Published on: March 1, 2023

ಪಂಪ ಪ್ರಶಸ್ತಿ

ಪಂಪ ಪ್ರಶಸ್ತಿ


ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷವೂ ರಾಜ್ಯ ಸರ್ಕಾರವು ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರೇಷ್ಠರಿಗೆ ಪಂಪ ಪ್ರಶಸ್ತಿ ನೀಡುತ್ತಿದ್ದು 2022-23ನೇ ಸಾಲಿನ ಪಂಪ ಪ್ರಶಸ್ತಿಗೆ ಡಾ. ಎಸ್.ಆರ್. ರಾಮಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ.


ಮುಖ್ಯಾಂಶಗಳು

 • 2020-21, 2021-22 ಮತ್ತು 2022-23ನೇ ಸಾಲಿನ ‘ಪಂಪ’ ಪ್ರಶಸ್ತಿ ಪುರಸ್ಕೃ ತರ ಆಯ್ಕೆಗಾಗಿ ಡಾ.ಜಿ.ಬಿ. ಹರೀಶ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು.
 • ಸಮಿತಿಯ ಶಿಫಾರಸಿನಂತೆ 2020-21ನೇ ಸಾಲಿಗೆ ಸಿ.ಪಿ.ಕೃಷ್ಣಕುಮಾರ 2021-22ನೇ ಸಾಲಿಗೆ ಬಾಬು ಕೃಷ್ಣಮೂರ್ತಿ ಮತ್ತು 2022-23ನೇ ಸಾಲಿನ ಪ್ರಶಸ್ತಿಗೆ ಎಸ್.ಆರ್.ರಾಮಸ್ವಾಮಿ ಅವರನ್ನು ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಆದೇಶ ಹೊರಡಿಸಿದೆ.
 • ಪ್ರಶಸ್ತಿ: ಪಂಪ ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿರುತ್ತದೆ.

ಡಾ. ಎಸ್ಆರ್ ರಾಮಸ್ವಾಮಿ

 • ಜನನ : 29 ಅಕ್ಟೋಬರ್ 1937   ಬೆಂಗಳೂರು
 • ಇವರನ್ನು ಅಲೆಮಾರಿ ರಾಮಸ್ವಾಮಿ ಎಂದು ಕರೆಯಲಾಗುತ್ತದೆ.
 • ಪುಸ್ತಕಗಳು : “ಶತಮಾನದ ತಿರುವಿನಲ್ಲಿ ಭಾರತ” (1989), “ಸ್ವೆಟೋಸ್ಲಾವ್ ರೋರಿಚ್” (1974), “ಕೋಲ್ಮಿಂಚು” (1996), “ದೀವಿಟ್ಗೆಗಳು” (1998), “ಕಾರ್ಗಿಲ್ ಕಂಪನ” (1999)
 • ಪ್ರಶಸ್ತಿಗಳು: “ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ” (1992), “ಆರ್ಯಭಟ ಪ್ರಶಸ್ತಿ” (2006), “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” (2008), “ಗೌರವ ಡಾಕ್ಟರೇಟ್ (ಡಿ. ಲಿಟ್)” (2011)
 • ನಾಲ್ಕು ದಶಕಗಳಿಂದ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಡಾ.ಎಸ್.ಆರ್.ರಾಮಸ್ವಾಮಿ ಅವರು ಸಕ್ರಿಯರಾಗಿದ್ದಾರೆ.
 • ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು 30 ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ. ಸಾಂಸ್ಕೃತಿಕ, ಸಾಹಿತ್ಯಿಕ, ರಾಷ್ಟ್ರೀಯತಾವಾದಿ ಮತ್ತು ಅಭಿವೃದ್ಧಿ ವಿಷಯಗಳ ಕುರಿತು 1,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.
 • ಹಿರಿಯ ಪತ್ರಕರ್ತ, ಆರ್​ಎಸ್​ಎಸ್​ ವಿಚಾರವಾದಿಯಾಗಿರುವ ಡಾ. ಎಸ್ಆರ್ ರಾಮಸ್ವಾಮಿ ಅವರು 1979ರಿಂದ 4 ದಶಕಗಳಿಂದ ರಾಷ್ಟ್ರೋತ್ಥಾನ ಪರಿಷತ್ತು ಪ್ರಕಟಿಸುವ ಜನಪ್ರಿಯ ಮಾಸಿಕ ಉತ್ಥಾನದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿ.ಪಿ.ಕೃಷ್ಣಕುಮಾರ

 • ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಅವರು 8-4-1936ರಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು.
 • ಪ್ರಬಂಧಗಳು: ಚಿಂತನಬಿಂದು ಮೆಲುಕು ವಿಚಾರನಿವಿಷ
 • ಪ್ರಶಸ್ತಿಗಳು : ಬಸವ ಸಾಹಿತ್ಯಶ್ರೀ, ವಿದ್ವತ್ ಶಿರೋಮಣಿ, ಹನಿಗವನ ಹರಿಕಾರ, ಜಾನಪದತಜ್ಞ, ನೃಪತುಂಗ ಸಾಹಿತ್ಯ ಪ್ರಶಸ್ತಿ ಇತ್ಯಾದಿ.

ಬಾಬು ಕೃಷ್ಣಮೂರ್ತಿ

 • ಸಾಹಿತ್ಯ, ಪತ್ರಿಕೋದ್ಯಮ, ಈ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾಗಿರುವ ಬಾಬು ಕೃಷ್ಣಮೂರ್ತಿಯವರು ಮೇ 11, 1944ರಂದು ಬೆಂಗಳೂರಿನಲ್ಲಿ ಜನಿಸಿದರು.
 • ಕೃತಿಗಳು: ಇವರು ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದರನ್ನು ಕುರಿತು ಆರು ವರ್ಷಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ‘ಅದಮ್ಯ’,ರುದ್ರಾಭಿಷೇಕ’ ‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’, ಅಲ್ಲೂರಿ ಸೀತಾರಾಮರಾಜು, ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಶ್ರೀಅರವಿಂದರು, ಮೇಡಂ ಕಾಮ, ಡಾ. ಸಿ.ಜಿ. ಶಾಸ್ತ್ರಿ : ಒಂದು ಯಶೋಗಾಥೆ
 • ಪ್ರಶಸ್ತಿಗಳು: ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಪಂಪ ಪ್ರಶಸ್ತಿ

 • ಕರ್ನಾಟಕ ಸರ್ಕಾರ ಪ್ರತಿ ವರ್ಷವೂ `ಪಂಪ’ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
 • 1987ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿ ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಶ್ರೇಷ್ಠರನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾಗಿದೆ.
 • ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ರಾಷ್ಟ್ರಕವಿ ಕುವೆಂಪು ಅವರಿಗೆ ನೀಡಲಾಗಿತ್ತು. ಪ್ರತಿ ವರ್ಷ ಪಂಪನ ಬನವಾಸಿಯಲ್ಲಿ ನಡೆಯುವ ‘ ಕದಂಬೋತ್ಸವ ‘ ದಲ್ಲಿ ಈ ಪ್ರಶಸ್ತಿಯನ್ನುಪ್ರದಾನ ಮಾಡಲಾಗುತ್ತದೆ.