Published on: March 18, 2023

ಬೆಂಗಳೂರಿಗೆ ಡಬ್ಲ್ಯು ಎಚ್ಒ ಪ್ರಶಸ್ತಿ

ಬೆಂಗಳೂರಿಗೆ ಡಬ್ಲ್ಯು ಎಚ್ಒ ಪ್ರಶಸ್ತಿ

where can i get cytotec ಸುದ್ದಿಯಲ್ಲಿ ಏಕಿದೆ? ತಂಬಾಕು ನಿಯಂತ್ರಣದ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳನ್ನು(ಎನ್ಸಿಡಿ) ತಡೆಗಟ್ಟುವಲ್ಲಿ ಮಾಡಿದ ಸಾಧನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ಒ) ಬೆಂಗಳೂರು ಮತ್ತು ಇತರ ನಾಲ್ಕು ನಗರಗಳಿಗೆ ಪ್ರಶಸ್ತಿ ನೀಡಿದೆ.

Pāndhurnā ಮುಖ್ಯಾಂಶಗಳು

  • ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ 2023 ಅನ್ನು ಉರುಗ್ವೆಯ ಮಾಂಟೆವಿಡಿಯೋ ಜತೆಗೆ ಬೆಂಗಳೂರಿಗೆ ನೀಡಲಾಗಿದೆ.
  • ಮೆಕ್ಸಿಕೋದ ಮೆಕ್ಸಿಕೋ ಸಿಟಿ, ಕೆನಡಾದ ವ್ಯಾಂಕೂವರ್ ಹಾಗೂ ಗ್ರೀಸ್ನ ಅಥೆನ್ಸ್ಗಳು ಪಡೆದುಕೊಂಡಿವೆ. ಲಂಡನ್‌ನಲ್ಲಿ ನಡೆದ ಆರೋಗ್ಯಕರ ನಗರಗಳ ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆಇದನ್ನು ತಿಳಿಸಿದೆ.
  • ಜನರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯಲು ಸಮರ್ಥನೀಯ ಮತ್ತು ಶಾಶ್ವತವಾದ ಉಪಕ್ರಮಗಳನ್ನು ಕೈಗೊಂಡ ನಗರಗಳನ್ನು ಗುರುತಿಸಲಾಗಿದ್ದು, ಆ ಮಾದರಿ ನಗರಗಳು ಅನುಸರಿಸಿದ ಕ್ರಮಗಳನ್ನು ಇತರೆಡೆಗೂ ಅನ್ವಯಿಸಲಾಗುತ್ತದೆ.

ಪ್ರಶಸ್ತಿಯ ಮಾನದಂಡ :

  • ನಗರವಾಸಿಗಳ ಆರೋಗ್ಯದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವಂತಹ ನಗರಗಳನ್ನು ಗುರುತಿಸಲಾಗಿದ್ದು, ಅವು ಸಾಂಕ್ರಮಿಕವಲ್ಲದ ರೋಗಗಳು ಮತ್ತು ಗಾಯದ ತಡೆಗಟ್ಟುವಿಕೆಯ ಕಡೆಗೆ ಸಮರ್ಥನೀಯ ಮತ್ತು ಶಾಶ್ವತವಾದ ಕ್ರಮಗಳನ್ನು ತೆಗೆದುಕೊಂಡ ಕಾರಣ ಗುರುತಿಸಲ್ಪಟ್ಟಿವೆ.
  • ಪ್ರಶಸ್ತಿ : ಬೆಂಗಳೂರು ಸೇರಿ 5 ನಗರಗಳಿಗೆ ಪಾಲುದಾರಿಕೆಯಲ್ಲಿ ಅವುಗಳು ಸಾಧಿಸುವ ಸಾಧನೆಗೆ 1.5 ಲಕ್ಷ ಅಮೆರಿಕನ್‌ ಡಾಲರ್‌ ಬಹುಮಾನವನ್ನು ವಿತರಿಸಲಾಗಿದೆ.

ಯಾವ ವಿಭಾಗಗಳಿಗೆ ಮತ್ತು ನಗರಗಳಿಗೆ ಪ್ರಶಸ್ತಿ ?

