Published on: March 14, 2023

ಭಾರತದ ಹೆಬ್ಬಕ (ಇಂಡಿಯನ್ ಬಸ್ಟರ್ಡ್)

ಭಾರತದ ಹೆಬ್ಬಕ (ಇಂಡಿಯನ್ ಬಸ್ಟರ್ಡ್)

ಸುದ್ದಿಯಲ್ಲಿ ಏಕಿದೆ? ಕಣ್ಮರೆಯಾಗುತ್ತಿರುವ ರಾಜ್ಯ ಪಕ್ಷಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ರಕ್ಷಣೆಗೆ ರಾಜಸ್ಥಾನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಮುಖ್ಯಾಂಶಗಳು

  • ಜೈಸಲ್ಮೇರ್‌ನ ಡೆಸರ್ಟ್ ನ್ಯಾಶನಲ್ ಪಾರ್ಕ್ ಪ್ರದೇಶದಲ್ಲಿ ನೆಲೆಗೊಂಡಿರುವ ನಾಲ್ಕು ಗ್ರಾಮಗಳ 15,878 ಬಿಘಾ ಕಂದಾಯ ಭೂಮಿಯನ್ನು ರಾಜ್ಯ ಸರ್ಕಾರವು (ಉಚಿತವಾಗಿ) ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶೇಷವಾಗಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಗಾಗಿ ಅರಣ್ಯ ಇಲಾಖೆಗೆ ಮಂಜೂರು ಮಾಡಿದೆ.
  • ಈ ಹೆಚ್ಚುವರಿ ಭೂಮಿಯೊಂದಿಗೆ ಕೆಲವೊಂದು ಹೊಸ ಗೋದಾವನ್ ಪಕ್ಷಿಯನ್ನು ಮರುಭೂಮಿ ರಾಷ್ಟ್ರೀಯ ಉದ್ಯಾನವನದಲ್ಲಿ ಇಡಲಾಗುತ್ತಿದೆ ಮತ್ತು ದೇಶದಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂತಾನೋತ್ಪತ್ತಿಗೆ ಉತ್ತಮ ಸಂಪನ್ಮೂಲಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್

  • ವೈಜ್ಞಾನಿಕ ಹೆಸರು: ಆರ್ಡಿಯೊಟಿಸ್ ನಿಗ್ರಿಸೆಪ್ಸ್
  • ಕುಟುಂಬ: ಒಟಿಡಿಡೆ
  • ಸ್ಥಳೀಯವಾಗಿ ‘ಗೋದಾವನ್’ ಎಂದು ಕರೆಯಲ್ಪಡುತ್ತದೆ.
  • ಈ ಪಕ್ಷಿಯನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಕ್ಷಿ ಎಂದು  ವರ್ಗೀಕರಿಸಿದೆ.

ಹಿಂದೆ 12 ರಾಜ್ಯಗಳಲ್ಲಿ ವಾಸಿಸುತ್ತಿದ್ದ ಈ ಪಕ್ಷಿಯು ತನ್ನ ಹಿಂದಿನ ಆವಾಸಸ್ಥಾನದ ಶೇ. 90 ರಷ್ಟು ಪ್ರದೇಶದಿಂದ ನಾಶವಾಗಿದ್ದು, ಮೂರು ಸಣ್ಣ  ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ: ರಾಜಸ್ಥಾನದ ಜೈಸಲ್ಮೇರ್, ಗುಜರಾತ್‌ನ ಕಚ್‌ನ ಹುಲ್ಲುಗಾವಲುಗಳು ಮತ್ತು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಇವೆ.