Published on: February 7, 2023
ಪರಶುರಾಮ ಥೀಮ್ ಪಾರ್ಕ್
ಪರಶುರಾಮ ಥೀಮ್ ಪಾರ್ಕ್
where to buy Lurasidone online ಸುದ್ದಿಯಲ್ಲಿ ಏಕಿದೆ? buying Seroquel online ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನಲ್ಲಿ ಉಮಿಕ್ಕಲ್ ಬೆಟ್ಟದ ಮೇಲೆ ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಕಂಚಿನ ಪ್ರತಿಮೆಯೊಂದಿಗೆ ಪರಶುರಾಮನ ಥೀಮ್ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ.
ಮುಖ್ಯಾಂಶಗಳು
- ವಿಗ್ರಹ 33 ಅಡಿ ಎತ್ತರವಿದ್ದು, 15 ಟನ್ ಭಾರವಿದೆ. ಈ ವಿಗ್ರಹವನ್ನು ಕಂಚು ಮತ್ತು ಉಕ್ಕು ಬಳಸಿ ನಿರ್ಮಿಸಲಾಗಿದೆ.
- ವೆಚ್ಚ:ಪರಶುರಾಮ್ ಥೀಂ ಪಾರ್ಕ್ಅನ್ನು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
- ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣ ನಾಯ್ಕ ಅವರು ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.
- ಇಲ್ಲಿ ಪರಶುರಾಮನ ಪ್ರತಿಮೆ, ಬಯಲು ರಂಗ ಮಂದಿರ ಆರ್ಟ್ ಗ್ಯಾಲರಿ, ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ.
- ಈ ಪ್ರದೇಶ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವುದರಿಂದ ಮಳೆಗಾಲದಲ್ಲಿ ಗುಡುಗು ಹಾಗೂ ಮಿಂಚಿನಿಂದ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಕಂಚು ಮತ್ತು ಇನ್ನಿತರೆ ಲೋಹಗಳ ಮಿಶ್ರಣದಿಂದ ಪರಶುರಾಮನ ಮೂರ್ತಿಯನ್ನು ಮಿಂಚು ಪ್ರತಿಬಂಧಿಕವಾಗಿ ನಿರ್ಮಾಣ ಮಾಡಲಾಗಿದೆ.
- ಪರುಶುರಾಮ ಥೀಂ ಪಾರ್ಕ್ ಪ್ರವಾಸೋದ್ಯಮದ ಉತ್ತೇಜನವೂ ಇದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ.
- ವಿನ್ಯಾಸ: ಉಡುಪಿಯ ಯುವ ವಾಸ್ತುವಿನ್ಯಾಸಗಾರ ಎ.ಆರ್. ಸಂಪ್ರೀತ್ ರಾವ್ ಈ ಥೀಮ್ ಪಾರ್ಕನ್ನು ವಿನ್ಯಾಸಗೊಳಿಸಿದ್ದು, ಸುಮಾರು 100 ಅಡಿ ಎತ್ತರದ ಬಂಡೆಕಲ್ಲನ್ನು ಮತ್ತು ಅದರ ಸುತ್ತ ಪ್ರಾಕೃತಿಕ ಪರಿಸರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ.
- ನಿರ್ಮಾಣ: ಉಡುಪಿ ನಿರ್ಮಿತಿ ಕೇಂದ್ರ ಈ ಯೋಜನೆಯ ನಿರ್ಮಾಣದ ಉಸ್ತುವಾರಿ ವಹಿಸಿದೆ.
- ಸಹಯೋಗ: ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಪಿಟಿಸಿಎಲ್
- ಪರಶುರಾಮ: ಪರಶುರಾಮ ತುಳುನಾಡನ್ನೂ ಒಳಗೊಂಡ ಕರ್ನಾಟಕದ ಕರಾವಳಿ ತೀರದ ಸೃಷ್ಟಿಕರ್ತ. ದಂಡಕಾರಣ್ಯದ ಪಶ್ಚಿಮಕ್ಕೆ ಇರುವ ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಾಮರು ಸೃಷ್ಟಿಸಿದ್ದು ಎಂಬುದು ಪುರಾಣ ಪ್ರತೀತಿ. ಸುಮಾರು 5,000 ವರ್ಷಗಳಿ ಗಿಂತಲೂ ಹಿಂದೆ ಭಾರತದ ಪುಣ್ಯ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ ಮಹರ್ಷಿ ಜಮದಗ್ನಿ ಪುತ್ರನಷ್ಟೇ ಅಲ್ಲ, ವಿಷ್ಣುವಿನ ಆರನೇ ಅವತಾರ ಎಂದೇ ಪರಿಗಣಿಸಿಲಾಗಿದೆ.