Published on: June 26, 2023

ಬೇಹುಗಾರಿಕೆ ತಂತ್ರಜ್ಞಾನ

ಬೇಹುಗಾರಿಕೆ ತಂತ್ರಜ್ಞಾನ

ಸುದ್ದಿಯಲ್ಲಿ ಏಕಿದೆ?   ಸೈಬರ್ ಕ್ಷೇತ್ರದಿಂದ ಬರುವ ಅಪಾಯಗಳ ಮೇಲೆ ಕಣ್ಗಾವಲಿಡುವ, ಬೇಹುಗಾರಿಕೆ ಪತ್ತೆಮಾಡುವ ಮತ್ತು ಬೇಹುಗಾರಿಕೆ ನಡೆಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಪ್ಯಾರಡೈಮ್ ಸಂಸ್ಥೆಗೆ (ಸಿಎಸ್ಐಆರ್ 4 ಪಿಐ) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಮುಖ್ಯಾಂಶಗಳು

  • ಇದಕ್ಕಾಗಿ ರೂಪಿಸಿರುವ ದೂರದರ್ಶಕ ಜಾಲದ ಯೋಜನೆಯ ಪರಿಕಲ್ಪನೆಯ ಪ್ರಾತ್ಯಕ್ಷಿಕೆಯನ್ನು ಪಿಐ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಇದನ್ನು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯಾಗಿ ರೂಪಿಸಲಾಗುತ್ತಿದೆ’.

ಉದ್ದೇಶ

  • ‘ಇದನ್ನು ದೇಶದ ಭದ್ರತಾ ವ್ಯವಸ್ಥೆಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರಯೋಜನ

  • ದೂರದರ್ಶಕ ಜಾಲ ವ್ಯವಸ್ಥೆಯು ದುರುದ್ದೇಶಪೂರಿತ ಅಂತರ್ಜಾಲ ಮಾಹಿತಿಯ ಹರಿದಾಟದ ಮೇಲೆ ನಿಗಾ ಇಡುವುದಲ್ಲದೇ, ಅದನ್ನು ದಾಖಲಿಸಿಕೊಳ್ಳುತ್ತದೆ. ಅತ್ಯಂತ ಸಂಕೀರ್ಣ ವ್ಯೂಹಾತ್ಮಕ ಮಾಹಿತಿಗಳ ಮೇಲೆ ನಿಗಾ ಇಡುತ್ತದೆ.
  • ಇದರಿಂದ ವಿಶೇಷವಾಗಿ ಸೈಬರ್ ದಾಳಿಗಳನ್ನು ತಡೆಯಲು ಮತ್ತುಈ ಸಂಬಂಧ ಮುಂಚಿತವಾಗಿ ಗೋಪ್ಯ ಮಾಹಿತಿಯನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ.

ಸೈಬರ್ ದಾಳಿ ಎಂದರೇನು?

  • ಸೈಬರ್ ಕ್ರೈಮ್ ಎನ್ನುವುದು ಕಂಪ್ಯೂಟರ್ ಅಥವಾ ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಇತರ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಕ್ರಿಮಿನಲ್ ನಡವಳಿಕೆಯನ್ನು ಸೂಚಿಸುತ್ತದೆ. ಕಡಿಮೆ ತಾಂತ್ರಿಕ ಜ್ಞಾನ ಹೊಂದಿರುವ ಮತ್ತು ತುಲನಾತ್ಮಕವಾಗಿ ಪ್ರತಿಭಾವಂತ ಡೆವಲಪರ್‌ಗಳು ಮತ್ತು ಪರಿಣಿತರೊಂದಿಗೆ ವ್ಯಕ್ತಿ ಅಥವಾ ಸಣ್ಣ ಗುಂಪುಗಳು,  ವಿಶ್ವಾದ್ಯಂತ ಅಪರಾಧ ಗುಂಪುಗಳು ಸೈಬರ್‌ಕ್ರೈಮ್‌ನಲ್ಲಿ ತೊಡಗಬಹುದು.

ನಿಮಗಿದು ತಿಳಿದಿರಲಿ

  • ಇತ್ತೀಚಿನ ವರದಿಗಳ ಪ್ರಕಾರ, 2022 ರಲ್ಲಿ ಭಾರತವು 13.91 ಲಕ್ಷ ಸೈಬರ್ ಭದ್ರತಾ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರು ಹೇಳಿದ್ದಾರೆ. ಸೈಬರ್ ಅಪರಾಧದ ಮೊದಲ ಘಟನೆಯನ್ನು 1973 ರಲ್ಲಿ ದಾಖಲಿಸಲಾಯಿತು. ನ್ಯೂಯಾರ್ಕ್ ಬ್ಯಾಂಕ್‌ನಲ್ಲಿ ಟೆಲ್ಲರ್‌ನಿಂದ ಎರಡು ಮಿಲಿಯನ್ ಡಾಲರ್‌ಗಳನ್ನು ಕಳ್ಳತನ ಮಾಡಲು ಕಂಪ್ಯೂಟರ್ ಅನ್ನು ಬಳಸಲಾಯಿತು.