Published on: March 16, 2023

ವಿಶ್ವ ವಾಯು ಗುಣಮಟ್ಟ ವರದಿ

ವಿಶ್ವ ವಾಯು ಗುಣಮಟ್ಟ ವರದಿ

http://justrpg.com/games/reviews/pc/page/8 ಸುದ್ದಿಯಲ್ಲಿ ಏಕಿದೆ? ಭಾರತವು 2022ರಲ್ಲಿ ಅತಿ ಹೆಚ್ಚು ಮಾಲಿನ್ಯ ಹೊಂದಿರುವ ವಿಶ್ವದ ಎಂಟನೇ ದೇಶವಾಗಿದ್ದು, 50 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ 39 ನಗರಗಳು ಸ್ಥಾನ ಪಡೆದಿವೆ.

ಮುಖ್ಯಾಂಶಗಳು

  • ವಿಶ್ವದ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತವು 5 ನೇ ಸ್ಥಾನದಿಂದ 8 ನೇ ಸ್ಥಾನಕ್ಕೆ ಇಳಿದಿದೆ.
  • ಸ್ವಿಟ್ಜರ್ಲ್ಯಾಂಡ್ ಮೂಲದ ಐಕ್ಯುಏರ್ ಸಂಸ್ಥೆ ಬಿಡುಗಡೆ ಮಾಡಿದ ‘ವಿಶ್ವ ವಾಯು ಗುಣಮಟ್ಟ ವರದಿ’ಯಲ್ಲಿ ಮಾಲಿನ್ಯ ಮಾಪಕ ‘ಪಿಎಂ 2.5’ ಮಟ್ಟವು ಸ್ವಲ್ಪ ಕುಸಿದಿದೆ.
  • ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಈ ಪಟ್ಟಿ ಸಿದ್ಧಪಡಿಸಿದ್ದಾರೆ.
  • 30,000 ಕ್ಕೂ ಹೆಚ್ಚು ಭೂ-ಆಧಾರಿತ ಮಾನದಂಡಗಳಿಂದ 131 ದೇಶಗಳ ಡೇಟಾವನ್ನು ತೆಗೆದುಕೊಳ್ಳಲಾಗಿದೆ. 7,300 ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿರುವ ಪಟ್ಟಿಯ ಅಗ್ರಸ್ಥಾನದಲ್ಲಿ ಭಾರತೀಯ ನಗರಗಳು ಪ್ರಾಬಲ್ಯ ಹೊಂದಿವೆ.
  • ಭಾರತದಲ್ಲಿನ ಗಾಳಿಯು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು ಅಪಾಯದಲ್ಲಿದೆ.
  • ವರದಿಗಳ ಪ್ರಕಾರ ಭಾರತದಲ್ಲಿನ ಸಾರಿಗೆ ವಲಯವು PM2.5 ಮಾಲಿನ್ಯದ 20-35% ರಷ್ಟು ಮಾಲಿನ್ಯವನ್ನು ಉಂಟುಮಾಡುತ್ತದೆ. ಈ ರೀತಿಯ ಮಾಲಿನ್ಯ ಉಂಟು ಮಾಡುವ ಮೂಲಗಳಲ್ಲಿ ಕಲ್ಲಿದ್ದಲು-ಉರಿದ ವಿದ್ಯುತ್ ಸ್ಥಾವರಗಳು, ಕೈಗಾರಿಕಾ ಘಟಕಗಳು ಮತ್ತು ಜೀವರಾಶಿ ಸುಡುವಿಕೆಗಳು ಕೂಡ ಸೇರಿವೆ.
  • ಮಾರ್ಗಸೂಚಿ: ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳ ಪ್ರಕಾರ, ವಾರ್ಷಿಕ ಸರಾಸರಿ PM2.5 ಮಟ್ಟವು 5 µg/m3 ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದರೆ 2022 ರಲ್ಲಿ ಭಾರತದ ವಾರ್ಷಿಕ ಸರಾಸರಿ PM2.5 ಮಟ್ಟವು 53.3 μg/m3 ಆಗಿತ್ತು, ಇದು ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು ಮತ್ತು 2021 ರ ಸರಾಸರಿ 53.3 μg/m3ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
  • ಆಸ್ಟ್ರೇಲಿಯಾ, ಎಸ್ಟೋನಿಯಾ, ಫಿನ್ಲ್ಯಾಂಡ್, ಗ್ರೆನಡಾ, ಐಸ್ಲ್ಯಾಂಡ್ ಮತ್ತುನ್ಯೂಜಿಲ್ಯಾಂಡ್ ಕೇವಲ ಆರು ದೇಶಗಳು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪೂರೈಸಿದ ದೇಶಗಳಾಗಿವೆ

