Published on: December 22, 2022

‘ಫ್ರಾಂಟಿಯರ್‌ ಹೈವೆ’

‘ಫ್ರಾಂಟಿಯರ್‌ ಹೈವೆ’

São Luiz Gonzaga ಸುದ್ದಿಯಲ್ಲಿ ಏಕಿದೆ? ಗಡಿಯಲ್ಲಿ ಚೀನಾ ಹಾವಳಿ  ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ Sillod ಅರುಣಾಚಲ ಪ್ರದೇಶದಲ್ಲಿ ಸೇನಾ ವಾಹನಗಳ ಸುಲಭ ಸಂಚಾರಕ್ಕೆ 1,748 ಕಿ.ಮೀ ಉದ್ದದ ಹೊಸ ಹೆದ್ದಾರಿ ನಿರ್ಮಿಸಲು ಮುಂದಾಗಿದೆ.

ಮುಖ್ಯಾಂಶಗಳು

  • ಉದ್ದೇಶಿತ ‘ಫ್ರಾಂಟಿಯರ್‌ ಹೈವೆ’ಯು ಭಾರತ – ಟಿಬೆಟ್‌ – ಚೀನಾ – ಮ್ಯಾನ್ಮಾರ್‌ ಗಡಿಯ ಸಮೀಪದಲ್ಲೇ ಹಾದುಹೋಗಲಿದ್ದು, ಸೇನಾ ವ್ಯೂಹಾತ್ಮಕ ದೃಷ್ಟಿಯಿಂದ ಭಾರತದ ಪಾಲಿಗೆ ಮಹತ್ವದ್ದಾಗಿರಲಿದೆ.
    27 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಲಿದ್ದು, 2024-25ನೇ ಸಾಲಿನಲ್ಲಿ ಆರಂಭಗೊಂಡು ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
  • ಈ ರಸ್ತೆಯನ್ನು ಎನ್‌ಎಚ್‌-913 ಎಂದು ಕರೆಯಲಾಗಿದೆ ಇದನ್ನು ರಸ್ತೆ ಸಾರಿಗೆ ಮಂತ್ರಾಲಯದಿಂದ ನಿರ್ಮಿಸಲಾಗುತ್ತಿದೆ. ಗಡಿಯುದ್ದಕ್ಕೂ ನಿರ್ಮಿಸಲು ಮುಂದಾಗಿರುವ ಈ ಹೆದ್ದಾರಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಅತಿ ದೊಡ್ಡ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಉದ್ದೇಶ

  • ಗಡಿ ಪ್ರದೇಶದಲ್ಲಿ ನಡೆಯುವ ಜನರ ವಲಸೆಯನ್ನು ತಡೆಯುವ ಉದ್ದೇಶ ಕೂಡ ಹೊಂದಿದೆ. ಹೆದ್ದಾರಿ ನಿರ್ಮಾಣದಿಂದ ಸೇನಾಪಡೆಗಳು ಮತ್ತು ಸೇನಾ ವಾಹನಗಳನ್ನು ಗಡಿಗೆ ಪ್ರಯಾಣಿಸುವುದು ಇನ್ನಷ್ಟು ಸುಲಭವಾಗಲಿದೆ. ಇದರಿಂದ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಗೆ ಪ್ರತಿರೋಧ ಒಡ್ಡಲು ಕೂಡ ಸಹಾಯವಾಗುತ್ತದೆ.

ಹೆದ್ದಾರಿ ಹಾದುಹೋಗುವ ಪ್ರದೇಶಗಳು :

  • ಈ ಹೆದ್ದಾರಿ ಬಾಂಬ್ಡೀಲಾದಲ್ಲಿ ಪ್ರಾರಂಭವಾಗಿ, ನಫ್ರಾ, ಹುರಿ ಮತ್ತು ಮೊನಿಗಾಂಗ್‌ನ ಮೂಲಕ ಹಾದು ಹೋಗುತ್ತದೆ. ಮೊನಿಗಾಂಗ್‌ ಭಾರತ ಮತ್ತು ಟಿಬೆಟ್‌ ಗಡಿಗೆ ಅತಿ ಹತ್ತಿರದ ಪ್ರದೇಶವಾಗಿದೆ. ಅದಲ್ಲದೇ ಚೀನಾ ಗಡಿಗೆ ಅತಿ ಸಮೀಪದಲ್ಲಿರುವ ಜಿಡೋ ಮತ್ತು ಚೆಂಕ್ವೆಂಟಿ ಪ್ರದೇಶಗಳ ಮೂಲಕವೂ ಈ ರಸ್ತೆ ಹಾದುಹೋಗಲಿದೆ. ಭಾರತ ಮತ್ತು ಮಯನ್ಮಾರ ಗಡಿಯಲ್ಲಿನ ವಿಜಯನಗರದಲ್ಲಿ ಹೆದ್ದಾರಿ ಅಂತ್ಯಗೊಳ್ಳಲಿದೆ.