Published on: January 12, 2023

ರಾಷ್ಟ್ರೀಯ ಯುವಜನೋತ್ಸವ

ರಾಷ್ಟ್ರೀಯ ಯುವಜನೋತ್ಸವ


ಸುದ್ದಿಯಲ್ಲಿ ಏಕಿದೆ? ಹುಬ್ಬಳ್ಳಿ ಧಾರವಾಡದಲ್ಲಿ ಜನವರಿ 12 ರಿಂದ 16ರ ತನಕ ನಡೆಯಲಿರುವ 26 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.


ಮುಖ್ಯಾಂಶಗಳು
• ಈ ಬಾರಿ ರಾಷ್ಟ್ರೀ ಯ ಯುವಜನೋತ್ಸವದ ಆತಿಥ್ಯವನ್ನು ಕರ್ನಾಟಕ ವಹಿಸಿಕೊಂಡಿದೆ.
• ಹುಬ್ಬಳ್ಳಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
• ಹಾವೇರಿಯ ‘ಏಲಕ್ಕಿ ಹಾರ’ ಮತ್ತು ‘ಏಲಕ್ಕಿ ಪೇಟ’ ಹಾಕಿ, ಕಸೂತಿ ಕಲೆಯ ಕೈಮಗ್ಗದ ಶಾಲು, ಬೀದರ್ನ ಬಿದರಿ ಕಲೆಯ ಸ್ವಾಮಿ ವಿವೇಕಾನಂದರ ಮೂರ್ತಿ ಹಾಗೂ ತೇಗದ ಚೌಕಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಾದ ರಾಷ್ಟ್ರಧ್ವ ಜವನ್ನು ಪ್ರಧಾನಿಗೆ ನೀಡಿ ಜಿಲ್ಲಾಡಳಿತ ಸನ್ಮಾನಿಸಲಿದೆ.
• ಎಲ್ಲ ರಾಜ್ಯಗಳ ಒಟ್ಟು 7,500ರಷ್ಟು ಪ್ರತಿನಿಧಿಗಳು ಈ ಯುವಜನೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
• 60 ಕ್ಕೂ ಹೆಚ್ಚು ಹೆಸರಾಂತ ತಜ್ಞರು ವಿಶೇಷ ಯುವ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜಿ20 ಮತ್ತು ವೈ20 ಕಾರ್ಯಕ್ರಮಗಳ ಕುರಿತು ಐದು ವಿಷಯಗಳ ಬಗ್ಗೆ ಸಮಗ್ರ ಚರ್ಚೆಗಳು ನಡೆಯಲಿವೆ.
ಚರ್ಚೆಯ ವಿಷಯಗಳು:
• “ಕೆಲಸದ ಭವಿಷ್ಯ, ಉದ್ಯಮ, ನಾವೀನ್ಯ ಮತ್ತು 21 ನೇ ಶತಮಾನದ ಕೌಶಲ್ಯಗಳು”
• “ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ”
• “ಶಾಂತಿ ನಿರ್ಮಾಣ ಮತ್ತು ಸಮನ್ವಯ”
• “ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಕರ ಭವಿಷ್ಯದ ಹಂಚಿಕೆ”
• “ಆರೋಗ್ಯ ಮತ್ತು ಯೋಗಕ್ಷೇಮ”
ವಿಷಯ (ಥೀಮ್’): ವಿಕಸಿತ್ ಯುವ-ವಿಕಸಿತ್ ಭಾರತ್’
ಉತ್ಸವದ ಲೋಗೋ
• ಬೆಂಗಳೂರಿನ ಇನ್ಬಂ ಅವರು ರೂಪಿಸಿದ ಚಂಪಿ ಚಿಕ್ಕ ಮ್ಯಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ 50 ಸಾವಿರ ರೂ. ಬಹುಮಾನ ದೊರೆಯಲಿದೆ. ಇದು ಆನೆಯ ವಿನ್ಯಾಸವನ್ನು ಹೊಂದಿದ್ದು, ಕರ್ನಾಟದಲ್ಲಿ ಅತಿ ಹೆಚ್ಚಿರುವ ಆನೆಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಗುರಿ, ವಿಶ್ವ ಶಾಂತಿಯ ಜೊತೆಗೆ ಕ್ರೀ ಡೆ, ಸ್ಟಾರ್ಟಪ್, ನಾವಿನ್ಯತೆ, ಶಿಕ್ಷಣ ಸೇರಿಂದ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಯುವ ಮತ್ತು ಆಧುನಿಕ ಭಾರತವನ್ನು ಬಿಂಬಿಸುತ್ತದೆ.
