Published on: September 30, 2021
ಮನೆ ಮನೆಗೆ ಉದ್ಯೋಗ ಖಾತ್ರಿ
ಮನೆ ಮನೆಗೆ ಉದ್ಯೋಗ ಖಾತ್ರಿ
http://crookgolfclub.co.uk/1-does-hemp-oil-show-up-on-drug-test ಸುದ್ಧಿಯಲ್ಲಿ ಏಕಿದೆ? 2022-23ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಪ್ರತಿ ಮನೆಗೂ ನರೇಗಾ ಯೋಜನೆಯನ್ನು ತಲುಪಿಸುವ ಗುರಿಯೊಂದಿಗೆ ಮನೆ ಮನೆಗೆ ಉದ್ಯೋಗ ಖಾತರಿ ಯೋಜನೆ ಅಭಿಯಾನ ಶುರುವಾಗಲಿದೆ. ಅ. 1ರಿಂದ ಒಂದು ತಿಂಗಳ ಕಾಲ ಗ್ರಾಮದ ಪ್ರತಿ ಮನೆಗೂ ನರೇಗಾ ಯೋಜನೆ ಮಾಹಿತಿ ತಲುಪಲಿದೆ.
- ಅಭಿಯಾನದಲ್ಲಿ ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಗಂಡು ಹೆಣ್ಣಿಗೆ ಸಮಾನ ಕೂಲಿ, ಕೆಲಸದ ಪ್ರಮಾಣ ಪತ್ರ, ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯುಕ್ತಿಕ ಸೌಲಭ್ಯಗಳು, ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50 ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕು.
clindagel 1% 10g australia ಮನೆ ಬಾಗಿಲಿಗೆ ಸ್ಟೀಕರ್
- ಯೋಜನೆಯ ಮಾಹಿತಿಯ ಭಿತ್ತಿ ಪತ್ರವನ್ನು ಪ್ರತಿ ಮನೆಗೆ ವಿತರಿಸಿದ ಮೇಲೆ ನರೇಗಾ ಯೋಜನೆ ಬಗ್ಗೆ ಇಲಾಖೆ ಯೂಟ್ಯೂಬ್ ಮೂಲಕ ಆಪ್ ಲೋಡ್ ಮಾಡುವ ವಿಡಿಯೋ ವೀಕ್ಷಣೆಗೆ ಅಗತ್ಯವಾಗಿರುವ ಕ್ಯೂಆರ್ ಕೋಡ್ ಸ್ಟೀಕರ್ ಅನ್ನು ಪ್ರತಿಮನೆ ಬಾಗಿಲಿಗೆ ಅಂಟಿಸಲಿದ್ದಾರೆ. ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಭಾಗಿಯಾಬೇಕು, ಜಾಗೃತಿ ವಾಹನದ ಮೂಲಕ ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯ ತಿಳಿಸಬೇಕು
ಕಾಮಗಾರಿ ಬೇಡಿಕೆ ಪೆಟ್ಟಿಗೆ ಕಡ್ಡಾಯ
- ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಜಾಗೃತಿ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯ ಬಗ್ಗೆ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯನ್ನಿಟ್ಟು ಒಂದು ತಿಂಗಳ ಕಾಲ ಸ್ವೀಕರಿಸಬೇಕು.
- ಶೇ.65 ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಕಾಮಗಾರಿಗಳನ್ನು ಮೀಸಲಿಡಬೇಕು. ಕ್ರಿಯಾ ಯೋಜನೆಗಳು ಕಡ್ಡಾಯವಾಗಿ ಗ್ರಾಪಂ ಕ್ರಿಯಾ ಯೋಜನೆಯ ಭಾಗವಾಗಿರಬೇಕು. ಇತರೆ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವಂತಿಲ್ಲ ಎಂದು ಸ್ಪಷ್ಟ ಆದೇಶವನ್ನು ನೀಡಲಾಗಿದೆ.