Published on: December 7, 2022

ಪ್ಲಾಟ್‌ಫಾರ್ಮ್‌ ‘1ಎಂಜಿ’

ಪ್ಲಾಟ್‌ಫಾರ್ಮ್‌ ‘1ಎಂಜಿ’

ಸುದ್ದಿಯಲ್ಲಿ ಏಕಿದೆ?

ಆರೋಗ್ಯ ಸಂಬಂಧಿ ಉತ್ಪನ್ನಗಳು ಹಾಗೂ ಔಷಧಗಳನ್ನು ಗ್ರಾಹಕರಿಗೆ ತಲುಪಿಸಲು ಡ್ರೋನ್ ಡೆಲಿವರಿಯ ಪ್ರಾಯೋಗಿಕ ಯೋಜನೆಯನ್ನು ಡೆಹ್ರಾಡೂನ್ನಲ್ಲಿ ಟಾಟಾ ಗ್ರೂಪ್ನ ಡಿಜಿಟಲ್ ಹೆಲ್ತ್ ಪ್ಲಾಟ್ಫಾರ್ಮ್ ‘1ಎಂಜಿ’ ಪ್ರಾರಂಭಿಸಿದೆ.

ಮುಖ್ಯಾಂಶಗಳು

·      ದೂರದ ಪ್ರದೇಶಗಳಿಗೆ ಔಷಧ ವಿತರಣೆಯನ್ನು ಮಾಡುವುದರ ಜೊತೆಗೆ ಈ ಡ್ರೋನ್‌ಗಳು, ನಗರದ ವಿವಿಧ ಭಾಗಗಳಿಂದ ಸ್ಯಾಂಪಲ್‌ಗಳನ್ನೂ ಸಂಗ್ರಹಿಸುತ್ತಿವೆ.

·      ಅವುಗಳನ್ನು ಸುರಕ್ಷಿತವಾಗಿ ಟಾಟಾ 1ಎಂಜಿ ಲ್ಯಾಬ್‌ಗೆ ಸಾಗಿಸುತ್ತಿವೆ. ಈ ಸ್ಯಾಂಪಲ್‌ಗಳ ಸಾಗಾಟದಲ್ಲಿ ಬಳಸಲಾಗುವ ವಸ್ತುಗಳು ತಾಪಮಾನ ನಿಯಂತ್ರಿತವಾಗಿರುತ್ತವೆ.

·      ಈ ಡ್ರೋನ್‌ಗಳು ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಸಾಗಿಸುವಾಗ ತಾಪಮಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ತಂತ್ರಜ್ಞಾನವನ್ನೂ ಹೊಂದಿವೆ.
ತುರ್ತು ಲ್ಯಾಂಡಿಂಗ್‌ ಮಾಡಬೇಕಾದ ಸಂದರ್ಭಗಳಲ್ಲಿ ಕೂಡ ಡ್ರೋನ್‌ಗಳು, ಯಾವುದೇ ಸ್ಯಾಂಪಲ್‌ ಅಥವಾ ಪಾರ್ಸೆಲ್‌ಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ಇಳಿಯಬಹುದಾದ ಹತ್ತಿರದ ಹಬ್‌ ಅನ್ನು ಪತ್ತೆಹಚ್ಚುತ್ತವೆ.

ಉದ್ದೇಶ :

·       ಈ ಡ್ರೋನ್‌ಗಳ ಮೂಲಕ ವೇಗವಾಗಿ ಔಷಧ ಮತ್ತು ವೈದ್ಯಕೀಯ ಉತ್ಪನ್ನಗಳನ್ನು ತಲುಪಿಸಬಹುದು. ರಸ್ತೆ ಸಂಚಾರದ ವಿಳಂಬವನ್ನು ತಪ್ಪಿಸಲು ಸಾಧ್ಯವಾಗಲಿದೆ. ಡ್ರೋನ್‌ ಡೆಲಿವರಿಯಿಂದ ಸಮಯ ಉಳಿತಾಯವಾಗುತ್ತದೆ.

·       ಒಪ್ಪಂದ : ಈ ಸೇವೆಗಾಗಿ ಟಾಟಾ ಸಂಸ್ಥೆ ಪ್ರಮುಖ ಡ್ರೋನ್‌ ಲಾಜಿಸ್ಟಿಕ್ಸ್‌ ಸೇವಾ ಪೂರೈಕೆದಾರ ಕಂಪನಿ ಟಿಸಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಡ್ರೋನ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

1. ಸ್ಯಾಂಪಲ್‌ಗಳನ್ನು ಸಾಗಿಸುವ ಡ್ರೋನ್‌ ಅನ್ನು 6 ಕೆ.ಜಿಯವರೆಗಿನ ಪೇಲೋಡ್‌ ಅನ್ನು ಸಾಗಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇವು 100 ಕಿ.ಮೀ ವೈಮಾನಿಕ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿವೆ. ಒಂದೇ ಡ್ರೋನ್‌ 150 ಸ್ಯಾಂಪಲ್‌ಗಳ ಪೇಲೋಡ್‌ ಅನ್ನು ಸಾಗಿಸಬಲ್ಲದು.
2. ಡ್ರೋನ್‌ಗಳು ಸ್ಮಾರ್ಟ್‌ ಮ್ಯಾಪಿಂಗ್‌ ತಂತ್ರಜ್ಞಾನವನ್ನು ಸಹ ಹೊಂದಿವೆ. ಇದು ಹಾರಲು ಸುರಕ್ಷಿತ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತವೆ. ಇದಲ್ಲದೆ, ಈ ಡ್ರೋನ್‌ಗಳು ಸಮೀಪದಲ್ಲಿ ಯಾವುದೇ ವಸ್ತುಗಳು ಹಾರಾಟ ನಡೆಸುವುದನ್ನು ಅರಿತುಕೊಳ್ಳುವ ಸೆನ್ಸಾರ್‌ಗಳನ್ನೂ ಹೊಂದಿದ್ದು, ಘರ್ಷಣೆಯನ್ನು ತಪ್ಪಿಸುತ್ತವೆ.