಸುವ ಉದ್ದೇಶವನ್ನು ಹೊಂದಿದೆ.

ಯೋಜನೆಯ ಅಗತ್ಯ

 • ಈ ಯೋಜನೆ ಜಾರಿಯಾದರೆ, ಕೆಳಭಾಗದ ಸಾಕಷ್ಟು ಪ್ರದೇಶದಲ್ಲಿಉಂಟಾಗುವ ಪ್ರವಾಹವನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಬ್ರಹ್ಮಪುತ್ರವು ಪ್ರಬಲ ನದಿಯಾಗಿದ್ದು, ಇದರಿಂದ ಉಂಟಾಗುವ ಪ್ರವಾಹವನ್ನು ತಗ್ಗಿಸುವುದು ಸವಾಲಿನ ಸಂಗತಿಯಾಗಿದೆ.
 • ದಿಹಾಂಗ್, ದಿಬಾಂಗ್ ಮತ್ತುಲೋ ಹಿತ್ ಇವು ಬ್ರಹ್ಮಪುತ್ರ ನದಿಯ ಪ್ರಮುಖ ಉಪನದಿಗಳು. ಮಳೆಗಾಲದಲ್ಲಿ ಈ ನದಿಗಳು ಈಶಾನ್ಯ ಭಾರತ ಪ್ರದೇಶದಲ್ಲಿ ಸಾಕಷ್ಟು ಪ್ರವಾಹವನ್ನು ಸೃಷ್ಟಿಸುತ್ತವೆ. ಪ್ರವಾಹ ಸೃಷ್ಟಿ ಹಾಗೂ ನೀರಿನ ಹರಿವು ಬದಲಾಯಿಸುವ ಕಾರಣಕ್ಕಾಗಿ ಬ್ರಹ್ಮಪುತ್ರ ನದಿಯನ್ನು‘ಅಸ್ಸಾಂನ ದುಃಖ’ ಎಂದೇ ಕರೆಯಲಾಗುತ್ತದೆ. ದಿಬಾಂಗ್ ನದಿಗೆ ಅಣೆಕಟ್ಟು ನಿರ್ವಿುಸಿ ನೀರಿನ ಹರಿವನ್ನು ನಿಯಂತ್ರಿಸಿದರೆ, ಬ್ರಹ್ಮಪುತ್ರ ನದಿಯಲ್ಲಿನೀರಿನ ಹರಿವನ್ನು ನಿಯಂತ್ರಿಸದಂತಾಗುತ್ತದೆ. ಏಕೆಂದರೆ, ದಿಬಾಂಗ್ ನದಿಯು ಬ್ರಹ್ಮಪುತ್ರದ ಉಪನದಿಯಾಗಿದೆ.

ದಿಬಾಂಗ್ ನದಿ

 • ಈ ನದಿಯು ಇಂಡೋ -ಚೀನಾ ಗಡಿಯಲ್ಲಿ, ಅಂದರೆ ಕೀಯಾ ಪಾಸ್ ಬಳಿ ಹುಟ್ಟುತ್ತದೆ.
 • ಮಿಶ್ಮಿ ಬೆಟ್ಟಗಳ ಮೂಲಕ ಹರಿಯುತ್ತದೆ.
 • ಡಿಬ್ರು-ಸೈಖೋವಾ ಅಭಯಾರಣ್ಯದ ಬಳಿ ಲೋಹಿತ್ ನದಿಯನ್ನು ಸೇರುತ್ತದೆ.
 • ಉಪನದಿಗಳು : ಎಮ್ರಾ, ಇಥುನ್, ದ್ರಿ, ರಂಗೋ ನ್, ಮಾಥುನ್ ಮತ್ತುಸಿಸಾರ್.

ನಿಮಗಿದು ತಿಳಿದಿರಲಿ

 • ಪ್ರಧಾನಿ ಮನಮೋಹನ್ ಸಿಂಗ್ ಅವರು 2008 ರಲ್ಲಿ ಯೋಜನೆಯ ಅಡಿಗಲ್ಲು ಹಾಕಿದ್ದರು.
 • ದಿಬಾಂಗ್ ಯೋಜನೆಯು ಎತ್ತರ ಹಾಗೂ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿತೆಹ್ರಿಯನ್ನು ಮೀರಿಸಲಿದೆ.
 • ತೆಹ್ರಿ ಅಣೆಕಟ್ಟು: ಭಾಗೀರಥಿ ನದಿಯ ಮೇಲೆ ಕಟ್ಟಲಾಗಿದೆ. ಈಗ ಭಾರತದಲ್ಲಿರುವ ಅತಿಎತ್ತರದ ಅಣೆಕಟ್ಟು. ಉತ್ತರಾಖಂಡ ರಾಜ್ಯದಲ್ಲಿರುವ ಈ ಅಣೆಕಟ್ಟಿನ ಎತ್ತರ 260.5 ಮೀಟರ್. 2400 ಮೆಗಾ ವ್ಯಾಟ್ ವಿದ್ಯುತ್ ಇಲ್ಲಿಉತ್ಪಾದನೆಯಾಗುತ್ತದೆ.