Published on: December 27, 2021

ರೋಗ್ ಪ್ಲ್ಯಾನೆಟ್

ರೋಗ್ ಪ್ಲ್ಯಾನೆಟ್

ಸುದ್ಧಿಯಲ್ಲಿ ಏಕಿದೆ ? ಖಗೋಳಶಾಸ್ತ್ರಜ್ಞರ ತಂಡವೊಂದು ಸುಮಾರು 70 ಹೊಸ ರೋಗ್ ಪ್ಲ್ಯಾನೆಟ್‌ಗಳ ಗುಚ್ಛವೊಂದನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೋಗ್ ಪ್ಲ್ಯಾನೆಟ್‌ಗಳ ಗುಚ್ಛ ಭೂಮಿಯಿಂದ ಸುಮಾರು 420 ಜ್ಯೋತಿರ್ವರ್ಷ ದೂರದಲ್ಲಿದ್ದು, ಯಾವ ನಕ್ಷತ್ರಗಳ ಗುರುತ್ವ ಬಲಕ್ಕೂ ಒಳಪಡದೇ ಸ್ವತಂತ್ರ್ಯವಾಗಿ ಚಲಿಸುತ್ತಿವೆ.

ರೋಗ್ ಪ್ಲ್ಯಾನೆಟ್‌ಗಳು ಎಂದರೇನು ?

  • ಯಾವುದೇ ನಕ್ಷತ್ರದ ಗುರುತ್ವ ಬಲಕ್ಕೆ ಒಳಪಡದೇ ವಿಶ್ವದಲ್ಲಿ ಸ್ವತಂತ್ರ್ಯವಾಗಿ ಚಲಿಸುವ ಗ್ರಹಗಳನ್ನು ರೋಗ್ ಪ್ಲ್ಯಾನೆಟ್‌ಗಳು ಎಂದು ಕರೆಯಲಾಗುತ್ತದೆ.
  • ನಕ್ಷತ್ರಗಳು ಮತ್ತು ಇತರ ಸಾಮಾನ್ಯ ಗ್ರಹಗಳು ಜನ್ಮ ತಳೆಯುವಂತೆಯೇ ರೋಗ್ ಪ್ಲ್ಯಾನೆಟ್‌ಗಳೂ ಕೂಡ ಜನ್ಮ ತಳೆಯುತ್ತವೆ. ಆದರೆ ಕಾಲಾಂತರದಲ್ಲಿ ತನ್ನ ನಕ್ಷತ್ರದ ಗುರುತ್ವ ಬಲದಿಂದ ದೂರ ಸರಿಯುವ ಈ ಗ್ರಹಗಳು, ಸ್ವತಂತ್ರ್ಯವಾಗಿ ಬ್ರಹ್ಮಾಂಡದಲ್ಲಿ ಚಲಿಸಲಾರಂಭಿಸುತ್ತವೆ. ಇದೇ ಕಾರಣಕ್ಕೆ ಇವುಗಳನ್ನು ಅನಾಥ ಗ್ರಹಗಳು ಎಂತಲೂ ಕರೆಯುತ್ತಾರೆ.

ಮುಖ್ಯಾಂಶಗಳು

  • ಫ್ರಾನ್ಸ್‌ನ ಲ್ಯಾಬೊರೇಟೊರ್ ಡಿ’ಆಸ್ಟ್ರೋಫಿಸಿಕ್ ಡಿ ಬೋರ್ಡೆಕ್ಸ್ ಮತ್ತು ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ
  • ನೂರಿಯಾ ಮಿರೆಟ್-ರೋಯಿಗ್ ನೇತೃತ್ವದ ತಂಡ, ಈ 70 ರೋಗ್ ಪ್ಲ್ಯಾನೆಟ್‌ಗಳ ಗುಚ್ಛವನ್ನು ಪತ್ತೆ ಹಚ್ಚಿದೆ.
  • ಚಿಲಿಯಲ್ಲಿನ ಯುರೋಪಿಯನ್ ಬಾಹ್ಯಾಕಾಶ ವೀಕ್ಷಣಾಲಯದ ಅತಿ ದೊಡ್ಡ ದೂರದರ್ಶಕ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಯಾ ಉಪಗ್ರಹ ಸೇರಿದಂತೆ ಸಾವಿರಾರು ಚಿತ್ರಗಳನ್ನು ಸಂಯೋಜಿಸುವ ಮೂಲಕ ಈ 70 ರೋಗ್ ಪ್ಲ್ಯಾನೆಟ್‌ಗಳನ್ನು ಕಂಡುಹಿಡಿಯಲಾಗಿದೆ.