ಉದ್ದೇಶ: ಯುವ ಜನೋತ್ಸವ ಕಾರ್ಯಕ್ರಮವು ದೇಶದ ಯುವಜನಾಂಗವನ್ನು ಪ್ರೇರೇಪಿಸುವುದು ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ಯುವಕರನ್ನು ಏಕೀಕರಿಸವುದು.
ಈ ಉತ್ಸವದ ವಿಶೇಷತೆಗಳು :
• ಯುವಜನೋತ್ಸವದ ಅಂಗವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಇದೇ ಪ್ರಥಮಬಾರಿಗೆ ಸ್ಕೂಬಾಡೈವಿಂಗ್ ಮತ್ತು ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಸಹಯೋಗದಲ್ಲಿ ಶಿಲಾರೋಹಣ ಹಾಗೂ ಜಕ್ಕೂರ ರಾಷ್ಟ್ರೀಯ ವೈಮಾನಿಕ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ವೈಮಾನಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.
• ಸಾಹಸ ಕ್ರೀಡೆಗಳ ಮಳಿಗೆ ಸ್ಥಾಪನೆ ಯುವಜನೋತ್ಸವದಲ್ಲಿ ಭಾಗವಹಿಸುವ ಯುವ ಸಮೂಹಕ್ಕೆ ಮತ್ತು ಯುವಜನೋತ್ಸವಕ್ಕೆ ಸಾಕ್ಷಿಯಾಗಲು ಆಗಮಿಸುವ ಸಾರ್ವಜನಿಕರಿಗೆ ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಮತ್ತು ಜಕ್ಕೂರಿನ ರಾಷ್ಟ್ರೀಯ ವೈಮಾನಿಕ ತರಬೇತಿ ಶಾಲೆ ಹಾಗೂ ಭಾರತೀಯ ಸೈನ್ಯದ ಶಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಮಳಿಗೆಗಳನ್ನು ಸ್ಥಾಪಿಸಲಿದೆ. ಈ ಎಲ್ಲ ಪ್ರಯತ್ನಗಳನ್ನು ರಾಷ್ಟೀಯ ಯುವಜನೋತ್ಸವದಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದೆ.
ಹಿನ್ನೆಲೆ
• ಸ್ವಾಮಿ ವಿವೇಕಾನಂದರ ಜನ್ಮದಿನ ಜನವರಿ 12ರಂದು ಅವರ ನೆನಪಿಗಾಗಿ ಪ್ರತಿ ವರ್ಷ ರಾಷ್ಟ್ರೀ ಯ ಯುವಜನೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತದೆ. ಇದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನವಾಗಿದೆ.
ನಿಮಗಿದು ತಿಳಿದಿರಲಿ
• ಮೊದಲ ರಾಷ್ಟ್ರೀಯ ಯುವಜನೋತ್ಸವ :ದೇಶದಲ್ಲಿ 1995ರಲ್ಲಿ ಆಯೋಜನೆಯಾಗಿತ್ತು. ಅಂದು ನ್ಯಾಷನಲ್‌ ಇಂಟೆಗ್ರೇಶನ್‌ ಕ್ಯಾಂಪ್‌ನ ಅಧೀನ ಬಹುದೊಡ್ಡ ಚಟುವಟಿಕೆಯಾಗಿ ಇದು ದಾಖಲಾಗಿತ್ತು.
• 25ನೇ ರಾಷ್ಟ್ರೀಯ ಯುವಜನೋತ್ಸವದ ಆತಿಥ್ಯವನ್ನು ಪುದುಚೇರಿ ನಿರ್ವಹಿಸಿತ್ತು.
• 2012ರಲ್ಲಿ ಮಂಗಳೂರು ಹಾಗೂ ಇದೀಗ 2023ರಲ್ಲಿ ಧಾರವಾಡ ಆಯ್ಕೆ ಮೂಲಕ ರಾಜ್ಯ ಎರಡನೇ ಬಾರಿಗೆ ಯುವಜನೋತ್ಸವ ಆಯೋಜಿಸುತ್ತಿದೆ.