Published on: January 4, 2023

ಭಾರತೀಯ ವಿಜ್ಞಾನ ಕಾಂಗ್ರೆಸ್

ಭಾರತೀಯ ವಿಜ್ಞಾನ ಕಾಂಗ್ರೆಸ್

ಸುದ್ದಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ ವಿವಿಯಲ್ಲಿ ನಡೆಯುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನಾ ಅಧಿವೇಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಖ್ಯಾಂಶಗಳು

  • ತಾಂತ್ರಿಕ ಗೋಷ್ಠಿಗಳನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಭಾಗವಾಗಿ ವಿಶ್ವವಿದ್ಯಾಲಯದ ʻಮಹಾತ್ಮ ಜೋತಿಬಾ ಫುಲೆ ಶೈಕ್ಷಣಿಕ ಕ್ಯಾಂಪಸ್ʼನ ವಿವಿಧ ಸ್ಥಳಗಳಲ್ಲಿ ಸಮಾನಾಂತರವಾಗಿ ಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ 14 ವಿಭಾಗಗಳನ್ನು ಹೊರತುಪಡಿಸಿ, ʻಮಹಿಳಾ ವಿಜ್ಞಾನ ಕಾಂಗ್ರೆಸ್ʼ, ʻರೈತರ ವಿಜ್ಞಾನ ಕಾಂಗ್ರೆಸ್ʼ, ʻಮಕ್ಕಳ ವಿಜ್ಞಾನ ಕಾಂಗ್ರೆಸ್ʼ, ʻಬುಡಕಟ್ಟು ಸಮಾವೇಶʼ, ʻವಿಜ್ಞಾನ ಮತ್ತು ಸಮಾಜʼದ ಬಗ್ಗೆ ಒಂದು ವಿಭಾಗ ಹಾಗೂ ʻವಿಜ್ಞಾನ ಸಂವಹನಕಾರರ ಕಾಂಗ್ರೆಸ್ ವಿಭಾಗಗಳು ಇರಲಿವೆ.
  • ಇಂದು ವಿಜ್ಞಾನ ಕ್ಷೇತ್ರ ಭಾರತವನ್ನು ಆತ್ಮನಿರ್ಭರ್ ಮಾಡುತ್ತಿದೆ. 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದ್ದು, ವಿಜ್ಞಾನದ ಬಳಕೆಯೊಂದಿಗೆ ಭಾರತದ ಸಿರಿಧಾನ್ಯಗಳ ಬಳಕೆಯನ್ನು ಇನ್ನಷ್ಟು ಸುಧಾರಿಸಬೇಕು.

ಜ್ಞಾನದ ಜ್ಯೋತಿ ʻವಿಜ್ಞಾನ್ ಜ್ಯೋತಿʼಯನ್ನು ಒಲಿಂಪಿಕ್ ಜ್ಯೋತಿಯ ಮಾದರಿಯಲ್ಲಿ ರೂಪಿಸಲಾಗಿದೆ. ಇದು ಸಮಾಜದಲ್ಲಿ, ವಿಶೇಷವಾಗಿ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಮರ್ಪಿತವಾದ ಆಂದೋಲನವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಈ ಜ್ಯೋತಿಯನ್ನು ಸ್ಥಾಪಿಸಲಾಗಿದ್ದು, 108ನೇ ʻಭಾರತೀಯ ವಿಜ್ಞಾನ ಕಾಂಗ್ರೆಸ್ʼ ಸಮಾಪ್ತಿಯವರೆಗೂ ಅದು ಉರಿಯುತ್ತಲೇ ಇರುತ್ತದೆ.

ವಿಶೇಷ ಆಕರ್ಷಣೆ: ಪ್ರೈಡ್ ಆಫ್ ಇಂಡಿಯಾ ಎಂಬ ಬೃಹತ್‌ ಪ್ರದರ್ಶನ

  • ಈ ಪ್ರದರ್ಶನದಲ್ಲಿ ಪ್ರಮುಖ ಬೆಳವಣಿಗೆಗಳು, ಪ್ರಮುಖ ಸಾಧನೆಗಳು ಮತ್ತು ಸಮಾಜಕ್ಕೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಮುಖ ಕೊಡುಗೆಗಳನ್ನು ಅನಾವರಣಗೊಳಿಸಲಾಗುವುದು. ಈ ಪ್ರದರ್ಶನವು ವೈಜ್ಞಾನಿಕ ಪ್ರಪಂಚದ ಸಂಪೂರ್ಣ ಚಿತ್ರಣವನ್ನು ಒಳಗೊಂಡಿರುವ ನೂರಾರು ಹೊಸ ಆಲೋಚನೆಗಳು, ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಒಟ್ಟುಗೂಡಿಸುತ್ತದೆ.
  • ದೇಶಾದ್ಯಂತದ ಸರಕಾರ, ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು(ಪಿ.ಎಸ್‌.ಯು), ಶೈಕ್ಷಣಿಕ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಸಂಸ್ಥೆಗಳು, ಅನ್ವೇಷಕರು ಮತ್ತು ಉದ್ಯಮಿಗಳ ಸಾಮರ್ಥ್ಯ ಹಾಗೂ ಸಾಧನೆಗಳ ಪ್ರದರ್ಶನವನ್ನು ʻಪ್ರೈಡ್ ಆಫ್ ಇಂಡಿಯಾʼ ಒಳಗೊಂಡಿರಲಿದೆ.

ಸ್ಟಾರ್ಟಪ್‌ಗಳಲ್ಲಿಅಗ್ರ 3ನೇಸ್ಥಾನ

  • ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೂಲಕ ವಿಶ್ವದ 130 ರಾಷ್ಟ್ರಗಳ ಪೈಕಿ ಸದ್ಯ ದೇಶವು 40ನೇ ಸ್ಥಾನದಲ್ಲಿದೆ. 2015ರಲ್ಲಿ 81ನೇ ಸ್ಥಾನದಲ್ಲಿತ್ತು. ವಿಶೇಷವಾಗಿ, ಸ್ಟಾರ್ಟಪ್‌ ಕ್ಷೇತ್ರದಲ್ಲಿ ದೇಶವು ಅಗ್ರ 3ನೇ ಸ್ಥಾನದಲ್ಲಿದೆ
  • ಗುರಿ : ಭಾರತದ ಅಗತ್ಯಗಳನ್ನು ಪೂರೈಸಲು ವೈಜ್ಞಾನಿಕ ಅಭಿವೃದ್ಧಿ ನಮ್ಮ ವಿಜ್ಞಾನಿ ಸಮುದಾಯಕ್ಕೆ ಸ್ಫೂರ್ತಿಯಾಗಬೇಕು,ಜಾಗತಿಕ ಜನಸಂಖ್ಯೆಯ ಶೇಕಡಾ 17ರಿಂದ 18ರಷ್ಟು ಮಂದಿ ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತವನ್ನು ಸಶಕ್ತಗೊಳಿಸುವ ವೈಜ್ಞಾನಿಕ ಆವಿಷ್ಕಾರಗಳು ಈ ಜಾಗತಿಕ ಜನಸಂಖ್ಯೆಯನ್ನು ಸಬಲೀಕರಣಗೊಳಿಸಲು ಸಹ ಸಹಾಯ ಮಾಡುತ್ತವೆ.