  • ತಂಬಾಕು ನಿಯಂತ್ರಣ, ಅದರಲ್ಲೂ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ ಹಾಗೂ ಸಾರ್ವಜನಿಕ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಆದೇಶಗಳ ಅನುಸರಣೆಯನ್ನು ಸುಧಾರಿಸುವ ಪ್ರಯತ್ನಗಳಿಗಾಗಿ ಬೆಂಗಳೂರಿಗೆ ಈ ಬಹುಮಾನ ಸಿಕ್ಕಿದೆ.
  • ಮಾದಕ ದ್ರವ್ಯ ನಿಯಂತ್ರಣ ಕ್ರಮಗಳಿಗಾಗಿ ಅಥೆನ್ಸ್ ನಗರಕ್ಕೆ ಈ ಪ್ರಶಸ್ತಿ ನೀಡಲಾಗಿದೆ.
  • ಜನನಿಬಿಡ ರಸ್ತೆಯಲ್ಲಿ ಬೈಕ್ ಮಾರ್ಗವನ್ನು ಪ್ರಾರಂಭಿಸುವ ಮೂಲಕ ರಸ್ತೆ ಸುರಕ್ಷತೆ ಮತ್ತು ಸಕ್ರಿಯ ಚಲನಶೀಲತೆಯನ್ನು ಸುಧಾರಿಸಿದ್ದಕ್ಕಾಗಿ ಮೆಕ್ಸಿಕೊ ನಗರ ಈ ಪಟ್ಟಿ ಸೇರಿದೆ. ಇದರಿಂದಾಗಿ ಮೆಕ್ಸಿಕೊದಲ್ಲಿ ಸೈಕ್ಲಿಸ್ಟ್ಗಳ ಪ್ರಮಾಣ ಶೇಕಡ 275ರಷ್ಟು ಹೆಚ್ಚಿದೆ.
  • ಸರ್ಕಾರಿ ಕಚೇರಿಗಳು ಮತ್ತು ಕೆಲವು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಆಹಾರ ತಯಾರಿಕೆ ಹಾಗೂ ಮಾರಾಟದಲ್ಲಿ ಪೌಷ್ಟಿಕಾಂಶದ ಮಾನದಂಡಗಳನ್ನು ಸ್ಥಾಪಿಸಿದ್ದಕ್ಕಾಗಿ ಮಾಂಟೆವಿಡಿಯೊ ನಗರಕ್ಕೆ ಈ ಗೌರವ ಸಿಕ್ಕಿದೆ.
  • ಜನರ ಆರೋಗ್ಯ ಸೂಚಕಗಳ ಜಾಡು ಹಿಡಿಯುವ ಆನ್ಲೈನ್ ಸಾರ್ವಜನಿಕ ಆರೋಗ್ಯ ಡೇಟಾ ಉಪಕರಣವನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ಡೇಟಾವನ್ನು ಸುಲಭವಾಗಿ ದೊರೆಯುವಂತೆ ಮಾಡಿದ್ದಕ್ಕಾಗಿ ಕೆನಡಾದ ವ್ಯಾಂಕೂವರ್ ನಗರವು ಈ ಪ್ರಶಸ್ತಿ ಪಡೆದಿದೆ.
  • ಮೇಯರ್ಗಳು ತಮ್ಮ ನಾಗರಿಕರ ಆರೋಗ್ಯವನ್ನು ರಕ್ಷಿಸಲು ಕಠಿಣ ಕ್ರಮಗಳ ಮೂಲಕ ಹೇಗೆ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಈ ಐದು ನಗರಗಳು ಸಾಕ್ಷಿಯಾಗಿವೆ’. ‘ಉತ್ತಮ ಆರೋಗ್ಯಕ್ಕೆ ಉತ್ತೇ ಜನ ಮತ್ತು ಆರೋಗ್ಯ ರಕ್ಷಿಸುವ ನಗರಗಳನ್ನು ನಿರ್ಮಿಸಲು ವಿಶ್ವದಾದ್ಯಂತ ಮೇಯರ್ಗಳನ್ನು ಬೆಂಬಲಿಸುವ ಮೂಲಕ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಬದ್ಧವಾಗಿದೆ.

ಸಾಂಕ್ರಾಮಿಕವಲ್ಲದ ರೋಗಗಳೆಂದರೆ

  • ಹೃದಯರೋಗ, ಪಾಶ್ರ್ವವಾಯು, ಕ್ಯಾನ್ಸರ್‌, ಮಧುಮೇಹ ಮತ್ತು ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸಾಂಕ್ರಾಮಿಕವಲ್ಲದ ರೋಗ ಎಂದು ಪರಿಗಣಿಸಲಾಗುತ್ತದೆ. ಇವು ಜಗತ್ತಿನ ಒಟ್ಟು ಸಾವಿನಲ್ಲಿ ಶೇ.80ರಷ್ಟು ಸಾವಿಗೆ ಕಾರಣವಾಗುತ್ತಿವೆ.