Published on: January 20, 2023

ಪೊಲೀಸ್ ಇ-ಬೀಟ್ ಸ್ಮಾರ್ಟ್

ಪೊಲೀಸ್ ಇ-ಬೀಟ್ ಸ್ಮಾರ್ಟ್


ಸುದ್ದಿಯಲ್ಲಿ ಏಕಿದೆ? ಸಾರ್ವಜನಿಕರ ಭದ್ರತೆ ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ರೂಪಿಸಿರುವ ಪೊಲೀಸ್ ಗಸ್ತುವ್ಯವಸ್ಥೆಸಂಪೂರ್ಣವಾಗಿ ಸ್ಮಾರ್ಟ್ ಆಗಿದೆ. ಪುಸ್ತಕ ಆಧಾರಿತ ಗಸ್ತುಪದ್ಧತಿಯನ್ನು ಪೂರ್ಣ ಪ್ರಮಾಣದಲ್ಲಿರದ್ದುಪಡಿಸಿ ‘ಸ್ಮಾರ್ಟ್ ಇ-ಬೀಟ್’ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ.


ಮುಖ್ಯಾಂಶಗಳು

  • ಮೊದಲ ಹಂತದಲ್ಲಿನಗರಗಳಲ್ಲಿಮಾತ್ರ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ-ಬೀಟ್ ಜಾರಿಗೊ ಳಿಸಲಾಗಿತ್ತು.
  • ಈಗ ಗ್ರಾಮೀಣ ಭಾಗಗಳಿಗೂ (ರೂರಲ್ ಬೀಟ್ ಅಥವಾ ಡೇ ಬೀಟ್) ವಿಸ್ತರಿಸಿ ಡಿಜಿಪಿ ಆದೇಶ ಹೊ ರಡಿಸಿದ್ದಾರೆ. ಹಳ್ಳಿಗಳಲ್ಲಿ ಗಸ್ತು ನಿರ್ವಹಿಸಬೇಕಾದ ಹಗಲು ಬೀಟ್ ಪಾಯಿಂಟ್ಗಳನ್ನು ಸ್ಮಾರ್ಟ್ ಇ-ಬೀಟ್ ತಂತ್ರಾಂಶದಲ್ಲಿಅಳವಡಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ.
  • ಇ-ಬೀಟ್ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಗಸ್ತುಪಾಳಿ ಕಡ್ಡಾಯ.
  • ಈವರೆಗೆ ನಗರಗಳಲ್ಲಷ್ಟೇ ರಾತ್ರಿ ಗಸ್ತಿಗೆ ಸ್ಮಾರ್ಟ್ ಇ- ಬೀಟ್ ಪದ್ಧತಿಯಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿಈಗ ಗ್ರಾಮೀಣ ಪ್ರದೇಶದ ಡೇ ಬೀಟ್ಗೂ ವಿಸ್ತರಿಸಲಾಗಿದೆ.

ಅಭಿವೃದ್ಧಿ : ಕರ್ನಾಟಕ ಪೊಲೀಸ್ ಇಲಾಖೆ

ಉದ್ದೇಶ

  • ಕಾವಲು ಕಾಯದಿದ್ದರೂ ಗಸ್ತುತಿರುಗಿದ್ದೇವೆ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಸಹಜವಾಗಿ ಆ ಪ್ರದೇಶದಲ್ಲಿ ಕಳ್ಳತನ, ದರೋಡೆ, ಗಲಾಟೆ, ಗುಂಪು ಘರ್ಷಣೆ, ಕೋಮು ಗಲಭೆ ಇನ್ನಿತರ ಅಪರಾಧ ಪ್ರಕರಣಗಳಿಗೂ ಕಡಿವಾಣ ಬೀಳಲಿದೆ. ಜತೆಗೆ ಪೊಲೀಸರ ಸಂಚಾರದಿಂದ ಹೆಚ್ಚಿನ ಭದ್ರತೆ ಹಾಗೂ ರಕ್ಷಣೆಯ ಭರವಸೆಯನ್ನೂ ಸಾರ್ವಜನಿಕರಲ್ಲಿಮೂಡಿಸುತ್ತದೆ.

ಪ್ರಯೋಜನಗಳು

  • ನಗರಗಳಲ್ಲಿಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ, ಅಪರಾಧ ಪ್ರಕರಣಗಳು ನಡೆಯುವ ಜಾಗ, ವೃದ್ಧರು ಇರುವಂತಹ ಪ್ರದೇಶಗಳಲ್ಲಿಪಾಯಿಂಟ್ ಗುರುತಿಸಲಾಗಿರುತ್ತದೆ.
  • ರಾತ್ರಿಪಾಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಅಲ್ಲಿಗೆ ತೆರಳಿ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಬೇಕು. ಗ್ರಾಮೀಣ ಭಾಗದಲ್ಲಿಆಯಾ ಠಾಣಾ ವ್ಯಾಪ್ತಿಯ ಐದಾರು ಹಳ್ಳಿಗಳನ್ನು ಸೇರಿಸಿ ಒಂದು ಪಾಯಿಂಟ್ ಎಂದು ಗುರುತಿಸಲಾಗುತ್ತದೆ. ಆ ಎಲ್ಲಹಳ್ಳಿಗೂ ಗಸ್ತುಸಿಬ್ಬಂದಿ ಭೇಟಿ ಕೊಟ್ಟು ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಮೂಲಕ ಮಾಹಿತಿ ಅಪ್ಲೋ ಡ್ ಮಾಡಬೇಕು.
  • ಯಾವ ಹಳ್ಳಿಗೆ ಯಾವ ಸಮಯಕ್ಕೆ ಹೋ ಗಿದ್ದರು ಎಂಬ ಮಾಹಿತಿಯನ್ನು ಮೇಲಧಿಕಾರಿಗಳು ತಾವಿದ್ದಲ್ಲೇ ಪಡೆಯಬಹುದು.
  • ಗಸ್ತುತಿರುಗದ ಸಿಬ್ಬಂದಿ ವಿರುದ್ಧಶಿಸ್ತುಕ್ರಮ ಜರುಗಿಸಲು ಇದರಿಂದ ಅನುಕೂಲವಾಗುತ್ತದೆ.

ವಿವಿಧ ರೀತಿಯ ಬೀಟ್ ಗಳು : ನೈಟ್ ಬೀಟ್, ಡೇ ಬೀಟ್, ನ್ಯೂಸೆನ್ಸ್ ಬೀಟ್, ಗುಡ್ ಮಾರ್ನಿಂಗ್ ಬೀಟ್, ಫೆಸ್ಟಿವಲ್ ಬೀಟ್, ವಿಲೇಜ್ ಬೀಟ್ ನಗರ, ಪಟ್ಟಣ ಪ್ರದೇಶಗಳಲ್ಲಷ್ಟೇ ರಾತ್ರಿ ಗಸ್ತುಇದೆ. ಗ್ರಾಮೀಣ ಭಾಗದಲ್ಲಿಡೇ-ಬೀಟ್ ಅಥವಾ ಹಗಲು ಗಸ್ತುಪದ್ಧತಿ ಇದೆ ಹಬ್ಬ-ಹರಿದಿನ, ಗಲಾಟೆ ಸಂದರ್ಭ ಹೊರತು ಬೀಟ್ಗಳನ್ನು ಆಯಾ ಪರಿಸ್ಥಿತಿಗೆ ತಕ್ಕಂತೆ ಪೊಲೀಸರು ನಿರ್ವಹಿಸುತ್ತಾ ರೆ