Published on: July 26, 2022

ಮಂಕಿಪಾಕ್ಸ್ ಜಾಗತಿಕ ತುರ್ತುಪರಿಸ್ಥಿತಿ

ಮಂಕಿಪಾಕ್ಸ್ ಜಾಗತಿಕ ತುರ್ತುಪರಿಸ್ಥಿತಿ

ಸುದ್ದಿಯಲ್ಲಿ ಏಕಿದೆ?

ಭಾರತವೂ ಸೇರಿದಂತೆ ಜಗತ್ತಿನ ಅನೇಕ ದೇಶಗಳನ್ನು ಕಾಡುತ್ತಿರುವ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಪರಿಸ್ಥಿತಿ ಎಂದು ಘೋಷಿಸಿದೆ.

ಮುಖ್ಯಾಂಶಗಳು

  • ಅನೇಕ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ನಿರ್ಧರಿಸಿದೆ. 70ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪಿಡುಗು ಹರಡಿಕೊಂಡಿದ್ದು, ಇದನ್ನು ‘ಅಸಾಧಾರಣ’ ಸನ್ನಿವೇಶ ಎಂದು ಡಬ್ಲ್ಯೂಎಚ್‌ಒ ಪರಿಗಣಿಸಿದೆ.

ಏಕೆ ಈ ನಿರ್ಧಾರ?

  • ‘ಹೊಸ ಮಾದರಿ ಪ್ರಸರಣಗಳ ಮೂಲಕ ಪಿಡುಗು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ. ಈ ಎಲ್ಲ ಕಾರಣಗಳಿಂದ, ಜಾಗತಿಕ ಮಂಕಿಪಾಕ್ಸ್ ಸೋಂಕನ್ನು ಅಂತರಾಷ್ಟ್ರೀಯ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಲು ನಿರ್ಧರಿಸಿದೆ.
  • ಮೇ ಬಳಿಕ ಸುಮಾರು 74 ದೇಶಗಳಲ್ಲಿ ಮಂಕಿಪಾಕ್ಸ್ ವರದಿಯಾಗಿದ್ದು, 16,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಐದು ಸಾವುಗಳು ವರದಿಯಾಗಿವೆ. ಇವೆಲ್ಲವೂ ಆಫ್ರಿಕಾ ದೇಶಗಳಲ್ಲಿ ಮಾತ್ರ ದೃಢಪಟ್ಟಿವೆ. ಮುಖ್ಯವಾಗಿ ನೈಜೀರಿಯಾ ಮತ್ತು ಕಾಂಗೋದಲ್ಲಿ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ.

ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ  ಮಾಡಿರುವ ಇತರೆ ರೋಗಗಳು

  • ವಿಶ್ವ ಆರೋಗ್ಯ ಸಂಸ್ಥೆಯು ಈ ಹಿಂದೆ ಕೋವಿಡ್ 19 ಸಾಂಕ್ರಾಮಿಕ, 2014ರ ಪಶ್ಚಿಮ ಆಫ್ರಿಕಾದ ಎಬೋಲಾ ವೈರಸ್ ಪಿಡುಗು, 2016ರ ಲ್ಯಾಟಿನ್ ಅಮೆರಿಕದ ಜಿಕಾ ವೈರಸ್ ಮತ್ತು ಪೋಲಿಯೋದಂತಹ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತ್ತು.