Published on: November 2, 2022

ದೀನ ದಯಾಳ್ ಸ್ಪರ್ಶ್ ಯೋಜನೆ:

ದೀನ ದಯಾಳ್ ಸ್ಪರ್ಶ್ ಯೋಜನೆ:

ಸುದ್ದಿಯಲ್ಲಿ ಏಕಿದೆ?

ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹ ಸಂಗ್ರಹ ಮತ್ತು ಅಧ್ಯಯನವನ್ನು ಉತ್ತೇಜಿಸಲು ಅಂಚೆ ಇಲಾಖೆ ಜಾರಿಗೆ ತಂದಿರುವ ದೀನ ದಯಾಳ್ ಸ್ಪರ್ಶ್ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಒಟ್ಟು 2,237 ವಿದ್ಯಾರ್ಥಿಗಳು 40 ವಿದ್ಯಾರ್ಥಿವೇತನಕ್ಕಾಗಿ ಸ್ಪರ್ಧಿಸಿದ್ದಾರೆ.

ಮುಖ್ಯಾಂಶಗಳು

  • ‘ದೀನ ದಯಾಳ್ ಸ್ಪರ್ಶ್ ಯೋಜನೆ’ಗೆ ನಿರೀಕ್ಷಿತ ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ರಾಜ್ಯದಾದ್ಯಂತ ರಸಪ್ರಶ್ನೆ ನಡೆಯಿತು.
  • ಸ್ಪರ್ಶ ಎಂದರೆ ಹವ್ಯಾಸವಾಗಿ ಸ್ಟ್ಯಾಂಪ್‍ಗಳಲ್ಲಿ ಆಪ್ಟಿಟ್ಯೂಡ್ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಸ್ಕಾಲರ್‌ಶಿಪ್ಎಂದರ್ಥ.
  • ‘ವಿದ್ಯಾರ್ಥಿವೇತನ ಪ್ರಶಸ್ತಿಯು ವರ್ಷಕ್ಕೆ 6,000 ರೂ. ಆಗಿದೆ.  ಉತ್ತಮ ಶೈಕ್ಷಣಿಕ ದಾಖಲೆ ಹೊಂದಿರುವ, ಅಂಚೆಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಅನುಸರಿಸುವ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುತ್ತದೆ’.
  • ಹವ್ಯಾಸವು ಒಂದೇ ರೀತಿಯ ಆಸಕ್ತಿಯನ್ನು ಹೊಂದಿರುವ ಜನರ ನಡುವೆ ಸಾಮಾಜಿಕ ಸಂಪರ್ಕವನ್ನು ಮತ್ತು ಹೊಸ ಸ್ನೇಹದ ಬೆಳವಣಿಗೆಗೆ ಕಾರಣವಾಗುತ್ತದೆ.

ಉದ್ದೇಶ

  • ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸಲು ಮತ್ತು ಪೂರಕವಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆಚೀಟಿಗಳ ಸಂಗ್ರಹವನ್ನು ಉತ್ತೇಜಿಸುವುದು ಈ ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ. ಸ್ಟ್ಯಾಂಪ್‍ಗಳಲ್ಲಿ ಆಪ್ಟಿಟ್ಯೂಡ್ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಇದು ತರಗತಿ 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.

ಅಂಚೆ ಚೀಟಿ ಸಂಗ್ರಹಣೆಯಿಂದ ಪ್ರಯೋಜನ:

  • ಅಂಚೆಚೀಟಿ ಸಂಗ್ರಹವು ಬಹು ಶೈಕ್ಷಣಿಕ ಪ್ರಯೋಜನಗಳನ್ನು ಹೊಂದಿರುವುದರಿಂದ ವಿದ್ಯಾರ್ಥಿಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಏಕೆಂದರೆ, ಇದು ಅಂಚೆಚೀಟಿ ಬಿಡುಗಡೆಯಾದ ಅವಧಿಯ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ವಾಸ್ತವತೆ ಅಥವಾ ಅದನ್ನು ಆಧರಿಸಿದ ವಿಷಯದ ಬಗ್ಗೆ ಸಾಕಷ್ಟು ಕಲಿಸುತ್ತದೆ.
  • ಅಂಚೆಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವು ವಿಷಯಾಧಾರಿತ ಪ್ರದೇಶಗಳಲ್ಲಿ ಅವುಗಳನ್ನು ಅಥವಾ ಸಂಬಂಧಿತ ಉತ್ಪನ್ನಗಳನ್ನು ಹುಡುಕುವುದು, ಪತ್ತೆ ಮಾಡುವುದು, ಸ್ವಾಧೀನಪಡಿಸಿಕೊಳ್ಳುವುದು, ಸಂಘಟಿಸುವುದು, ಪಟ್ಟಿಮಾಡುವುದು, ಪ್ರದರ್ಶಿಸುವುದು, ಸಂಗ್ರಹಿಸುವುದು ಮತ್ತು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ.
  • ಅಂಚೆಚೀಟಿ ಸಂಗ್ರಹವು ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸುತ್ತದೆ ಮತ್ತು ಪೂರಕಗೊಳಿಸುತ್ತದೆ. ಜೊತೆಗೆ, ಈ ಹವ್ಯಾಸವು ಮಕ್ಕಳಿಗೆ ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.