ವರದಿಯ ಪ್ರಕಾರ ಕಲುಷಿತ ನಗರಗಳು

  • ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್, ಬಾಂಗ್ಲಾದೇಶ, ಬುರ್ಕಿನಾ ಫಾಸೊ ಮತ್ತುಕುವೈತ್ ದೇಶಗಳು ಕಳೆದ ವರ್ಷದ ಮೊದಲ ಏಳು ಅತ್ಯಂತ ಕಲುಷಿತ ದೇಶಗಳಾಗಿವೆ.
  • ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಹೊಟಾನ್ ಮೊದಲ ಎರಡು ಅತ್ಯಂತ ಕಲುಷಿತ ನಗರಗಳಾಗಿದ್ದು, ರಾಜಸ್ಥಾನದ ಭಿವಾಡಿ ಮತ್ತು ದೆಹಲಿ ನಂತರದ ಸ್ಥಾನದಲ್ಲಿದೆ.
  • ದೆಹಲಿಯ ‘ಪಿಎಂ 2.5’ ಮಟ್ಟವು ಸುರಕ್ಷಿತ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚು ಅಪಾಯದಲ್ಲಿದೆ.
  • ಅಗ್ರ 10 ಕಲುಷಿತ ನಗರಗಳಲ್ಲಿ ಭಾರತದ 6 ನಗರಗಳಿವೆ. ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಯನ್ನು ‘ಗ್ರೇಟ್’ ದೆಹಲಿ ಮತ್ತು ನವದೆಹಲಿಯ ಎಂದು ವರ್ಗೀಕರಿಸಲಾಗಿದ್ದು, ಎರಡು ನಗರಗಳೂ ಕಲುಷಿತ ನಗರವೆಂಬ ಅಪಖ್ಯಾತಿಗೆ ಪಾತ್ರವಾಗಿವೆ.
  • ದೆಹಲಿಯ ಪಕ್ಕದ ಪಟ್ಟಣಗಳಾದ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್ಗಳು ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡಿವೆ.

ಕರ್ನಾಟಕ ನಗರಗಳ  ಸ್ಥಿತಿ

  • ಬೆಳಗಾವಿ ಕರ್ನಾಟಕದ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿದ ನಗರ ಎನಿಸಿಕೊಂಡಿದೆ. ಕಲಬುರಗಿ 3, ಧಾರವಾಡ 5, ಹುಬ್ಬಳ್ಳಿ 6 ಮತ್ತು ಬೆಂಗಳೂರು 8 ನೇ ಸ್ಥಾನ ಪಡೆದ
  • ಇಡೀ ವಿಶ್ವದಲ್ಲಿಮಲಿನ ನಗರದ ಪಟ್ಟಿಯಲ್ಲಿ ಬೆಳಗಾವಿಗೆ 159, ಖಾನಾಪುರ 220, ಕಲಬುರ್ಗಿ 288, ನೆಲಮಂಗಲ 372, ಧಾರವಾಡ 408, ಹುಬ್ಬಳ್ಳಿ 427, ಚಿಕ್ಕಬಳ್ಳಾಪುರ 431, ಬೆಂಗಳೂರು 443, ರಾಯಚೂರು 450 ಸ್ಥಾನ ಪಡೆದುಕೊಂಡಿದೆ.