Published on: October 22, 2022

ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳ ಅಧ್ಯಯನ

ಬಾಹ್ಯಾಕಾಶದಲ್ಲಿ ಸೂಕ್ಷ್ಮಜೀವಿಗಳ ಅಧ್ಯಯನ

http://m-sar.uk/call-outs ಸುದ್ಧಿಯಲ್ಲಿ ಏಕಿದೆ?

backhand ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್ಎಸ್) ಸೂಕ್ಷ್ಮಾಣುಜೀವಿಗಳ ನಡುವಿನ ವರ್ತನೆ ಕುರಿತು ಮದ್ರಾಸ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ–ಎಂ) ಮತ್ತು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಸಂಶೋಧಕರು ಮಹತ್ವದ ಅಧ್ಯಯನ ನಡೆಸಿವೆ.

ಮುಖ್ಯಾಂಶಗಳು

  • ಐಎಸ್ಎಸ್‌ನಲ್ಲಿರುವ ಸೂಕ್ಷ್ಮಾಣುಜೀವಿಗಳಿಂದ ವಿವಿಧ ಸೂಕ್ಷ್ಮಾಣುಜೀವಿಗಳಿಗೂ ಪ್ರಯೋಜನವಿದೆ ಮತ್ತು ಶಿಲೀಂಧ್ರದ ಬೆಳವಣಿಗೆಯನ್ನೂ ತಡೆಯುತ್ತವೆ ಎನ್ನುವುದು ಈ ಅಧ್ಯಯನದಲ್ಲಿ ಕಂಡುಬಂದಿದೆ.
  • ಐಎಸ್ಎಸ್‌ ಅನ್ನು ಸೋಂಕುರಹಿತಗೊಳಿಸಲು ಮತ್ತು ಗಗನಯಾತ್ರಿಗಳ ಆರೋಗ್ಯದ ಮೇಲಿನ ದುಷ್ಪರಿಣಾಮ ತಗ್ಗಿಸುವ ತಂತ್ರಜ್ಞಾನ ರೂಪಿಸಲು ಈ ಅಧ್ಯಯನ ನೆರವಾಗಲಿದೆ.
  • ಐಎಸ್ಎಸ್‌ನ ಏಳು ಜಾಗಗಳಲ್ಲಿ ಮೂರು ಬಾರಿಯ ಬಾಹ್ಯಾಕಾಶ ಯಾನದ ವೇಳೆ ಸಂಗ್ರಹಿಸಿದ ಸೂಕ್ಷ್ಮಜೀವಿಯ ಮಾದರಿಯ ದತ್ತಾಂಶವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.
  • ಐಎಸ್ಎಸ್‌ನಲ್ಲಿರುವ ಪ್ರಮುಖ ಸೂಕ್ಷ್ಮಾಣುಜೀವಿ ಕ್ಲೆಬ್ಸಿಯೆಲ್ಲಾ ನ್ಯುಮೋನಿಯೆ ತನ್ನ ಸುತ್ತಮುತ್ತಲಿನ ಇತರ ಸೂಕ್ಷ್ಮಾಣುಜೀವಿಗಳಿಗೆ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಇದು ವಿಶೇಷವಾಗಿ ಪ್ಯಾಂಟೊಯ ತಳಿಯ ಬ್ಯಾಕ್ಟೀರಿಯಾ ಆಸ್ಪರ್ಜಿಲಸ್ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ.
  • ಈ ಅಧ್ಯಯನ ವರದಿಯು ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆ ‘ಮೈಕ್ರೋಬಯೋಮ್‌’ನಲ್ಲಿ ಪ್ರಕಟವಾಗಿದೆ.