Published on: October 30, 2022

ದೇಶೀಯ ಮಾರ್ಗಸೂಚಿ ವ್ಯವಸ್ಥೆ ‘ನಾವಿಕ್‌’

ದೇಶೀಯ ಮಾರ್ಗಸೂಚಿ ವ್ಯವಸ್ಥೆ ‘ನಾವಿಕ್‌’

Zhangjiakou Shi Xuanhua Qu ಸುದ್ದಿಯಲ್ಲಿ  ಏಕಿದೆ?

buy modafinil cheap uk ಇಸ್ರೊ ತನ್ನ ಉಪಗ್ರಹಗಳ ಮೂಲಕ ರೂಪಿಸಿರುವ ದೇಶೀಯ ಮಾರ್ಗಸೂಚಿ ವ್ಯವಸ್ಥೆಯಾದ ‘ನಾವಿಕ್‌’ (NaVIC) ಅನ್ನು ನಾಗರಿಕ ವಲಯಗಳಿಗೂ ವಿಸ್ತರಿಸಲು ಮುಂದಾಗಿದೆ. ದೇಶದ ಗಡಿಗಳಿಂದ ದೂರಕ್ಕೆ ಸಾಗುವ ಹಡಗುಗಳು ಹಾಗೂ ವಿಮಾನಗಳಲ್ಲಿ ನಾವಿಕ್‌ ಬಳಸಲು ಅನುವಾಗುವಂತೆ ವಿಸ್ತರಣೆಯ ನಿರ್ಧಾರ ಕೈಗೊಳ್ಳಲಾಗಿದೆ

ಮುಖ್ಯಾಂಶಗಳು

  • ನಾವಿಕ್‌ ವ್ಯವಸ್ಥೆ ಜೋಡಿಸಲಾಗಿರುವ ಉಪಗ್ರಹಗಳ ಸಮೂಹದಲ್ಲಿ ಹಲವು ಉಪಗ್ರಹಗಳು ಈಗಾಗಲೇ ಕಾರ್ಯಾಚರಣೆಯ ನಿಗದಿತ ಅವಧಿಯನ್ನು ಮೀರಿವೆ. ಹಾಗಾಗಿ, ಇವುಗಳ ಪೈಕಿ ಕನಿಷ್ಠ ಐದು ಉಪಗ್ರಹಗಳ ಬದಲು ಅತ್ಯಾಧುನಿಕ ಎಲ್‌-ಬ್ಯಾಂಡ್‌ಗೆ ಜೋಡಿಸಲು ಇಸ್ರೊ (ISRO) ಮುಂದಾಗಿದೆ.
  • ಇಸ್ರೊ ಐದು ಉಪಗ್ರಹಗಳನ್ನು ಸಿದ್ಧಪಡಿಸುತ್ತಿದ್ದು, ಕಾಲಕ್ರಮವಾಗಿ ಅವುಗಳನ್ನು ಉಡಾವಣೆ ಮಾಡುವ ಮೂಲಕ ನಿಷ್ಕ್ರಿಯಗೊಂಡಿರುವ ಉಪಗ್ರಹಗಳಿಗೆ ಬದಲಾಗಿ ಬಳಸಲಾಗುತ್ತದೆ, ಭಾರತದ ಉಪಗ್ರಹಗಳ ಸಮೂಹದಿಂದ ಮಾರ್ಗಸೂಚಿ ವ್ಯವಸ್ಥೆ ಕಲ್ಪಿಸುತ್ತಿರುವ ನಾವಿಕ್‌ ಹೊಸ ಉಪಗ್ರಹಗಳು ಎಲ್‌-1, ಎಲ್‌-5 ಹಾಗೂ ಎಸ್‌ ಬ್ಯಾಂಡ್‌ ಒಳಗೊಂಡಿರಲಿವೆ 12 ಉಪಗ್ರಹಗಳನ್ನು ಉಡಾವಣೆ ಮಾಡಲು ಸರಕಾರದ ಅನುಮತಿ ಕೋರಿರುವ ಇಸ್ರೊ ಹೊಸದಿಲ್ಲಿಭಾರತದ ಉಪಗ್ರಹಗಳ ಸಮೂಹದಿಂದ ಮಾರ್ಗಸೂಚಿ ವ್ಯವಸ್ಥೆ ಕಲ್ಪಿಸುತ್ತಿರುವ ನಾವಿಕ್‌ (Navigation with Indian Constellation), ಸ್ಥಳದ ನಿಖರ ಮಾಹಿತಿ ಹಾಗೂ ಸಮಯವನ್ನು ಸೂಚಿಸುತ್ತಿದೆ. ಪ್ರಸ್ತುತ ಭಾರತ ಹಾಗೂ ದೇಶ ಗಡಿಗಳಿಂದ 1,500 ಕಿ.ಮೀ. ವ್ಯಾಪ್ತಿಯವರೆಗೂ ನಾವಿಕ್‌ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದೆ.
  • ಪ್ರಸ್ತುತ ನಾವಿಕ್‌ ಬಳಸುತ್ತಿರುವ ಏಳು ಉಪಗ್ರಹಗಳ ಪೈಕಿ ಮೂರು ಉಪಗ್ರಹಗಳು ಭೂಸ್ಥಿರ ಕ್ಷಕ್ಷೆಯಲ್ಲಿವೆ (geostationary orbit) ಹಾಗೂ ನಾಲ್ಕು ಉಪಗ್ರಹಗಳು ಭೂ ವರ್ಗಾವಣೆ (geosynchornous) ಕಕ್ಷೆಯಲ್ಲಿವೆ .
  • ಸಾರ್ವಜನಿಕರು ಮೊಬೈಲ್‌ ಫೋನ್‌ ಅಥವಾ ಇತರೆ ಸಾಧನಗಳಲ್ಲಿ ಜಿಪಿಎಸ್‌ಗಾಗಿ ನಾವಿಕ್‌ ವ್ಯವಸ್ಥೆಯನ್ನು ಬಳಸಬೇಕಾದರೆ ಎಲ್‌-1 ಬ್ಯಾಂಡ್‌ ಹೊಂದಿರುವ ಹೊಸ ಉಪಗ್ರಹಗಳೊಂದಿಗೆ ಸಂಪರ್ಕಿಸಬೇಕಾಗುತ್ತದೆ. ಸದ್ಯ ಈಗ ಅದು ನಾವಿಕ್‌ನಲ್ಲಿ ಇಲ್ಲ. ಅದರಿಂದಾಗಿಯೇ ಸಾರ್ವಜನಿಕ ವಲಯದಲ್ಲಿ ಇನ್ನೂ ನಾವಿಕ್‌ ಬಳಕೆ ಸಾಧ್ಯವಾಗಿಲ್ಲ.

ಉದ್ದೇಶ

  • ಈಗಿನ ಉಪಗ್ರಹಗಳ ಸಮೂಹವು ಎಲ್‌-5 ಮತ್ತು ಎಸ್‌ ಬ್ಯಾಂಡ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದು, ಸಾರಿಗೆ ಮತ್ತು ವಾಯುಯಾನ ವಲಯಗಳಲ್ಲಿ ಮಾರ್ಗಸೂಚಿಗೆ ಬಳಕೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಜಿಪಿಎಸ್‌ ವ್ಯವಸ್ಥೆ ಮತ್ತಷ್ಟು ಉತ್ತಮಗೊಳ್ಳಲಿದೆ.