Published on: January 4, 2023

ಬಂಡೀಪುರ ಯುವ ಮಿತ್ರ ಯೋಜನೆ

ಬಂಡೀಪುರ ಯುವ ಮಿತ್ರ ಯೋಜನೆ

buy Lyrica ಸುದ್ದಿಯಲ್ಲಿ ಏಕಿದೆ? ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಭೂಪೇಂದ್ರ ಯಾದವ್ ಅವರು ಚಾಮರಾಜನಗರ ಜಿಲ್ಲೆಯ buy antabuse 500 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವನ್ಯಜೀವಿ ಸಫಾರಿ ಕಾರ್ಯಕ್ರಮ ‘ಬಂಡಿಪುರ ಯುವ ಮಿತ್ರ’ಕ್ಕೆ ಚಾಲನೆ ನೀಡಿದರು.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆದ 29 ಸದಸ್ಯರು ಭಾಗವಹಿಸಿದ್ದ 22ನೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
  • ಸಭೆಯಲ್ಲಿ ಹುಲಿ ಸಂರಕ್ಷಣೆ, ಹೆಚ್ಚಿದ ಮನುಷ್ಯ-ಪ್ರಾಣಿ ಸಂಘರ್ಷ, ಹುಲಿ ಯೋಜನೆಯಡಿ ಇನ್ನೂ ಕೆಲವು ಉದ್ಯಾನಗಳನ್ನು ಸೇರಿಸುವ ಪ್ರಸ್ತಾವನೆ ಕುರಿತು ಚರ್ಚೆ ನಡೆಸಲಾಯಿತು.

ಏನಿದು ಯೋಜನೆ?

  • ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಅದರ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅರಣ್ಯ ಇಲಾಖೆಯು ಉಚಿತ ಸಫಾರಿ ಒಂದು ಯೋಜನೆಯಾಗಿದೆ.
  • ಬಂಡೀಪುರ ಸುತ್ತಮುತ್ತಲಿನ 140 ಗ್ರಾಮಗಳ ಶಾಲಾ ಮಕ್ಕಳಿಗೆ ಉಚಿತ ಸಫಾರಿ ಹಾಗೂ ಕಾರ್ಯಾಗಾರ, 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆ ಜಾಗೃತಿಗಾಗಿ ವಿವಿಧ ಕಾರ್ಯಕ್ರಮವನ್ನು ಬಂಡೀಪುರ ಯುವ ಮಿತ್ರ ಯೋಜನೆ ಒಳಗೊಂಡಿದೆ.
  • ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳಿಗೆ ಮಾನ್ಯತೆ ಪಡೆಯಲು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ.
  • ವಿದ್ಯಾರ್ಥಿಗಳಿಗೆ ಕಾಡ್ಗಿಚ್ಚು ತಪ್ಪಿಸುವುದು ಮತ್ತು ಮನುಷ್ಯ-ಪ್ರಾಣಿ ಸಂಘರ್ಷಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ತರಬೇತಿ ನೀಡಲಾಗುತ್ತಿದೆ.

ಉದ್ದೇಶ: ಮಕ್ಕಳಲ್ಲಿ ವನ್ಯ ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವುದು.